Category: ವಿಜ್ಞಾನ ತಂತ್ರಜ್ಞಾನ

ಕೋವಿಡ್: ಶೇ.10 ಮಂದಿಗೆ ಸೋಕು

ಜಗತ್ತಿನ ಶೇ.10ರಷ್ಟು ಜನ ಕೋವಿಡ್ ಸೋಂಕಿಗೆ ಸಿಲುಕಿರಬಹುದು. ಈವರೆಗೆ ೩೫ ದಶಲಕ್ಷಕ್ಕಿಂತ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಹಾಗೂ 0.04 ದಶಲಕ್ಷ ಮಂದಿ ಮರಣ ಹೊಂದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಸ್ ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ಜಗತ್ತಿನ ಒಟ್ಟು ಜನಸಂಖ್ಯೆ 7.8ಶತಕೋಟಿಯಲ್ಲಿ ಹತ್ತನೇ ಒಂದು ಭಾಗದಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದು ಅಧಿಕೃತ ಅಂದಾಜಿಗಿತ ಇಪ್ಪತ್ತು ಒಟ್ಟು ಹೆಚ್ಚು.  ಜನಸಂಖ್ಯೆಯ ಶೇ. 10 ಮಂದಿ ವೈರಸ್ ಸೋಂಕಿಗೆ ಒಳಗಾಗಿರಬಹುದು ಎಂದು ವಿಶ್ವ ಆರೋಗ್ಯ […]

ಡಿಜಿಟಲ್ ಜಗತ್ತಿನ ಪರಿಸರ ಅಘಾತ. –

ಪರಿಸರ ಸಮಸ್ಯೆಗೆ ತಂತ್ರಜ್ಞಾನ ಪರಿಹಾgವಾಗಬಲ್ಲುದು ಎನ್ನುವದು ಅರ್ಧ ಸತ್ಯ. ಅದೇ ಹೊತ್ತಿನಲ್ಲೇ ತನ್ನದೇ ಆದ ಸಮಸ್ಯೆಯನ್ನೂ ಸೃಷ್ಟಿಸುತ್ತದೆ ಎನ್ನುವುದು ಕೂಡ ನಿಜ. ಇ-ತ್ಯಾಜ್ಯ ಅವುಗಳಲ್ಲಿ ಒಂದು. ಇನ್ನೊಂದು-ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸುವ ವಿದ್ಯುತ್. ಇಮೇಲ್ ಇಂದು ವ್ಯವಹಾರ-ವೈಯಕ್ತಿಕ ಬದುಕಿನ ಅನಿವರ‍್ಯ ಅಂಗವಾಗಿಬಿಟ್ಟಿದೆ. ಇದಕ್ಕೆಲ್ಲ ವಿದ್ಯತ್ ಬೇಕೇ ಬೇಕು. ಜೂನ್2018 ಸಂಚಿಕೆ-01 ಪುಟ-80

ಆನೆಯನ್ನು ಹಿಂದಿಕ್ಕಬಹುದು!-

ಅಮೇರಿಕದ ರಕ್ಷಣಾ ಇಲಾಖೆಯನ್ನು ವಿಜ್ಞಾನಿಗಳು ಹಾಗೂ ಜಗತ್ತಿನೆಲ್ಲೆಡೆಯ ವಿಶ್ಚ ವಿದ್ಯಾಲಯಗಳು ಪ್ರೊಫೆಸರ್‌ಗಳೊಂದಿಗೆ ಸಂಪರ್ಕಿಸಲು ಸಾರ್ವಜನಿಕರ ತೆರಿಗೆ ಹಣದಿಂದ ಸೃಷ್ಟಿಯಾದ ಅಂತರ್ಜಾಲ, ಕಾಲಕ್ರಮೇಣ ಹೇಗೆ ಖಾಸಗಿ ಕಂಪನಿಗಳಿಗೆ ಹಣ ಟಂಕಿಸುವ ಯಂತ್ರವಾಯಿತು ಎನ್ನುವದು ಗೊತ್ತಿರುವ ವಿಷಯವೇ. ಈ ಅಂತರ್ಜಾಲವನ್ನು, ಮಾಹಿತಿಯನ್ನು, ತಂತ್ರಾAಶಗಳನ್ನು ಬಲಿಷ್ಟರ ಕೈಯಿಂದ ಬಿಡುಗಡೆಗೊಳಿಸಲು ರಿಚರ್ಡ್ ಸ್ಟಾಲ್ಮನ್ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದಾರೆ. -ಫೆಬ್ರವರಿ 2019 ಸಂಚಿಕೆ-09 ಪುಟ-82

ಕುಡಿವ ನೀರಿನಲ್ಲಿ ಯುರೇನಿಯಂ. –

ಕೈಗಾ ಅಣು ಸ್ಥಾವರ ಸ್ಥಾಪನೆ ವಿರುದ್ಧ ನಡೆದ ಚಳುವಳಿ ನೆನಪು ಕೆಲವರಿಗಾದರೂ ಇರಬಹುದು. ಜಿಲ್ಲೆಯ ಬಹುತೇಕ ಗ್ರಾಮಪಂಚಾಯಿತಿಗಳು ಯೋಜನೆಯನ್ನು ವಿರೋಧಿಸಿದ್ದವು. ಡಾ.ಶಿವರಾಮ ಕಾರಂತರ ನೇತೃತ್ವದಲ್ಲಿ ಹೋರಾಟ ನಡೆದು, ಬಳಿಕ ಅವರು ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡುದ್ದೂ ಆಯಿತು. 15 ಜುಲೈ 2018 ಸಂಚಿಕೆ-2 ಪುಟ-66

ಜನ ಮರುಳೋ, ಜಾಹೀರಾತು ಮರುಳೋ!-

ಬಹುತೇಕ ಜಾಹೀರಾತು ಮಕ್ಕಳನ್ನು ಗುರಿಯಾಗಿಸಿವೆ. ಮಕ್ಕಳ ಮೇಲೆ ಪ್ರಭಾವ ಬೀರುವುದು, ಮನವೋಲಿಕೆ ಸುಲಭ. ಅವರನ್ನು ಗಿಡವಾಗಿರುವಾಗಲೇ ಬಗ್ಗಿಸಿದಲ್ಲಿ ಅಂದರೆ, ಎಳವೆಯಲ್ಲೇ ಉತ್ಪನ್ನಗಳ ಹುಲಾಮರಾಗಿಸಿದಲ್ಲಿ, ಅವರ ಜೀವಮಾನಡೀ ದಾಸರಾಗಿರುತ್ತಾರೆ. ತೊಟ್ಟಿಲಿನಿಂದ ಶವದಪೆಟ್ಟಿಗೆಯವರೆಗೆ ಎನ್ನುವ ಪದಪುಂಜ ಕಠಿಣ ಎನ್ನಿಸಬದುಹು. ಆದರೆ ಅದು ವಾಸ್ತವ. 15 ಮೇ 2018 ಸಂಚಿಕೆ-22 ಪುಟ-63

ಬರುವ ಚುನಾವಣೆಯಲ್ಲಿ ರೈತನೇ ನಿರ್ಣಾಯಕ.

ಕಳೆದ ವರ್ಷ ದಿಲ್ಲಿಯಲ್ಲಿ ಒಂದು ಮುಂಜಾವು, ಎಲ್ಲೆಲ್ಲೂ ರೈತರ ತಲೆಗಳೇ ಕಾಣಿಸುತ್ತಿದ್ದವು. ಅವಾವುದಕ್ಕೂ ಜೀವವಿರಲಿಲ್ಲಿ. ೨೦೧೭ರ ಏಪ್ರಿಲ್ ಹಾಗೂ ಜುಲೈನ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ರುಂಡಗಳನ್ನು ತಮಿಳುನಾಡಿನ ರೈತರು ತೆಗೆದುಕೊಂಡು ಬಂದು ರಾಜಧಾನಿಯ ನಟ್ಟನಡುವೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದರು. – 15ಫೆಬ್ರವರಿ2018 ಸಂಚಿಕೆ-16 ಪುಟ-30

ಕಸ ಇತ್ತ, ಅತ್ತ, ಸುತ್ತಮುತ್ತ..

ತ್ಯಾಜ್ಯ ಎನ್ನುವುದು ನಾಗರಿತೆ ಸೃಷ್ಟಿಸಿರುವ ಸಮಸ್ಯೆ. ಈ ಹಿಂದೆಯೂ ತ್ಯಾಜ್ಯ ಸೃಷ್ಟಿಯಾಗುತ್ತಿದ್ದರೂ, ಕೊಳ್ಳುಬಾಕ ಪ್ರವೃತ್ತಿ ತಲೆಯತ್ತದ ಕಾರಣ ಹಾಗೂ ಜನಸಂಖ್ಯೆ ಕಡಿಮೆ ಇದ್ದುದರಿಂದ, ಕಸದ ಪ್ರಮಾಣ ಕಡಿಮೆ ಇತ್ತು. ಜನಸಂಖಗುಎ ಹೆಚ್ಚಿದಂತೆ ನಗರಗಳಿಗೆ ವಲಸೆಯೂ ಹೆಚ್ಚಿ ನಗರಗಳು ಅಸಡ್ಡಾಳವಾಗಿ ಬೆಳೆದವು. ಅಕ್ಕಪಕ್ಕದ ಹಳ್ಳಿಗಳನ್ನು ನುಂಗುತ್ತ ತಾವು ಸೃಷ್ಟಿಸುವ ತ್ಯಾಜ್ಯದಲ್ಲಿ ಮುಳುಗಿ ಹೋಗಲಾರಂಭಿಸಿದವು. – 15ಜನವರಿ 2018 ಸಂಚಿಕೆ-14 ಪುಟ-66

ರಾಜ್ಯಧಾನಿ ಕಬಳಿಸಲು ಹೊಂಜಿನ ಹೊಂಚು.

ರಾಷ್ಟçಧಾನಿ ದಿಲ್ಲಿ ಹೊಂಜಿ(ಹೊಗೆ ಮತ್ತು ಮಂಜು-ಹೊAಜು)ನಿAದ ಕಂಗೆಟ್ಟಿದೆ. ಚಳಿಗಾಲದಲ್ಲಿ ದಿಲ್ಲಯ ಜನಜೀವನ ಸ್ತಬ್ಧಗೊಳ್ಳುತ್ತದೆ. ನವೆಂಬರ್ ಎಂಟರAದು ಯಮುನಾ ಎಕ್ಸಪ್ರೆಸ್‌ವೇಯಲ್ಲಿ ಮುಂದೆ ಏನಿದೆ ಎಂಬುದು ಕಾಣದೆ, ೧೩ ವಾಹನಗಳು ಡಿಕ್ಕಿಯಾಗಿ, ೨೨ಜನ ಗಾಯಗೊಡರು. ಅದು ಬೆಳ್ಳಂಬೆಳ್ಳಗೆ ಒಂಬತ್ತು ಗಂಟೆಗೆ. -01 ಡಿಸೆಬರ್ 2017 ಸಂಚಿಕೆ-11 ಪುಟ-66

ಸಾವಿಲ್ಲದ ಪ್ಲಾಸ್ಟಿಕ್‌ಗಾಗಿ ಸತ್ತ!…

ನೆಲದಲ್ಲಿ ನೀರು ಕೆಳಗೆ ಇನ್ನಷ್ಟು ಕೆಳಗೆ ಇಳಿಯುತ್ತಿದೆ. ಆದರೆ, ಸಾವಿಲ್ಲದ, ರೂಹಿಲ್ಲದ ಪದಾರ್ಥದಂತೆ ಪ್ಲಾಟಿಕ್ ಎಂಬುದು ನೆಲ, ಜಲ, ಆಕಾಶ ಸೇರಿದಂತೆ ಎಲ್ಲೇಡೆ ಸರ್ವವ್ಯಾಪಿಯಾಗಿದೆ. ಕೃತಕ ಇಲ್ಲದೇ ಅರೆ ಕೃತಕ ಸಾವಯವ ಸಂಯುಕ್ತಗಳು, ಸುಲಭವಾಗಿ ದ್ರವ ಇಲ್ಲವೇ ಘನ ವಸ್ತುವಾಗಿ ಪರಿವರ್ತಿಸಬಹುದು, ಅಚ್ಚು ಹಾಕಬಹುದು. ಈ ಗುಣವೇ ಪ್ಲಾಸ್ಟಿಕ್ ಎಲ್ಲೆಡೆ ತುಂಬಲು ಕಾರಣವಾಗಿದೆ. -15 ಆಗಸ್ಟ್. 2017 ಸಂಚಿಕೆ-5 ಪುಟ-66

Back To Top