Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

ಮಾನವ ಅಭಿವೃದ್ಧಿ ಸೂಚ್ಯಂಕ: ಕಳಪೆ ಸಾಧನೆ

ವಿಶ್ವಸಂಸ್ಥೆಯ 2020ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶ 129 ರಿಂದ 130ನೇ ಸ್ಥಾನಕ್ಕೆ ಕುಸಿದಿದೆ. ಮಾನವ ಅಭಿವೃದ್ಧಿ ಸೂಚ್ಯಂಕದ ಗರಿಷ್ಠ ಅಂಕ ೧. ದೇಶ 0.645 ಅಂಕ ಪಡೆದಿದೆ. 2019ರಲ್ಲಿ 0.647 ಅಂಕ ಪಡೆದಿತ್ತು. ದೇಶ ಮಧ್ಯಮ ಅಭಿವೃದ್ಧಿಯ ದೇಶಗಳ ವರ್ಗದಲ್ಲಿದೆ. 2018ರಲ್ಲಿ 0.431 ಅಂಕ ಪಡೆದಿದ್ದರಿಂದ ಕಡಿಮೆ ಅಭಿವೃದ್ಧಿ ವಿಭಾಗದಲ್ಲಿ ಗುರುತಿಸಿಕೊಂಡಿತ್ತು. ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ವರದಿಯಲ್ಲಿ ಈ ಮಾಹಿತಿ ಇದೆ. Courtesyg: Google (photo)

ಅಡುಗೆ ಅನಿಲ ದರ ಮತ್ತೆ ಏರಿಕೆ

ಅಡುಗೆ ಅನಿಲ(ಎಲ್‌ಪಿಜಿ)ದ ದರ ಪ್ರತಿ ಸಿಲಿಂಡರ್‌ಗೆ 50 ರೂ. ಏರಿಕೆಯಾಗಿದೆ. ಇದು ಹಾಲಿ ತಿಂಗಳಿನಲ್ಲಿ ನಡೆದ ಎರಡನೆಯ ದರ ಏರಿಕೆ. 14.2 ಕೆಜಿ ಸಬ್ಸಿಡಿರಹಿತ ಸಿಲಿಂಡರ್ ದರ 644 ರಿಂದ 694 ರೂ.ಗೆ ಏರಿಕೆಯಾಗಿದೆ. ಡಿಸೆಂಬರ್ 1ರಂದು ದರ 50 ರೂ. ಹೆಚ್ಚಳ ಆಗಿತ್ತು. ೫ ಕೆಜಿ ಸಿಲಿಂಡರ್ 18 ರೂ. ಹಾಗೂ 19 ಕೆಜಿ ಸಿಲಿಂಡರ್ ದರ 36.50 ರೂ. ರಷ್ಟು ಹೆಚ್ಚಾಗಿತ್ತು. ವಿಮಾನ ಇಂಧನ ದರ ಶೇ.೬.೩ರಷ್ಟು ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಪ್ರತಿ ಕಿಲೊ ಲೀಟರಿಗೆ […]

ಚಿನ್ನ, ಬೆಳ್ಳಿ ದರ ಏರಿಕೆ

ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಚಿನ್ನ, ಬೆಳ್ಳಿ ದರ ಹೆಚ್ಚಳಗೊಂಡಿದೆ. 10 ಗ್ರಾಂ ಚಿನ್ನದ ದರ 215ರೂ. ಹೆಚ್ಚಾಗಿದ್ದು, 49,059 ರೂ.ಗೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆಜಿಗೆ 1,185ರೂ. ಏರಿಕೆಯಾಗಿದ್ದು, 64,822 ರೂ. ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ದರ ಏರಿಕೆ ಆಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ. Courtesyg: Google (photo)

ಷೇರು ಮಾರುಕಟ್ಟೆ ಸೂಚ್ಯಂಕದ ನಾಗಾಲೋಟ

ಷೇರು ಮಾರುಕಟ್ಟೆ ಸೂಚ್ಯಂಕಗಳು ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆ ಮಾತ್ರವಲ್ಲದೆ, ಮುಂಬೈ ಷೇರು ಪೇಟೆಯಲ್ಲಿ ಕೂಡ ಭರ್ಜರಿ ವಹಿವಾಟು ನಡೆಯಿತು. ಬಿಎಸ್‌ಇ ಸೆನ್ಸೆಕ್ಸ್ 403 ಅಂಶ ಏರಿಕೆ ಕಂಡು, ದಿನದ ಅಂತ್ಯಕ್ಕೆ 46,666 ಹಾಗೂ ನಿಫ್ಟಿ ಸೂಚ್ಯಂಕ 114 ಅಂಶ ಜಿಗಿದು, 13,682ರಲ್ಲಿ ಕೊನೆಗೊಂಡಿತು. ಬಿಎಸ್‌ಇ ಮತ್ತು ನಿಫ್ಟಿ ಗುರುವಾರದ ಕೊನೆಯಲ್ಲಿ ದಾಖಲೆಯ ಮಟ್ಟ ತಲುಪಿವೆ. ಎಚ್‌ಡಿಎಫ್‌ಸಿ, ಒಎನ್‌ಜಿಸಿ, ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಟೈಟಾನ್, ಟಿಸಿಎಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು […]

EV from VOGO,Yulu

Two-wheeler shared mobility startups are gearing up to introduce new variants of electric vehicles(EV) to their fleets to diversify product offerings, explore new use cases, and add revenue streams to beat the adverse impact of the pandemic on their businesses. Vogo, a two-wheeler shared mobility startup, plans to launch low speed EV variants, while Yulu, […]

ಡಾಕ್‌ಪೇ ಆ್ಯಪ್‌ಗೆ ಚಾಲನೆ

ಅಂಚೆ ಕಚೇರಿ ಮತ್ತು ಅಂಚೆ ಕಚೇರಿ ಪೇಮೆಂಟ್ಸ್ ಬ್ಯಾಂಕ್‌ನ ಖಾತೆದಾರರರು ಇನ್ನು ಮುಂದೆ ಬ್ಯಾಂಕಿಗ್ ಸೇವೆಗಳನ್ನು ಡಾಕ್‌ಪೇ ಆ್ಯಪ್ ಮೂಲಕ ಪಡೆಯಬಹುದು. ಆ್ಯಪ್‌ಗೆ ಕೇಂದ್ರ ಐ ಟಿ ಸಚಿವ ರವಿಶಂಕರ್ ಪ್ರಸಾದ್ ಚಾಲನೆ ನೀಡಿದ್ದಾರೆ. ಹಣ ರವಾನೆ, ಕ್ಯೂಆರ್ ಕೋಡ್ ಬಳಸಿ ಹಣ ಪಾವತಿ ಮತ್ತಿತರ ಸೇವೆಗಳನ್ನು ಹಾಗೂ ಅಂಚೆ ಕಚೇರಿಯ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಅಪ್ ಒದಗಿಸುತ್ತದೆ. ಅಂಚೆ ಇಲಾಖೆ, ರಾಜ್ಯ ಸರ್ಕಾರ ಹಾಗೂ ಇ-ಕಾಮರ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರಕುಶಲ ವಸ್ತುಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದು. […]

ಜನಸೇವಾ ಕೇಂದ್ರಕ್ಕೆ ಚಾಲನೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಒಂದೇ ಸೂರಿನಡಿ ಪಡೆಯಲು ಅನುಕೂಲವಾಗುವಂತೆ ಅಂಚೆ ಕಚೇರಿಯಲ್ಲಿ ಜನಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ  ಕೇಂದ್ರಗಳಲ್ಲಿ ಪಾನ್ ಕಾರ್ಡ್, ಪಾsಸ್‌ಪೋರ್ಟ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ, ಜನನ ಮತ್ತು ಮರಣ ಪ್ರಮಾಣಪತ್ರ, ಆಯುಷ್ಮಾನ್ ಭಾರತ ಯೋಜನೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ, ರಾಷ್ಟ್ರೀಯ ಪಿಂಚಣಿ ಯೋಜನೆ, ವಿಮಾನ ಟಿಕೆಟ್, ಬಸ್ ಟಿಕೆಟ್, ಮೊಬೈಲ್ ಮತ್ತು ಡಿಟಿಎಚ್ ಬಿಲ್ ಪಾವತಿ, ಜೀವ ವಿಮೆ ಕಂತು ಪಾವತಿ, ಜಿಎಸ್‌ಟಿ […]

ಎಫ್‌ಡಿಐ ಹೆಚ್ಚಳ

ವಿದೇಶಿ ಹೂಡಿಕೆದಾರರ ಪರ ನೀತಿಗಳಿಂದಾಗಿ ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚು ತ್ತಲೇ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಎಫ್‌ಡಿಐ ಪ್ರಮಾಣ ಶೇ.13 ರಷ್ಟು ಹೆಚ್ಚಾಗಿದ್ದು, 2.96 ಲಕ್ಷ ಕೋಟಿ ರೂ. ಆಗಿದೆ. ಕೋವಿಡ್ ಗರಿಷ್ಠ ಮಟ್ಟದಲ್ಲಿ ಇದ್ದಾಗಲೂ ಎಫ್‌ಡಿಐ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ  ಎಂದು ಸಿಐಐ ಆಯೋಜಿಸಿದ್ದ ಪಾಲುದಾರಿಕೆ ಶೃಂಗ 2020ರಲ್ಲಿ ತಿಳಿಸಿದ್ದಾರೆ. ದೂರಸಂಪರ್ಕ, ಮಾಧ್ಯಮ, ಔಷಧ ಮತ್ತು ವಿಮೆಯಂತಹ ವಲಯಗಳಲ್ಲಿ ವಿದೇಶಿ […]

Back To Top