ಗ್ರಾಮಪಂಚಾಯ್ತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ
ಗ್ರಾಮಪಂಚಾಯ್ತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಗೊಂಡು ಗ್ರಾಮ ಪಂಚಾಯ್ತಿಗಳಲ್ಲಿ ಹಲವಾರು ರೀತಿಯ ವಿಧ್ಯಮಾನಗಳು ನಡೆದು ಅಂತಿಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿವೆ.
ಹಿಮನದಿ ದುರಂತ : ಮುಂದುವರೆದ ಕಾರ್ಯಚರಣೆ
ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಹಿಮನದಿ ದುರಂತದ ನಂತರ ಕೇಂದ್ರದ ವಿಪತ್ತು ನಿರ್ವಹಣಾ ಪಡೆಗಳಾದ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಭೊಸೇನಾ ಮತ್ತು ವಾಯು ಸೇನಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾದಲ್ಲಿ ತೊಡಗಿವೆ. ಹೈಡ್ರೊ ಎಲೆಕ್ಟ್ರಿಕ್ ಪವರ್ ಪ್ಲಾನೆಟ್‌ನಲ್ಲಿ ಕೆಲಸ ಮಾಡುತ್ತಿದ 148 ಕಾರ್ಮಿಕರು ಸೇರಿ ರಿಷಿಗಂಗದಲ್ಲಿ 22 ಜನರು ಕಾಣೆಯಾಗಿದ್ದಾರೆ. ಇನ್ನೂ 30 ಮಂದಿ ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ಈ ಘಟನೆ ನಡೆದ ಬಳಿಕ ಜೋಷಿಮಠ ಪ್ರದೇಶದ ಸುತ್ತಮುತ್ತಲಿನ 13 ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿದೆ. ಇದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ, ಪ್ರವಾಹದಿಂದಾಗಿ ರಕ್ಷಣಾ […]
ಕಳೆದ ವರ್ಷದ ಅತಿಥಿ ಉಪನ್ಯಾಸಕರ ಮುಂದುವರಿಕೆ
ಕಳೆದ ವರ್ಷದ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸ್ವಲ್ಪ ಮಟ್ಟಿಗೆ ಅತಿಥಿ ಉಪನ್ಯಾಸಕರಿಗೆ ಇದು ಸಮಾಧಾನಕರ ಸುದ್ಧಿಯಾಗಿದೆ. ಈ ಕುರಿತು ಫೆ 08, 2020 ರಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಖಾಯಂ ಉಪನ್ಯಾಸಕರನ್ನು ಹೊರತು ಪಡಿಸಿ 14,183 ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರವನ್ನು ವಿಭಾಗಿಸಬೇಕಾಗಿದೆ. ಆದರೆ ಆರ್ಥಿಕ ಇಲಾಖೆಯು 7091 ಅಂದರೆ 50% ಉಪನ್ಯಾಸಕರ ನೇಮಕಕ್ಕೆ ಅವಕಾಶವನ್ನು ನೀಡಿದೆ. ಆ ಕುರಿತು ಕಾಲೇಜಿನ ಪ್ರಾಂಶಿಪಾಲರಿಗೆ ಸುತ್ತೋಲೆಯನ್ನು ರವಾನಿಸಿದೆ. ಕಾಲೇಜುಗಳಲ್ಲಿ […]
ಸಹಕಾರ ಶಿಕ್ಷಣ ನಿಧಿಗೆ 4 ಲಕ್ಷ ರೂ ಚೆಕ್ ವಿತರಣೆ
ಚನ್ನಪಟ್ಟಣ ಶಿಬಿರ ಕಚೇರಿಯಲ್ಲಿ ಬಮುಲ್ ನಿರ್ದೇಶಕರಾದ ಹೆಚ್.ಸಿ. ಜಯಮುತ್ತು ರವರು ಚನ್ನಪಟ್ಟಣ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಸಹಕಾರ ಶಿಕ್ಷಣ ನಿಧಿಗೆ 4 ಲಕ್ಷ ರೂಪಾಯಿಗಳ ಚೆಕ್ಕನ್ನು ರಾಮನಗರ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಿಂ.ಲಿಂ. ನಾಗರಾಜು ರವರಿಗೆ ನೀಡಿದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕುಕ್ಕೂರುದೊಡ್ಡಿ ಜಯರಾಮು ರವರು ಉಪ ವ್ಯವಸ್ಥಾಪಕರಾದ ಡಾ. ಕೆಂಪರಾಜು ರವರು. ಹಾಗೂ ಮುಖಂಡರು ಉಪಸ್ಥಿತರಿದ್ದರು.
ಉತ್ತರಾಖಂಡ ಹಿಮಪ್ರವಾಹ : 150 ಕ್ಕೂ ಹೆಚ್ಚು ಮಂದಿ ನಾಪತ್ತೆ
ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದಲ್ಲಿ ದುರಂತವೊಂದು ನಡೆದು ಹೋಗಿದೆ. ಹಿಮಪಾತ ಸಂಭವಿಸಿದ ಪರಿಣಾಮ, ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ನೂರಾರು ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಧೌಲಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ನದಿ ತಟದ ರೌನಿ ಎಂಬ ಗ್ರಾಮಕ್ಕೆ ನೀರು ನುಗ್ಗಿದೆ. ಅಷ್ಟೇ ಅಲ್ಲ, ಜಲವಿದ್ಯುತ್ ಸ್ಥಾವರ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲೂ ಭಾರೀ ನಷ್ಟ ಉಂಟಾಗಿದೆ. ಈವರೆಗಿನ ಅಂದಾಜಿನ […]
ಕೋವಿಡ್‌ನಿಂದ ಜೈವಿಕ-ವೈದ್ಯ ತ್ಯಾಜ್ಯದ ಬೆಟ್ಟ
ಕೋವಿಡ್ ಸೋಂಕು ಬಳಿಕ 7 ತಿಂಗಳಲ್ಲಿ 33,000 ಟನ್ ಜೈವಿಕ-ವೈದ್ಯ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ತಿಳಿಸಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಮಾಣದ 3,587ಟನ್‌ತ್ಯಾಜ್ಯ ಉತ್ಪತ್ತಿಯಾಗಿದೆ. ಅಕ್ಟೋಬರ್‌ನಲ್ಲಿ ಗರಿಷ್ಠ ಪ್ರಮಾಣ, 5,500ಟನ್‌ದತ್ಯಾಜ್ಯಉತ್ಪತ್ತಿಯಾಗಿದೆ. Courtesyg: Google (photo)
ವುಹಾನ್: ವೈರಸ್ ಮೂಲ ಇನ್ನೂ ನಿಗೂಢ
ಚೀನಾದ ವುಹಾನ್‌ನಲ್ಲಿ ಕೋವಿಡ್‌ಗೆ ಮೊದಲ ಬಲಿ ಸಂಭವಿಸಿ ಒಂದು ವರ್ಷವಾಗಿದ್ದು, ವೈರಸ್‌ನ ಮೂಲ ಕುರಿತ ನಿಖರ ಉತ್ತರ ಸಿಕ್ಕಿಲ್ಲ. ವುಹಾನಿನ ಮಾಂಸದ ಮಾರ್ಕೆಟ್‌ಗೆ ಹೋಗುತ್ತಿದ್ದ 61ರ ಹರೆಯದ ವ್ಯಕ್ತಿ ಕಳೆದ ಜ.೧೧ರಂದು ಮೃತಪಟ್ಟಿದ್ದರು. ಆನಂತರ ವೈರಸ್ ಜಗತ್ತನ್ನೇ ವ್ಯಾಪಿಸಿದೆ. ರೂಪಾಂತರಗೊAಡು ಪ್ರಪಂಚವನ್ನು ನಡುಗಿಸಿದೆ. ಕೊರೊನಾ ವೈರಸ್ ಕಾಣಿಸಿಕೊಂಡ ಬಗೆ, ಪ್ರಸರಣ, ತಡೆಗಟ್ಟುವ ವಿಧಾನ ಕುರಿತು ಚೀನಾ ಗೋಪ್ಯತೆ ಕಾಪಾಡಿಕೊಂಡಿದೆ. ಯಾವುದೇ ಮಾಹಿತಿ ನೀಡುತ್ತಿಲ್ಲ. ವೈರಸ್ ಮೂಲದ ಪ್ರಶ್ನೆ ವಿಜ್ಞಾನ ಜಗತ್ತಿಗೆ ಕಬ್ಬಿಣ ಕಡಲೆಯಾಗೇ ಉಳಿದಿದೆ. Courtesyg: Google […]
ಎಫ್‌ಎಂಸಿಜಿ ಉತ್ಪನ್ನ ತುಟ್ಟಿ ಸಾಧ್ಯತೆ
ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಬಳಕೆ ವಸ್ತು(ಎಫ್‌ಎಂಸಿಜಿ)ಗಳ ಉತ್ಪಾದಕ ಕಂಪನಿಗಳು ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಇದಕ್ಕೆ ಕಾರಣ. ಕೊಬ್ಬರಿ, ತಾಳೆ ಎಣ್ಣೆ ಮತ್ತಿತರ ಖಾದ್ಯ ತೈಲಗಳ ಬೆಲೆ ಹೆಚ್ಚಳದ ಹೊರೆಯನ್ನು ಎಫ್‌ಎಂಸಿಜಿ ಕಂಪನಿಗಳು ತಾವೇ ಹೊತ್ತುಕೊಂಡಿದ್ದವು. ಆದರೆ, ಇದರಿಂದ ಲಾಭ ಕಡಿಮೆಯಾಗುತ್ತಿರುವುದರಿಂದ, ಹಾಲಿ ಬೆಲೆಗೆ ಮಾರಾಟ ಕಷ್ಟವಾಗುತ್ತಿದೆ. ಸಫೋಲಾ ಮತ್ತು ಪ್ಯಾರಾಚೂಟ್ ಬ್ರ್ಯಾಂಡ್ ಉತ್ಪಾದಕ ಕಂಪನಿ ಮಾರಿಕೋ ಈಗಾಗಲೇ ಬೆಲೆ ಹೆಚ್ಚಳ ಮಾಡಿದ್ದು, ಡಾಬರ್, ಪಾರ್ಲೆ, ಪತಂಜಲಿ ಮತ್ತಿತರ ಕಂಪನಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ. […]
ಅನರ್ಹರಿಗೂ ಕಿಸಾನ್ ಸಮ್ಮಾನ್!
ಸರ್ಕಾರದ ಹಣ ಸೋರಿಕೆಯಾಗುವುದು, ಅಪಾತ್ರರಿಗೆ ಸಂದಾಯ ಆಗುವುದು ಆಶ್ರ‍್ಯಪಡಬೇಕಾದ ವಿಷಯವೇನಲ್ಲ. ಸೋರಿಕೆಯ ಇನ್ನೊಂದು ಪ್ರಕರಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ(ಪಿಎಂಕೆವೈ)ಯಡಿ 20.48 ಲಕ್ಷ ಅನರ್ಹರಿಗೆ 1,364.12 ಕೋಟಿ ರೂ. ಪ್ರೋತ್ಸಾಹಧನ ಪಾವತಿ ಮಾಡಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ಪ್ರೋತ್ಸಾಹಧನ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಗೆ 2019ರಲ್ಲಿ ಚಾಲನೆ ನೀಡಲಾಗಿದೆ. ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ ವೆಂಕಟೇಶ ನಾಯಕ್ ಎಂಬುವರು ಯೋಜನೆ ಕುರಿತು ಮಾಹಿತಿ ಕೋರಿ, ಆರ್‌ಟಿಐ […]