Category: ಸುದ್ದಿ – ಸಮಾಚಾರ

ಕೃತಕ ನಾಟಕ: ಕೇರಲ್ ಕ್ಯಾಪೆಕ್

  ಕೊಳ್ಳೇಗಾಲ ಶರ್ಮ ಮೊನ್ನೆ ಅಂದರೆ ಫೆಬ್ರವರಿ ೨೬ರಂದು ನಮ್ಮಲ್ಲಿ ಸಂಜೆ ಆರು ಗಂಟೆ ಆಗಿದ್ದಾಗ ಯುರೋಪಿನ ಇಪ್ಪತ್ತು ಸಾವಿರ ಮಂದಿ ಒಮ್ಮೆಲೇ ಒಂದು ನಾಟಕವನ್ನು ನೋಡಿದರು. ಇಪ್ಪತ್ತು ಸಾವಿರ ಮಂದಿ ಎಂದರೆ ಅಚ್ಚರಿ ಆಗಿರಬೇಕು. ನಮ್ಮೂರಲ್ಲಿ ನಾಟಕ ನೋಡಲು ಒಂದು ಇನ್ನೂರು ಜನ ಬಂದರೆ ಅದುವೇ ಹೌಸ್‌ ಫುಲ್.‌ ಆದರೆ ಈ ನಾಟಕದ ವಿಶೇಷ ಅಷ್ಟೊಂದು ಜನ ಅದನ್ನು ನೋಡಿದರು ಅನ್ನುವುದಲ್ಲ. ಅದನ್ನು ಬರೆದದ್ದೇ ವಿಶೇಷ. ನಾಟಕವನ್ನು ಯಾವ ರನ್ನ ಪಂಪರಾಗಲಿ, ಶೇಕ್ಸ್‌ ಪಿಯರ್‌, ಕಾಳಿದಾಸನಾಗಲಿ […]

ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಕೆಎಸ್ ಪಿಸಿಬಿ ಹೊಸ ಮಾರ್ಗಸೂಚಿ

ಬೆಂಗಳೂರು, ಮಾರ್ಚ್.03: ರಾಜ್ಯದಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ವಿನ್ಯಾಸ ಮತ್ತು ಸ್ಥಳದ ಕುರಿತಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಅಪಾರ್ಟ್ ಮೆಂಟ್ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಒಳಚರಂಡಿ ಸಂಸ್ಕರಾ ಘಟಕ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾರ್ಚ್ 1ರಿಂದಲೇ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಅದರ ಜೊತೆಗೆ ಹೊಸ ನಿಯಮಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಕೆರೆಯ ನೀರು ಪ್ರಾಣಿಗಳಿಗೂ ಕುಡಿಯಲು ಯೋಗ್ಯವಲ್ಲ! ರಾಜ್ಯದಲ್ಲಿ […]

‘ನಮ್ಮ ಕಾರ್ಗೋ’ ಸೇವೆ ಹಾಗೂ ರಕ್ತದಾನದ ಬಸ್‌ಗೆ ಸಿಎಂ ಚಾಲನೆ

ಬೆಂಗಳೂರು,ಫೆ.26- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೂತನ ಪಾರ್ಸಲ್ ಕಾರ್ಗೊ ಸೇವೆ ಮತ್ತು ಕೆಎಸ್‍ಆರ್‍ಟಿಸಿ, ಕಿದ್ವಾಯಿ, ರೋಟರಿ ಸಹಯೋಗದೊಂದಿಗೆ ನಿರ್ಮಿಸಿರುವ ಮೊಬೈಲ್ ರಕ್ತದಾನದ ಬಸ್‍ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ವಿಧಾನಸೌಧ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಗೊ ಸೇವೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟದಲ್ಲಿದ್ದು, ಪರ್ಯಾಯ ಮಾರ್ಗದ ಆದಾಯವನ್ನು ಕಂಡುಕೊಂಡಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು. ರಾಜ್ಯದ ಕೆಎಸ್‍ಆರ್‍ಟಿಸಿ ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಪ್ರತಿದಿನ 51 ಲಕ್ಷ ಕಿ.ಮೀ […]

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ : ಓರ್ವ ಆರೋಪಿಯ ಬಂಧನ

ಚಿಕ್ಕಬಳ್ಳಾಪುರ: ರಾಜ್ಯವನ್ನು ಮತ್ತೆ ಬೆಚ್ಚಿ ಬೀಳಿಸಿದ ಚಿಕ್ಕಬಳ್ಳಾಪುರ ಹೀರೆನಾಗವೇಲಿ ಸಮೀಪದ ಕಲ್ಲುಕ್ವಾರಿ ಬಳಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಸ್ತುಗಳನ್ನು ಸಾಗಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೌರಿಬಿದನೂರು ಮೂಲದ ಗಂಗೋಜಿ ರಾವ್ ಬಂಧಿತ ಆರೋಪಿ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಸ್ಫೋಟಕಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ಸದ್ಯ, ಸ್ಫೋಟಕ ವಸ್ತುಗಳನ್ನು ಸಾಗಿಸಿದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಾಗೇಪಲ್ಲಿ ಮೂಲದ ನಾಗರಾಜ್ ರೆಡ್ಡಿ, ಆಂಧ್ರಪ್ರದೇಶದ ರಾಘವೇಂದ್ರ ರೆಡ್ಡಿ ಹಾಗೂ ಶಿವರೆಡ್ಡಿ ಬ್ರಹ್ಮವರ್ಷಿಣಿ ಕ್ರಶರ್​ ಮಾಲೀಕರೆಂದು ತಿಳಿದುಬಂದಿದೆ

ಹಳೆ ವಾಹನಗಳಿನ್ನು ಬೆಂಗಳೂರು ರಸ್ತೆಗಿಳಿಯುವಂತಿಲ್ಲ

ಹಳೆ ವಾಹನಗಳನ್ನು ಗುಜರಿಗೆ ಹಾಕಲು ರೂಲ್ಸ್   ಬೆಂಗಳೂರು: ನಿಮ್ಮ ಬಳಿ ಹಳೆ ವಾಹನಗಳಿದ್ದರೆ ಅವು ಇನ್ಮುಂದೆ ರಸ್ತೆಗಿಳಿಯುವಂತಿಲ್ಲ.  ಹಳೆ ವಾಹನಗಳ‌ ಸಂಚಾರಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.  ವಾಯುಮಾಲಿನ್ಯ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಹಳೆ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರ ರೂಲ್ಸ್ ತರುತ್ತಿದೆ. ಬೆಂಗಳೂರಿನಲ್ಲಿ ಹಳೆ ವಾಹನಗಳನ್ನು ಬ್ಯಾನ್ ಮಾಡಲು ಯೋಜನೆ ರೂಪಿಸಲಾಗಿದೆ.  ಬೆಂಗಳೂರಿನಲ್ಲಿ ಸದ್ಯದಲ್ಲೇ ಗುಜರಿ ಸೇರಲಿವೆ ಲಕ್ಷಾಂತರ ವಾಹನಗಳು ಹಳೆ ವಾಹನಗಳ ಬ್ಯಾನ್ ಮಾಡುವ […]

ಫೆ. 22ರಿಂದ 6,7,8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭ: ಸುರೇಶ್ ಕುಮಾರ್

ಬೆಂಗಳೂರು: ಇದೇ ತಿಂಗಳ 22ರಿಂದ ನಮ್ಮ ರಾಜ್ಯದಲ್ಲಿ 6, 7, 8 ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತೆ. ಜುಲೈ15 ರಿಂದ ಕರ್ನಾಟಕ ರಾಜ್ಯದ ಮುಂದಿನ ಶೈಕ್ಷಣಿಕ ವರ್ಷ ಆರಂಭ ಆಗಲಿದೆ. ಒಂದನೇ ತಾರೀಖಿನಿಂದ ವಿದ್ಯಾಗಮ ಮಾಡುವ ಬಗ್ಗೆ‌ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಶಾಲೆಗಳ ಆರಂಭದ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಒಂದನೇ ತರಗತಿಯಿಂದ ಚಟುವಟಿಕೆ ಆರಂಭ ಮಾಡೋಕೆ ಒತ್ತಾಯ ಬರ್ತಾ ಇದೆ. 6,7,8,9ಕ್ಕೆ ವಿದ್ಯಾಗಮ ತರಗತಿ ಆರಂಭ ಮಾಡಿದ್ದೇವೆ ಎಂದು […]

ಇಂದಿನಿಂದ ಅಡುಗೆ ಅನಿಲ ದರ ಹೆಚ್ಚಳ

ಗೃಹ ಬಳಕೆಯ ಅನಿಲ ಸಿಲಿಂಡರ್ (14.2 ಕೆ.ಜಿ) ಬೆಲೆ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ʼಗೆ 50 ರೂಪಾಯಿ ಏರಿಕೆ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 769 ರೂಪಾಯಿ ಆಗಲಿದೆ. ಕರ್ನಾಟಕದಲ್ಲಿ 724 ರೂ ಆಗಲಿದೆ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ʼಗಳ ಬೆಲೆಯನ್ನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲ್ಪಡುತ್ತವೆ. ಅಂತಾರಾಷ್ಟ್ರೀಯ ಇಂಧನ ದರಗಳು ಮತ್ತು ಯುಎಸ್ ಡಾಲರ್-ರೂಪಾಯಿ ವಿನಿಮಯ ದರಗಳನ್ನ ಅವಲಂಬಿಸಿ, ಬೆಲೆಗಳು ಏರಬಹುದು ಅಥವಾ ಇಳಿಕೆಯಾಗಬಹುದು. ಇಂಧನ […]

ದಶವಾರ ಮತ್ತು ಬಿ.ವಿ.ಹಳ್ಳಿ ಗ್ರಾಮ ಪಂಚಾಯಿತಿ: ಜೆ.ಡಿ.ಎಸ್ ತೆಕ್ಕೆಗೆ

ಚನ್ನಪಟ್ಟಣ ತಾಲ್ಲೂಕು ಬಿ.ವಿ.ಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆ.ಡಿ.ಎಸ್ ಪಕ್ಷದ ಬೆಂಬಲಿತ ಪಾರ್ವತಮ್ಮ ರವರು  ಆಯ್ಕೆಯಾಗುವ ಮೂಲಕ ಬಿ.ವಿ. ಹಳ್ಳಿ ಗ್ರಾಮ ಪಂಚಾಯಿತಿಯು ಜೆ.ಡಿ.ಎಸ್ ಪಾಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಹೆಚ್.ಸಿ. ಜಯಮುತ್ತು ರವರು  ಜೆ. ಡಿ. ಎಸ್ ಮುಖಂಡರಾದ ಶಿವಪ್ಪ ಅರಳಾಳುಸಂದ್ರ. ಗಿರೀಶ್ ಬಾಬು ಬಿ.ವಿ ಪಾಳ್ಯ. ಮಹೇಶ್ ಬಿ.ವಿ ಹಳ್ಳಿ ದೊಡ್ಡೇಗೌಡ. ಬಿ.ವಿ ಹಳ್ಳಿ. ಜಗದೀಶ್ ವಿಠಲೇನಹಳ್ಳಿ. ಕುಮಾರ್  ಅರಳಾಳುಸಂದ್ರ. ರವಿ ಬಿ.ವಿ ಹಳ್ಳಿ ನಾಗೇಶ್. ರಾಜಣ್ಣ .ನೂತನ ಗ್ರಾಮಪಂಚಾಯಿತಿಯ ನಮ್ಮ […]

ಗ್ರಾಮಪಂಚಾಯ್ತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ಗ್ರಾಮಪಂಚಾಯ್ತಿಗಳ  ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಗೊಂಡು  ಗ್ರಾಮ ಪಂಚಾಯ್ತಿಗಳಲ್ಲಿ  ಹಲವಾರು ರೀತಿಯ ವಿಧ್ಯಮಾನಗಳು ನಡೆದು ಅಂತಿಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿವೆ.

Back To Top