ಮರಗಳನ್ನು ನೋಡುತ್ತ ಕಾಡನ್ನೇ ಮರೆತವರು
2024ರ ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರವು ಡರಾನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಹಾಗೂ ಜೇಮ್ಸ್ ಎ. ರಾಬಿನ್ಸನ್(ಎಜೆಆರ್) ತ್ರಿವಳಿಗೆ ಸಂದಿದೆ. ಈ ಮೂವರು ನವ ಸಾಂಸ್ಥಿಕ ಅರ್ಥಶಾಸ್ತ್ರದಲ್ಲಿ ಪರಿಣತರಾಗಿದ್ದು, ಅಭಿವೃದ್ಧಿ ಪಥದಲ್ಲಿ ಸಂಸ್ಥೆಗಳ ಪಾತ್ರವನ್ನು ವಿಶ್ಲೇಷಿಸಿದ್ದಾರೆ. ಇವರೆಲ್ಲರೂ ಅಮೆರಿಕದಲ್ಲಿ ನೆಲೆಸಿರುವ ವಲಸಿಗರು. ಅಸೆಮೊಗ್ಲು ಅವರು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಜನಿಸಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಿಎಚ್.ಡಿ ಪಡೆದು, 1993ರಿಂದ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸೈಮನ್ ಜಾನ್ಸನ್ ಇಂಗ್ಲೆಂಡ್ ಮೂಲದವರು. ಎಂಐಟಿಯಿಂದ ಪಿಎಚ್.ಡಿ ಪಡೆದು, ಕೆಲಕಾಲ ಅಂತಾರಾಷ್ಟ್ರೀಯ […]
ನೀಟ್ ಎನ್ನುವುದು ಒಂದು ರಾಜಕೀಯ ಕಾರ್ಯಕ್ರಮ
2017ರಲ್ಲಿ ತಮಿಳುನಾಡು ಪಿಯು ಪರೀಕ್ಷೆಯಲ್ಲಿ 1,176(1,200) ಅಂಕ ಗಳಿಸಿದ ಎಸ್.ಅನಿತಾ ವೈದ್ಯೆಯಾಗುವ ಕನಸು ಕಂಡವರು. ಆದರೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಪಾಸ್ ಆಗಲಿಲ್ಲ. ಸಾಕಷ್ಟು ಹೋರಾಟದ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ನೀಟ್ 720 ಅಂಕಗಳ 3 ಗಂಟೆ ಅವಧಿಯ ಪರೀಕ್ಷೆ. ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ. ಮೇ 5 ರಂದು ನಡೆದ ನೀಟ್ ಪರೀಕ್ಷೆಯಲ್ಲಿ 24,06,079 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫಲಿತಾಂಶ ಬಂದಾಗ 67 ಮಂದಿ 720/720 ಅಂಕ ಗಳಿಸಿದರು. […]
ಪಿಯುಸಿಗೆ ಆನ್‍ಲೈನ್ ಪರೀಕ್ಷೆ
2ನೇ ಪಿಯುಸಿ ಪರೀಕ್ಷೆಯನ್ನು ಆನ್‍ಲೈನ್‍ನಲ್ಲಿ ನಡೆಸಲು ಸಾಧ್ಯವಿದೆಯೇ ಎಂದು ಪಿಯು ಇಲಾಖೆ ಪರಿಶೀಲಿಸುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ತರಗತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಕ್ಷೀಣವಾಗಿದೆ. ಹೀಗಾಗಿ, ಪ್ರಮುಖ ವಿಷಯಗಳಲ್ಲಿ 90 ನಿಮಿಷಗಳ ಪರೀಕ್ಷೆ ನಡೆಸಬಹುದು ಹಾಗೂ ಬಹು ಆಯ್ಕೆ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎನ್ನುವ ಸಲಹೆಗಳು ಇಲಾಖೆಗೆ ಬಂದಿವೆ. ಆದರೆ, ಆನ್‍ಲೈನ್ ಪರೀಕ್ಷೆ ನಡೆಸಲು ಅಂತರ್ಜಾಲ ಸಂಪರ್ಕ, ವಿದ್ಯುತ್ ಸಂಪರ್ಕ, ಮಾತ್ರವಲ್ಲದೆ ಮೂಲಭೂತ ವ್ಯವಸ್ಥೆಯ ಕೊರತೆ ಇದೆ. ಇದನ್ನು ನಿವಾರಿಸಲು ಎಂಜಿನಿಯರಿಂಗ್ ಕಾಲೇಜುಗಳನ್ನು ಬಳಸಿಕೊಳ್ಳಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆನ್‍ಲೈನ್ […]
ಶಿಕ್ಷಣ ಮತ್ತು ಇಂಗ್ಲಿಷ್ ಕಲಿಕೆ
ಡಾ.ಹರೀಶ್ ಎಂ ಜಿ ಮೂವತ್ತು ವರುಷಗಳ ಹಿಂದೆ ಹೆಸರು ಜಾತಿ ಸೂಚಕವಾಗಿತ್ತು. ಒಬ್ಬ ವ್ಯಕ್ತಿಗಿಟ್ಟ ಬೀರ, ಕರಿಯ, ನಾಗ, ಕಾಳ, ಓಬಳ, ಕೆಂಚ, ಹೆಸರುಗಳೇ ಅವರ ಜಾತಿಯನ್ನ ಸೂಚಿಸಿಬಿಡುತ್ತಿತ್ತು. ವ್ಯಕ್ತಿ ಧರಿಸುತ್ತಿದ್ದ ಉಡುಗೆ ತೊಡುಗೆಗಳು ವರ್ಗಗಳ ಸೂಚಕವಾಗಿದ್ದವು. ಉದಾರೀಕರಣ, ಜಾಗತಿಕಾರಣ ಹಾಗು ನಗರೀಕರಣದ ಪ್ರಭಾವದಿಂದ ಈಗಿನ ಪೀಳಿಗೆಯ ಹುಡುಗ/ಹುಡುಗಿಯರಿಗೆ ಪೋಷಕರು ಈ ರೀತಿಯ ಹೆಸರುಗಳನ್ನ ಇಡುತ್ತಿಲ್ಲ. ಹಗಲು ರಾತ್ರಿ ಗೂಗಲ್ ಮಾಡಿ ಅತಿ ಯುನೀಕ್ ಆದ ಹೆಸರನ್ನೇ ಇಡುತ್ತಿದ್ದಾರೆ. ಇಂದು ನನಗೆ ಜಾತಿ ಮತ್ತು ವರ್ಗದ ಪ್ರಮುಖ […]
ಸಿಇಟಿ, ನೀಟ್ ಜತೆಗೆ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್ ಕೋಚಿಂಗ್ : ʼಗೆಟ್-ಸೆಟ್ ಗೋʼ ವ್ಯವಸ್ಥೆಗೆ CM ಯಡಿಯೂರಪ್ಪ ಚಾಲನೆ
ಬೆಂಗಳೂರು : ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ, ನೀಟ್ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್ ನೀಡಲಾಗುವ ʼಗೆಟ್-ಸೆಟ್ ಗೋʼ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ʼಗೆಟ್-ಸೆಟ್ ಗೋʼ (GetCETgo) ವ್ಯವಸ್ಥೆಗೆ ಚಾಲನೆ ಕೊಟ್ಟರಲ್ಲದೆ; ‘ಈವರೆಗೆ ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಬೇತಿ ಕೊಡಲಾಗುವುದು. ಈ ಸೌಲಭ್ಯವನ್ನು ಎಲ್ಲರೂ […]
ಮುಂದಿನ ಶೈಕ್ಷಣಿಕ ವರ್ಷ ಜುಲೈ 15ರಿಂದ ಆರಂಭ – ಶಿಕ್ಷಣ ಸಚಿವ ಸುರೇಶ್ ಕುಮಾರ್
ತುಮಕೂರು : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಶುರುವಾಗಿದೆ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ. ಇದರ ನಡುವೆಯೂ ಜುಲೈ.15, 2021ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಚಿಂತನೆ ನಡೆದಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೊರೋನಾ ಸೋಂಕಿನ ಭೀತಿಯ ನಡುವೆಯೂ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವಂತ ತುರ್ತು ಪರಿಸ್ಥಿತಿ ಬಂದೊಂದಗಿದೆ. ಸದ್ಯಕ್ಕೆ […]
JEE ಮೇನ್ ಪರೀಕ್ಷೆ -2021 : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ 2021ರ ನೋಂದಣಿ ಗಡುವನ್ನ ವಿಸ್ತರಿಸಿದ್ದು, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಅರ್ಜಿ ಸಲ್ಲಿಕೆಯ ವಿಂಡೋ ಮಾರ್ಚ್ 10ರವರೆಗೆ ತೆರೆದಿರುತ್ತದೆ. ಆಕಾಂಕ್ಷಿಗಳು ಅಧಿಕೃತ ವೆಬ್ ಸೈಟ್ʼಗೆ ಭೇಟಿ ನೀಡಿ ನಿಗದಿತ ಅವಧಿಯಲ್ಲಿ ಅರ್ಜಿಗಳನ್ನ ಸಲ್ಲಿಸಬಹುದಾಗಿದೆ. ಇನ್ನು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಮೊದಲು ನೋಂದಾಯಿಸಿಕೊಂಡವರೆಲ್ಲರೂ ಜೆಇಇ ಮೇನ್ 2021 ಅರ್ಜಿ ನಮೂನೆಯಲ್ಲಿ ವಿವರಗಳನ್ನ ಅಧಿಕೃತ ಸೈಟ್ jeemain.nta.nic.in ಗೆ ತೆರಳಿ ಮಾರ್ಪಡಿಸಬಹುದು. ಅಂದ್ಹಾಗೆ, ಎನ್ […]
CBSE ವಿದ್ಯಾರ್ಥಿಗಳ ಗಮನಕ್ಕೆ : 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಕ್ರಮ ಕಡಿತ ಮಾಡಿಲ್ಲ : ಸ್ಪಷ್ಟನೆ ನೀಡಿದ ಮಂಡಳಿ
ನವದೆಹಲಿ : ವದಂತಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಮುಂಬರುವ 10ನೇ ತರಗತಿ ಯ ಬೋರ್ಡ್ ಪರೀಕ್ಷೆಗಳಿಗೆ ಸಮಾಜ ವಿಜ್ಞಾನದ ಸಿಲೆಬಸ್ ಕಡಿಮೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಎರಡು ದಿನಗಳ ಹಿಂದೆ ವಿವಿಧ ವೆಬ್ ಪೋರ್ಟಲ್ ಗಳು ಸಾಮಾಜಿಕ ವಿಜ್ಞಾನ ವಿಷಯಗಳ ಥಿಯರಿಯಲಿ ಒಟ್ಟು ಐದು ಘಟಕಗಳನ್ನು ತೆಗೆದುಹಾಕಲಾಗಿದೆ ಎಂದು ವರದಿ ಮಾಡಿದ್ದವು. ಆದರೆ, ಈ ಬಗ್ಗೆ ಸದ್ಯಕ್ಕೆ ಯಾವುದೇ ಘೋಷಣೆ ಮಾಡಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ’10ನೇ ತರಗತಿಯ ಸಮಾಜ […]
8.51 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ: ಸುರೇಶ್ ಕುಮಾರ್
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ 8.51 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ನಗರದ ಸಮಗ್ರ ಶಿಕ್ಷಣ ಕಚೇರಿಯಲ್ಲಿ 2020ರ ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಯಶೋಗಾಥೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್-19 ನಡುವೆಯೇ ದೇಶಕ್ಕೆ ಮಾದರಿಯಾಗುವಂತೆ ಪರೀಕ್ಷೆ ನಡೆಸಿದ್ದೇವೆ. ಈ ವರ್ಷದ ಪರೀಕ್ಷೆ ಇನ್ನು ಉತ್ಕೃಷ್ಟ ರೀತಿಯಲ್ಲಿ ನಡೆಸುವ ಸವಾಲು ನಮ್ಮ ಮುಂದಿದೆ ಎಂದರು. 2021ರ ಎಸ್‌ಎಸ್‌ಎಲ್ ಸಿ […]