ವೊಡಾಫೋನ್ ಐಡಿಯಾ ಸಂಕಷ್ಟದಲ್ಲಿ
ವೊಡಾಫೋನ್ ಐಡಿಯಾ(ವಿಐ) ಕಂಪನಿ ಚಂದಾದಾರರನ್ನು ಕಳೆದುಕೊಳ್ಳುತ್ತಿದ್ದು, ನೆಟ್‌ವರ್ಕ್ ಗುಣಮಟ್ಟ ವರ್ಧನೆಗೆ ಹೆಚ್ಚು ಹೂಡಿಕೆ ಮಾಡಲು ಆಗುತ್ತಿಲ್ಲ. ಜತೆಗೆ, ಕಂಪನಿ ಸಾಲದ ಹೊರೆ ಯಿಂದ ಬಳಲಿದ್ದು, ಉಳಿದ ಕಂಪನಿಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿ ೭,೨೧೮ ಕೋಟಿ ರೂ. ನಷ್ಟ ಅನುಭವಿಸಿದೆ. ೧,೧೫,೯೪೦ ಕೋಟಿ ರೂ. ಸಾಲ ಇದೆ. ವೊಡಾಫೋನ್ ಐಡಿಯಾ ಹೊಂದಾಣಿಕೆ ಮಾಡಿದ ವರಮಾನ(ಎಜಿಆರ್)ದ ಒಟ್ಟು ಬಾಕಿ ೬೫,೪೪೦ ಕೋಟಿ ರೂ. ದೂರಸಂಪರ್ಕ ಇಲಾಖೆಗೆ ನೀಡಬೇಕಿದೆ. ಈ ಬಾಕಿ […]
ಕಿಂಬರ‍್ಲಿ ವಜ್ರದ ಗಣಿ ಸ್ಥಗಿತ
ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಲ್ಲಿದ್ದ ಆರ್ಗೈಲ್ ಎನ್ನುವ ಹೆಸರಿನ ವಿಶ್ವದ ಅತ್ಯಂತ ದೊಡ್ಡ ನಸುಗೆಂಪು ಬಣ್ಣದ ವಜ್ರ(ಪಿಂಕ್ ಡೈಮಂಡ್)ದ ಗಣಿಯನ್ನು ಮುಚ್ಚಲಾಗಿದೆ ಎಂದು ಪ್ರವರ್ತಕ ಕಂಪನಿ ರಿಯೊ ಟಿಂಟೊ ಹೇಳಿದೆ. ವಜ್ರದ ಹರಳುಗಳ ಸಂಪನ್ಮೂಲ ಖಾಲಿಯಾಗಿರುವುದು ಗಣಿಯನ್ನು ಮುಚ್ಚಲು ಕಾರಣ. ವಿಶ್ವದಲ್ಲಿ ಉತ್ಪತ್ತಿಯಾಗುತ್ತಿರುವ ನಸುಗೆಂಪು ಬಣ್ಣದ ವಜ್ರದ ಶೇ.೯೦ ರಷ್ಟನ್ನು ಆರ್ಗೈಲ್ ಗಣಿಯಿಂದ ತೆಗೆಯಲಾಗುತ್ತಿತ್ತು. ೧೯೭೯ರಲ್ಲಿ ಇಲ್ಲಿ ವಜ್ರದ ಪದರ ಪತ್ತೆಯಾಗಿತ್ತು. ನಾಲ್ಕು ವರ್ಷದ ಬಳಿಕ ಕಂಪನಿ ಇಲ್ಲಿ ಉತ್ಖನನ ಆರಂಭಿಸಿತ್ತು. ಈವರೆಗೆ ೮೬.೫೦ ಕೋಟಿ ಕ್ಯಾರೆಟ್ […]
ಭೂ ಸುಧಾರಣೆ ಸುಗ್ರೀವಾಜ್ಞೆ ಗೆ ಅಂಕಿತ
ಕರ್ನಾಟಕ ಭೂ ಸುಧಾರಣೆ (ಎರಡನೇ ತಿದ್ದುಪಡಿ) ಸುಗ್ರೀವಾಜ್ಞೆ-೨೦೨೦ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕೃಷಿ ಭೂಮಿಯ ಗರಿಷ್ಠ ಮಿತಿಯನ್ನು೧೦೮ ಎಕರೆಗೆ ಇಳಿಸುವುದಾಗಿ ಹೇಳಿದ್ದ ಕಂದಾಯ ಸಚಿವರ ಭರವಸೆ ಸುಗ್ರೀವಾಜ್ಞೆಯಲ್ಲಿ ಉಲ್ಲೇಖವಾಗಿಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆ೧೯೬೧ರ ಕಲಂ ೬೩ರ ಅಡಿ ಕೃಷಿ ಭೂಮಿ ಹೊಂದುವ ಗರಿಷ್ಠ ಮಿತಿಯನ್ನು೧೦೮ ಎಕರೆಗೆ ಇಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದರು. ಅದರ ಪ್ರಸ್ತಾಪ ಸುಗ್ರೀವಾಜ್ಞೆಯಲ್ಲಿ ಇಲ್ಲ. ಕಳೆದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಗೆ ವಿಧಾನಸಭೆ ಸಮ್ಮತಿ ನೀಡಿದ್ದರೂ, ವಿಧಾನಪರಿಷತ್ತಿನಲ್ಲಿ ಮಂಡನೆಯಾಗಿರಲಿಲ್ಲ. […]
ಶೀಘ್ರವೇ ಇನ್ನೊಂದು ಆರ್ಥಿಕ ಪ್ಯಾಕೇಜ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶೀಘ್ರದಲ್ಲೇ ಇನ್ನೊಂದು ಸುತ್ತಿನ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಿಸಲಿದ್ದಾರೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಮಂಗಳವಾರ ತಿಳಿಸಿದ್ದಾರೆ. ಅರ್ಥ ವ್ಯವಸ್ಥೆಯ ವಿವಿಧ ಭಾಗಗಳ ಮನವಿ/ಸಲಹೆಗಳನ್ನು ಹಣಕಾಸು ಸಚಿವಾಲಯ ಪರಿಶೀಲಿಸುತ್ತಿದೆ. ಹೊಸ ಪ್ಯಾಕೇಜ್ ಶೀಘ್ರವೇ ಘೋಷಣೆ ಆಗಲಿದೆ. ಹಣಕಾಸು ಸಚಿವೆ ಈ ಬಗ್ಗೆ ವಿವರ ನೀಡಲಿದ್ದಾರೆ ಎಂದು ಬಜಾಜ್ ಹೇಳಿದರು. ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಹಾಗೂ ಬಂಡವಾಳ ವೆಚ್ಚ ಹೆಚ್ಚು ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿತ್ತು. […]
Automakers agree to offer discount
The automobile industry has agreed to a government proposal to give a discount of 1 % on purchasing new vehicles if, correspondingly, an old one is scrapped. The government wants to incentivise scrapping old vehicles because of apprehensions of a backlash from the transporter lobby.Union Minister of Road Transport and Highways Nitin Gadkari had a […]
Clean targets: Industry wants gas pricing freedom
In early October, the government came up with a new model offering marketing and pricing freedom to natural gas producers in India, clearing a standardised e-bidding process for price discovery from new production areas and high-pressure, high-temperature fields. This was a significant modification of the administered pricing mechanism that has prevailed in the gas market […]
Markets jump on banking stocks gain
Equities rallied on Tuesday for the second straight session ahead of the US Federal Reserve meeting and on strong global cues. The rally in the last two sessions has been led by the banking stocks after the outlook improved for their business. Nifty rose as much as 3.17% on Tuesday. In the last two sessions […]
ಈರುಳ್ಳಿ ಬೆಲೆ ಡೋಲಾಯಮಾನ
ಈರುಳ್ಳಿ ಬೆಲೆ ಗಗನ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರತೆಯನ್ನು ನೀಗಿಸಲು ಹಾಗೂ ಬೆಲೆ ನಿಯಂತ್ರಣಕ್ಕೆ 25 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(ನಾ¥sÃಡ್) ಕೂಡ ಈರುಳ್ಳಿ ಆಮದಿಗೆ ಒಪ್ಪಿಗೆ ನೀಡಿದೆ. ಜತೆಗೆ, ಆಲೂಗಡ್ಡೆಯನ್ನೂ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಲೂಗಡ್ಡೆ ಮೇಲಿನ ಕಸ್ಟಂಸ್ ಸುಂಕವನ್ನು ಜನವರಿವರೆಗೆ ಅನ್ವಯ ಆಗುವಂತೆ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ. 30 ಸಾವಿರ ಟನ್‌ಗಳಷ್ಟು ಆಲೂಗಡ್ಡೆ ಭೂತಾನ್‌ನಿಂದ ಆಗಮಿಸÀಲಿದೆ. ದೇಶದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ […]
ರಿಲಯನ್ಸ್ ಷೇರು ಮೌಲ್ಯ ಇಳಿಕೆ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್)ನ ನಿವ್ವಳ ಲಾಭ ಎರಡನೇ ತ್ರೈಮಾಸಿಕದಲ್ಲಿ ಶೇ.15ರಷ್ಟು ಕುಸಿದ ಹಿನ್ನೆಲೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.9ರಷ್ಟು ಕುಸಿತ ಕಂಡಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 1.19 ಲಕ್ಷ ಕೋಟಿ ರೂ. ಕರಗಿದೆ. ಬಿಎಸ್‌ಇನಲ್ಲಿ ಶೇ.8.62ರಷ್ಟು ಇಳಿಕೆ ಕಂಡ ಪ್ರತಿ ಷೇರಿನ ಬೆಲೆ 1,877.30 ರೂ. ಹಾಗೂ ಎನ್‌ಎಸ್‌ಇನಲ್ಲಿ ಶೇ.೮.೬೧ರಷ್ಟು ಇಳಿಕೆಯಾಗಿ ಪ್ರತಿ ಷೇರಿನ ಬೆಲೆ 1,877.45 ರೂ.ಗೆ ತಲುಪಿದೆ. Courtesyg: Google (photo)