ಬೆಂಗಳೂರಿನಲ್ಲಿ ಎಐ ಸಂಶೋಧನಾ ಕೇಂದ್ರ ಸ್ಥಾಪನೆ
ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು. ಮುಂಬರುವ ಸವಾಲುಗಳಿಗೆ ಪರಿಹಾರ ಕಂಡುಹಿಡಿಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು. ವ್ಯವಸಾಯ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಲು ಒತ್ತು ನೀಡಲೇಬೇಕು. ರಾಜ್ಯದ ಸುಮಾರು ಶೇ.60 ರಷ್ಟು ಜನ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದೆಡೆ ಆರ್ಥಿಕತೆ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿರುವುದು ಆಲೋಚನೆಗೀಡು ಮಾಡುವ […]
ತಂತ್ರಜ್ಞಾನ ಶೃಂಗಸಭೆ ನ.19ರಿಂದ
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2020(ಬೆAಗಳೂರು ಟೆಕ್ ಸಮ್ಮಿಟ್) ಇದೇ ೧೯ ರಿಂದ 21ರವರೆಗೆ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ. ಈ ಬಾರಿಯ ಶೃಂಗಸಭೆಯ ವಿಷಯ ಭವಿಷ್ಯ ಈಗಲೇ(ನೆಕ್ಸ್ಟ್ ಈಸ್ ನೌ)ಎಂದು ನಿರ್ಧರಿಸಲಾಗಿದೆ ಎಂದು ಐಟಿ–ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು. ಕೋವಿಡ್‌ನಿಂದಾಗಿ ವರ್ಚುವಲ್ ಆಗಿ ನಡೆಸಬೇಕಾಗಿದೆ. ೨೫ಕ್ಕೂ ಹೆಚ್ಚು ದೇಶಗಳು ಈ ಸಭೆಯಲ್ಲಿ ಪಾಲ್ಗೊಳ್ಳಿದ್ದು. ವಿಜ್ಞಾನ, ತಂತ್ರಜ್ಞಾನ, ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ದೇಶಕ್ಕೆ ನಂಬರ್ 1 ಆಗಿದೆ. ಮುಂದಿನ […]
ಮತ್ತೆ ಗರಿಗೆದರಿದ ಬಾಹ್ಯಾಕಾಶ ಯಾನ
ಕೋವಿಡ್ ಹಿನ್ನೆಲೆಯಲ್ಲಿ ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಯಾನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) 11 ತಿಂಗಳ ಬಳಿಕ ನ. 7 ರಂದು ಪಿಎಸ್ಎಲ್ವಿ ಮೂಲಕ ಇಒಎಸ್–1 ಮತ್ತು ಒಂಬತ್ತು ವಿದೇಶಿ ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿಕೊಂಡಿದೆ. 2019ರ ಡಿ.11 ರಂದು ಇಸ್ರೋ ನಡೆಸಿದ ಉಪಗ್ರಹ ಉಡಾವಣೆ ಕೊನೆಯ ಉಡಾವಣೆ ಆಗಿತ್ತು. ಮಾರ್ಚ್ನಲ್ಲಿ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಕೋವಿಡ್ನಿಂದ ಉಡಾವಣೆ ಮುಂದೂಡಲಾಯಿತು. ದೇಶ ಸೇರಿದಂತೆ ಹಲವು ವಿದೇಶಿ ಉಪಗ್ರಹಗಳ ಉಡಾವಣೆಯನ್ನು ಮುಂದೂಡಿದ್ದರಿAದ, […]
ಚಂದ್ರನ ಮೇಲೆ ವಿಮಾನ!
ಚಂದ್ರ ಕುಂಭರಾಶಿಯ ಟಿ-ಎಕ್ಯುಆರ್ ನಕ್ಷತ್ರವನ್ನು ಮುಚ್ಚುವ ವೇಳೆ ವಿಮಾನವೊಂದು ಚಂದ್ರನ ಮುಂದಿನಿಂದ ಹಾದು ಹೋದ ಕ್ಷಣಗಳು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಳೆದ ಅ.26 ರ ಸಂಜೆ 7:29೯ಕ್ಕೆ ಚಂದ್ರ ಕುಂಭ ರಾಶಿಯ ಟಿ-ಎಕ್ಯುಆರ್ ನಕ್ಷತ್ರವನ್ನು ಮುಚ್ಚುವ ಪ್ರಕ್ರಿಯೆ ನಡೆಯಿತು. 317 ಜ್ಯೋತರ‍್ವರ್ಷ ದೂರದಲ್ಲಿರುವ ಸೂರ್ಯನ ವ್ಯಾಸಕ್ಕಿಂತ ೪ ಪಟ್ಟು ದೊಡ್ಡದಾದ ಈ ನಕ್ಷತ್ರವು ಮಸುಕಾಗಿ ಕಾಣಿಸುತ್ತಿದ್ದಂತೆ, ಚಂದ್ರ ಅದರ ಮುಂದೆ ಹಾದು ಹೋದ. ಪುನಃ ಈ ನಕ್ಷತ್ರವು […]
ಕೋವಿಡ್‌ಗೆ ಲಸಿಕೆ ವರ್ಷಾರಂಭದಲ್ಲಿ ಲಭ್ಯ
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಸ್ಟಾçಜೆನೆಕಾ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಯು ೨೦೨೧ರ ಆರಂಭದಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು ಸೇರಿದಂತೆ ದೇಶದ ಹಲವೆಡೆ ಲಸಿಕೆಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ ೧೮ರಿಂದ ೫೫ ವರ್ಷ ವಯಸ್ಸಿನ ೧,೬೦೦ ಜನರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ನೀಡಿದ ೨೮ ದಿನಗಳಲ್ಲಿ ದೇಹದಲ್ಲಿ ಕೊರೊನಾ ಸೋಂಕು ಪ್ರತಿರೋಧಕ ಶಕ್ತಿ ಕಾಣಿಸಿದೆ. ೫೬ ದಿನಗಳ ಹಿಂದೆ ಮೊದಲ ಹಂತದ ಪ್ರಯೋಗ ಮುಗಿದಿದೆ. ಮುಂದಿನ ಹಂತಗಳಲ್ಲಿ ೫ರಿಂದ […]
Four scientists conferred llscs distinguished alumni awards
Four scientists have been selected for the prestigious Indian Institute of Science (IISc) distinguished alumnus awards for 2020. The awardees are Dr K Rajalakshmi Menon of DRDO, Professor BS Murty from IIT Hyderabad, Professor Sethuraman Panchanathan of the National Science Foundation (USA) and Dr Keshab Panda of L&T Technology Services. The awardees are highly accomplished […]
ಯುವ ವಿಜ್ಞಾನಿ ಹಿರಿಮೆಗೆ ಭಾರತೀಯ ಅಮೆರಿಕನ್ ಬಾಲಕಿ
ಹ್ಯೂಸ್ಟನ್: ಭಾರತೀಯ ಮೂಲಕ ಶಾಲಾ ಬಾಲಕಿ ಅನಿಕಾ ಚೆಬ್ರೊಲು, ೧೮.೭೫ ಲಕ್ಷ ರೂ. ಮೊತ್ತದ ‘೩ಎಂ ಯುವ ವಿಜ್ಞಾನಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ೩ಎಂ ಯುವವಿಜ್ಞಾನಿ ಸವಾಲನ್ನು ಅಮೆರಿಕದ ಮಾಧ್ಯಮಿಕ ಶಾಲಾ ವಿಜ್ಞಾನದ ಪ್ರಮುಖ ಸ್ಪರ್ಧೆ ಎಂದು ಪರಿಗಣಿಸಲಾಗಿದೆ. ಅನಿಕಾ ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ಎಂಟನೇ ತರಗತಿ ಓದುತ್ತಿದ್ದಾರೆ. ಕಳೆದ ವರ್ಷ ತೀವ್ರತರವಾದ ಇನ್‌ಫ್ಲುಯೆನ್ಜಾ ಸೋಂಕಿಗೆ ತುತ್ತಾಗಿದ್ದ ಅನಿಕಾ, ಔಷಧ ಕಂಡುಹಿಡಿಯಲು ನಿರ್ಧರಿಸಿದ್ದರು. ಅಷ್ಟರಲ್ಲಿ ಕೋವಿಡ್ ಅಡಿಯಿಟ್ಟಿತು. ‘ಔಷಧ ಅಭಿವೃದ್ಧಿ ಕೆಲಸಕ್ಕೆ ೩ಎಂ ವಿಜ್ಞಾನಿಗಳ ಸಹಕಾರ ದೊರೆಯಬಹುದು ಎಂಬ ಉದ್ದೇಶದಿಂದ […]
ಯಶಸ್ವಿ: ಬ್ರಹ್ಮೋಸ್– ನೌಕಾ ಆವೃತ್ತಿ ಕ್ಷಿಪಣಿ ಪರೀಕ್ಷೆ
ನೌಕಾಪಡೆ ನಡೆಸುವ ಕಾರ್ಯಾಚರಣೆಗೆ ಹೊಂದಿ ಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಯನ್ನು ಅರಬ್ಬಿ ಸಮುದ್ರದಲ್ಲಿ ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಸದ್ದಿಲ್ಲದೇ ಶತ್ರುಪಡೆಯ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಕಾರ್ಯಾಚರಣೆಗಾಗಿಯೇ, ದೇಶೀಯವಾಗಿ ನಿರ್ಮಿಸಲಾಗಿರುವ ಐಎನ್‌ಎಸ್ ಚೆನ್ನೈ ನೌಕೆ ನೆರವಿನಿಂದ ಕ್ಷಿಪಣಿಯ ಪರೀಕ್ಷೆಯನ್ನು ನೆರವೇರಿಸಲಾಯಿತು. ಬಹಳ ಸಂಕೀರ್ಣವಾದ ತಂತ್ರಗಾರಿಕೆಯ ನಂತರ ನಡೆಸಿದ ಈ ಪರೀಕ್ಷೆಯಲ್ಲಿ ಕ್ಷಿಪಣಿಯು ನಿಗದಿಪಡಿಸಿದ ಗುರಿಯನ್ನು ಕರಾರುವಾಕ್ಕಾಗಿ ತಲುಪಿತು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧನೌಕೆಗಳಿಂದ ಚಿಮ್ಮಿ ದೂರದಲ್ಲಿರುವ ಶತ್ರುಪಡೆಯ ನೌಕೆ, ಕ್ಷಿಪಣಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿರುವ […]
ಬೆಂಗಳೂರಿನ ಜನರಿಗೆ ಸ್ಮಾರ್ಟ್ಕಾರ್ಡ್ ರಿಚಾರ್ಜ್ ದುಬಾರಿ
ಟೋಕನ್ ವಿತರಿಸುವುದಿಲ್ಲ, ಹಳೆಯ ಸ್ಮಾರ್ಟ್ಕಾರ್ಡ್ಗಳನ್ನು ವೆಬ್‌ಸೈಟ್‌ನಲ್ಲಿಯೇ ರಿಚಾರ್ಜ್ ಮಾಡಿಸಿಕೊಳ್ಳಬೇಕು, ರಿಚಾರ್ಜ್ ಮಾಡಿಸಿಕೊಂಡ ಒಂದು ಗಂಟೆಯ ನಂತರವೇ ಪ್ರಯಾಣಿಸಬೇಕು, ಸ್ಮಾರ್ಟ್ಕಾರ್ಡ್ ರಿಚಾರ್ಜ್ ಮಾಡಿಸಿಕೊಂಡ 7 ದಿನಗಳೊಳಗೇ ಬಳಸಬೇಕು. ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವವರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮವು ವಿಧಿಸಿರುವ ಷರತ್ತುಗಳಿವು. ಈ ನಿರ್ಬಂಧಗಳಿAದ ಬಹುತೇಕ ಪ್ರಯಾಣಿಕರು ಎರಡೆರಡು ಸ್ಮಾರ್ಟ್ಕಾರ್ಡ್ ಖರೀದಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಹಳೆಯ ಸ್ಮಾರ್ಟ್ಕಾರ್ಡ್ ಇದ್ದರೂ ರಿಚಾರ್ಜ್ ಮಾಡಿಸುವುದು ಮರೆತು ಹೋಗುತ್ತದೆ. ರಿಚಾರ್ಜ್ ಮಾಡಿಸಿದರೂ ಒಂದು ಗಂಟೆ ಕಾಯುವಷ್ಟು ಸಮಯ ಇರುವುದಿಲ್ಲ. ಕಾರ್ಡ್ ಇದ್ದರೂ, ಹೊಸ ಕಾರ್ಡ್ […]

