PSLV-C49 to be launched today
India’s Polar Satellite Launch Vehicle in its 51st mission (PSLV-C49) will launch EOS-01 as primary satellite along with nine international customer satellites from Satish Dhawan Space Centre (SDSC) SHAR, Sriharikota. The launch is tentatively scheduled at 15.02 Hrs IST on November 7, 2020, subject to weather conditions, the space agency said. EOS-01 is an earth […]
ಪಟಾಕಿ ನಿಷೇಧ:ಕಾಯ್ದಿಟ್ಟ ತೀರ್ಪು
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಪಟಾಕಿ ನಿಷೇಧಿಸುವಂತೆ ಕೋರಿರುವ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ), ತೀರ್ಪನ್ನು ಕಾಯ್ದಿರಿಸಿದೆ. ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಆದರ್ಶಕುಮಾರ್ ಗೋಯಲ್ ನೇತೃತ್ವದ ಹಸಿರು ಪೀಠ, ನ.೯ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತು. ವಾಯುಮಾಲಿನ್ಯದಿಂದ ಕೋವಿಡ್ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಪಟಾಕಿ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಲಿದೆ ಎಂದು ನ್ಯಾಯಮಂಡಳಿ ನೇಮಿಸಿರುವ ಆಮಿಕಸ್ ಕ್ಯೂರಿ […]
ಆದಿನಾರಾಯಣಸ್ವಾಮಿ ಬೆಟ್ಟ ಜೈವಿಕ ಪಾರಂಪರಿಕ ತಾಣ
ಜೈವಿಕ ಪಾರಂಪರಿಕ ತಾಣವಾಗಿ ಆದಿನಾರಾಯಣಸ್ವಾಮಿ ಬೆಟ್ಟಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಸಮೀಪದಲ್ಲಿರುವ ಆದಿನಾರಾಯಣಸ್ವಾಮಿ ಬೆಟ್ಟ ಹಾಗೂ ದಕ್ಷಿಣ ಜಿಲ್ಲೆ ಕಡಬ ತಾಲೂಕಿನ ಕುಮಾರಧಾರಾ ನದಿ ತೀರದ ಉರುಂಬಿಗೆ ಜೈವಿಕ ಸೂಕ್ಷ್ಮ ಪ್ರದೇಶ ಪಟ್ಟ ನೀಡಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ. ಅಲ್ಲದೆ, ನೆಲಮಂಗಲದ ಮಹಿಮರಂಗ ಬೆಟ್ಟ, ಕೋಲಾರದ ಅಂತರಗಂಗೆ ಬೆಟ್ಟವನ್ನು ಕೂಡ ಜೀವವೈವಿಧ್ಯ ತಾಣ ಎಂದು ಘೋಷಿಸಲು ಮಂಡಳಿ ತೀರ್ಮಾನಿಸಿದೆ. ಚಿಕ್ಕಮಗಳೂರುನ ಸಖರಾಯಪಟ್ಟಣದ ಶಕುನಗಿರಿ ಬೆಟ್ಟ ಪ್ರದೇಶವನ್ನು ಪಕ್ಕದಲ್ಲೇ ಇರುವ ಹೊಗರೆ ಕಾನುಗಿರಿ ಪಾರಂಪರಿಕ ತಾಣಕ್ಕೆ ಸೇರಿಸಲು ಶಿಫಾರಸು […]
ಪಟಾಕಿ ನಿಷೇಧ
ದೇಶದ ದೊಡ್ಡ ಹಬ್ಬವಾದ ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ), ಸೇರಿದಂತೆ 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮೇಲ್ಮನವಿಯ ಸಲ್ಲಿಸಿದವು, ವಿಚಾರಣೆಗೆ ಒತ್ತು ನೀಡಿರುವ ಕರ್ನಾಟಕವೂ ಸರ್ಕಾರಗಳಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ. ದೀಪಾವಳಿ ಪ್ರಯುಕ್ತ ಪಟಾಕಿ ನಿಷೇಧ ಕೋರಿ ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠ, ಗುರುವಾರದೊಳಗೇ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ನವೆಂಬರ್ […]
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಚಿಂತನೆ
ದೇಶದ ಕೆಲ ಸೂಕ್ಷ್ಮ ಪರಿಸರ ವಲಯದಿಂದ 50 ಕಿ.ಮೀ. ವ್ಯಾಪ್ತಿ ಪ್ರದೇಶಗಳಲ್ಲಿ ಗಣಿಗಾರಿಕೆಗೆ ನಿಷೇಧ ಹೇರುವ ನಿರ್ದೇಶನ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಕಲ್ಲಿದ್ದಲು ಗಣಿಗಾರಿಕೆ ಹರಾಜು ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಜಾರ್ಖಂಡ್ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಅರಣ್ಯಗಳ ಆರ್ಥಿಕ ಮೌಲ್ಯವನ್ನು ಸರ್ಕಾರಗಳು ಪರಿಗಣಿಸದೇ ಇರುವ ಕಾರಣ ಇಂಥ ಸಮಸ್ಯೆಗಳು ಉದ್ಭವಿಸುತ್ತದೆ. ದೇಶದಲ್ಲಿರುವ ಅಭಿ ವೃದ್ಧಿ ಯೋಜನೆಗಳನ್ನು ನಿಲ್ಲಿಸಲು ನಾವು ಬಯಸುವುದಿಲ್ಲ. ಆದರೆ ಇದಕ್ಕಾಗಿ ನೈಸರ್ಗಿಕ ಸಂಪನ್ಮೂಲ […]
ಮಹಾ ನಗರಗಳು ಜಲಕಂಟಕದ ಸುಳಿಯಲ್ಲಿ
2050ರ ವೇಳೆಗೆ ಅತಿ ಹೆಚ್ಚು ನೀರಿನ ಕಂಟಕ ಎದುರಿಸುವ ವಿಶ್ವದ ನೂರು ನಗರಗಳ ಪಟ್ಟಿಯಲ್ಲಿ ದೇಶದ 30 ನಗರಗಳು ಇರಲಿದ್ದು, ಬೆಂಗಳೂರು ಮತ್ತು ಹುಬ್ಬಳಿ-ಧಾರವಾಡ ಈ ಪಟ್ಟಿಯಲ್ಲಿ ಸೇರಿವೆ ಎಂದು ವರ್ಲ್ಡ್ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಹೇಳಿದೆ. ಹವಾಮಾನ ವೈಪರೀತ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳದೇ ಇದ್ದಲ್ಲಿ, ಇಂಥ ಕಠಿಣ ಪರಿಸ್ಥಿತಿ ಎದುರಿಸಬೇಕಾಗಲಿದೆ. ನೀರಿನ ಸಂಕಷ್ಟ ಎದುರಿಸಲಿರುವ ದೇಶದ ನಗರಗಳಲ್ಲಿ ರಾಜಸ್ಥಾನದ ಜೈಪುರ ಮೊದಲ ಹಾಗೂ ಕೇರಳದ ಕಣ್ಣೂರು ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು ಹತ್ತನೆಯ […]
ಕಡಲ ಕಿನಾರೆಗಳಿಗೆ ಪ್ರಶಸ್ತಿಯ ಗರಿ
ದೇಶದ ಕರಾವಳಿ ಒಂಬತ್ತು ರಾಜ್ಯಗಳಲ್ಲಿ ಹರಡಿದ್ದು, ೭,೫೦೦ ಕಿಮೀ ಉದ್ದವಿದೆ. ಇವುಗಳಲ್ಲಿ ಎಂಟು ಕಡಲ ತೀರಗಳಿಗೆ ಡೆನ್ಮಾರ್ಕ್ನ ಫೌಂಡೇಷನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಷನ್ ಸ್ವಯಂ ಸೇವಾ ಸಂಸ್ಥೆ ನೀಡುವ ಬ್ಲೂಫ್ಲ್ಯಾಗ್ ಪುರಸ್ಕಾರಕ್ಕೆ ಪಾತ್ರವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು, ಉಡುಪಿ ಜಿಲ್ಲೆಯ ಪಡುಬಿದ್ರಿ, ಕೇರಳದ ಕಪ್ಪಡ್, ಗುಜರಾತ್‌ನ ಶಿವರಾಜ್‌ಪುರ್, ದಿಯು-ದಮನ್ನಿನ ಘೋಗ್ಲ, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಅಂಡಮಾನ್ ಮತ್ತು ನಿಕೊಬಾರಿನ ರಾಧಾನಗರ ಬೀಚ್‌ಗಳು ಪ್ರಶಸ್ತಿಗೆ ಪಾತ್ರವಾಗಿವೆ. ವಿಶ್ವ ಸಂಸ್ಥೆಯ ಪರಿಸರ ಕರ‍್ಯಕ್ರಮ(ಯುಎನ್‌ಇಪಿ), ವಿಶ್ವ ಸಂಸ್ಥೆಯ […]
ಹಕ್ಕಿಯ ಪಳೆಯುಳಿಕೆ ಪತ್ತೆ
ವಿಶ್ವದ ಅತ್ಯಂತ ದೊಡ್ಡ ಪಕ್ಷಿಯೊಂದರ ಪಳೆಯುಳಿಕೆಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಸುಮಾರು 5 ಕೋಟಿ ವರ್ಷಗಳ ಹಿಂದೆ ಬದುಕಿತ್ತು ಎನ್ನಲಾದ ಈ ಪಕ್ಷಿಯ ಎರಡೂ ರೆಕ್ಕೆಗಳ ಒಟ್ಟು ಉದ್ದ ೨೧ ಅಡಿ ಇದೆ. ಈವರೆಗೆ ವಿಶ್ವದ ಅತ್ಯಂತ ದೊಡ್ಡ ಹಕ್ಕಿ ಎಂದು ಪರಿಗಣಿಸಲ್ಪಟ್ಟಿರುವ ವಾಂಡರಿAಗ್ ಅಲ್ಬಟ್ರಾಸ್ ಇದರ ಮುಂದೆ ಕುಬ್ಜ. ಅಲ್ಬಟ್ರಾಸ್‌ನ ರೆಕ್ಕೆಗಳ ಒಟ್ಟು ಉದ್ದ ಅಂದಾಜು ೯-೧೧.೫ ಅಡಿ. ದೈತ್ಯ ಹಕ್ಕಿಯ ಪಳೆಯುಳಿಕೆ ೧೯೮೦ರಲ್ಲಿ ಅಂಟರ‍್ಕ್ಟಿಕದಲ್ಲಿ ಪತ್ತೆಯಾಗಿತ್ತು. ಪ್ಯಾಲಗರ್ನಿಥಿಡ್ಸ್ ಎಂದು ಗುರುತಿಸಲಾದ ಇವು ಸಮುದ್ರದ ತೀರದಲ್ಲೇ […]
ಬೆಂಗಳೂರನ್ನು ಕಾಡುವ ಚಿತ್ತಾ ಮಳೆ
ಅಕ್ಟೋಬರ್ ೧೦ರಿಂದ ಆರಂಭವಾಗಿರುವ ಚಿತ್ತಾ ಮಳೆ, ರಾಜಧಾನಿಯನ್ನು ಕಾಡಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ಅಕ್ಟೋಬರ್ ನಂತರ ಹಿಂಗಾರು ಆರಂಭವಾಗಲಿದೆ. ಕಳೆದ ಹತ್ತು ವರ್ಷದಿಂದ ಹಿಂಗಾರು ದಕ್ಷಿಣ ಒಳನಾಡಿನ ಬೆಂಗಳೂರನ್ನು ಕಾಡುತ್ತಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಅತಿ ಹೆಚ್ಚು ಮಳೆಯಾಗುತ್ತಿತ್ತು.ಆದರೆ, ಕೆಲ ವರ್ಷಗಳಿಂದ ಅಕ್ಟೋಬರ್‌ನಲ್ಲಿ ಭಾರಿ ಮಳೆ ಸುರಿಯುತ್ತಿದೆ ಎಂದು ಪರಿಣತರು ಹೇಳುತ್ತಾರೆ. “ಚಿತ್ತಾ’ ಹಿಂಗಾರಿನ ಮೊದಲ ಮಳೆ. ಯಾವಾಗ ಬೇಕಾದರೂ, […]