Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಜಿಡಿಪಿ ಕುಸಿತ ಪ್ರಮಾಣ ಕಡಿಮೆ

ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದ ಬೆಳವಣಿಗೆ ದರ ಸತತ ಎರಡು ತ್ರೈಮಾಸಿಕಕಗಳಲ್ಲಿ ಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಏಪ್ರಿಲ್–ಜೂನ್ ತಿಂಗಳಲ್ಲಿ ದಾಖಲೆ ಶೇ.–೨೩.೯ರಷ್ಟು ಕುಸಿತ ಕಂಡಿದ್ದ ಜಿಡಿಪಿ, ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇ.–೭.೫ರಷ್ಟು ಕುಸಿತ ಕಂಡಿದೆ. ಕೋವಿಡ್ ಹರಡುವಿಕೆ ತಡೆಯಲು ಹೇರಿದ್ದ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಕುಸಿತದ ಪ್ರಮಾಣ ಕಡಿಮೆ ಆಗಿದೆ ಎನ್ನಲಾಗಿದೆ. ಜುಲೈ–ಸೆಪ್ಟೆಂಬರ್ ತ್ರೈಮಾಸಿಕಕದಲ್ಲಿ ತಯಾರಿಕಾ ವಲಯದ ಬೆಳವಣಿಗೆ ದರ ಶೂನ್ಯಕ್ಕಿಂತ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ವಲಯ ಶೇ.೦.೬ರಷ್ಟು ಬೆಳವಣಿಗೆ ದಾಖಲಿಸಿದೆ. […]

Uber, Ola surge price capped; 10-hour break must for taxi drivers

Ride-hailing aggregators such as Ola and Uber  have been brought under the Centre’s regulation, implying greater scrutiny and stringent penalties for any non-compliance related to passenger fare and labour rules like working hours of drivers. Government control over the cab tariff structure tops the list of regulations. The new norms, as per the Motor Vehicle […]

Lakshmi Vilas Bank becomes DBS India

Tamil Nadu-based Lakshmi Vilas Bank (LVB) with pre-independence lineage on Friday lost its identity after its merger with the Indian subsidiary of Singapore’s DBS Bank. The debt-ridden 94-year old old bank’s fate was sealed with Union Cabinet headed by Prime Minister Narendra Modi approving Scheme of Amalagamation on Wednesday. The Reserve Bank of India had […]

ಪ್ರಕೃತಿಯ ಉಳಿವು-ಒಳಿತಿಗಾಗಿ ಸಮಾಜದ ಕೆಲಸ

ಅನಂತಶಯನ. –ಸಂತೋಷ ಕೌಲಗಿ ಜನಪದ ಸೇವಾ ಟ್ರಸ್ಟ್ ಮೇಲುಕೋಟೆ-571431   ಅದು 2004-05. ಸ್ವಿಜ್ಟರ್‌ಲ್ಯಾಂಡ್‌ನಲ್ಲಿ 33 ವರ್ಷದ ಭಾರತೀಯ ಯುವಕನೊಬ್ಬ ಐ ಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ಕೈ ತುಂಬ ಹಣ. ಮದುವೆಯಾಗಿ ಒಂದೆರಡು ವರ್ಷ ಕಳೆದಿದೆ ಅಷ್ಟೆ. ಯಾವುದಕ್ಕೂ ಕಡಿಮೆ ಇಲ್ಲ. ಸುಖವಾದ ಬದುಕು. ಆದರೂ, ಆ ಯುವಕನಿಗೆ ನೆಮ್ಮದಿ ಇಲ್ಲ. ಪರಿಸರದ ಮೇಲೆ ಮನುಷ್ಯ ನಡೆಸುತ್ತಿರುವಅವ್ಯಾಹತ ದಾಳಿಯ ಬಗ್ಗೆ ಎಲ್ಲೋ ಒಳಗೆ ನೋವು. ಆದರೆ, ಏನು ಮಾಡಲೂ ಧೈರ್ಯ ಸಾಲದು. ಒಂದು ವಾರಾಂತ್ಯ ಮನೆಯಲ್ಲೇ […]

ಆಸ್ಟ್ರಾ ಜೆನೆಕಾದಿಂದ ಸುಳ್ಳು ಮಾಹಿತಿ: ಆಕ್ಷೇಪ

ಆಸ್ಟ್ರಾ ಜೆನೆಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕುರಿತ ಮಾಹಿತಿ ತಪ್ಪಾಗಿದೆ ಎಂದು ತಜ್ಞರು ಆಕ್ಷೇಪಿಸಿದ್ದು, ಈ ಸಂಬಂಧ ವ್ಯಾಪಕ ಚರ್ಚೆ ನಡೆಯುತ್ತಿದೆ. ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಅರ್ಧ ಡೋಸ್ ಶೇ. ೯೦ ಹಾಗೂ ೨ ಪೂರ್ಣ ಡೋಸ್ ಶೇ.೭೦ ರಷ್ಟು ಪರಿಣಾಮಕಾರಿ ಎಂದು ಕಂಪನಿ ಸೋಮವಾರ ತಿಳಿಸಿತ್ತು. ಆದರೆ, ಪೂರ್ಣ ಡೋಸ್ ನೀಡಿದ ೨೮ ದಿನಗಳ ನಂತರ ಅರ್ಧ ಡೋಸ್ ನೀಡಲಾಗಿತ್ತು. ಒಟ್ಟು ಒಂದೂವರೆ ಡೋಸ್ ಪಡೆದವರಲ್ಲಿ ಲಸಿಕೆಯ ಪರಿಣಾಮ ಶೇ.೯೦ರಷ್ಟು ಇತ್ತು ಎಂದು […]

ಮೆಟ್ರೋ ರೀಚ್ ೪ ಬಿ: ಡಿಸೆಂಬರ್ ೩ನೇ ವಾರ ಆರಂಭ?

ಮೆಟ್ರೊ ಎರಡನೇ ಹಂತದ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿಸಿದ ಮಾರ್ಗ ರೈಲು ಸೇವೆ ಡಿಸೆಂಬರ್ ಮೂರನೇ ವಾರ ಆರಂಭವಾಗಲಿದೆ. ರೈಲು ಸುರಕ್ಷತಾ ಆಯುಕ್ತರ ತಂಡ(ಸಿಎAಆರ್‌ಎಸ್) ಈ ಮಾರ್ಗದ ಪರಿಶೀಲನೆ ನಡೆಸಿದೆ. ತಂಡ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿದ್ದು, ಸರಿಪಡಿಸಲು ಸೂಚಿಸಿದೆ. ಇದಕ್ಕೆ ಒಂದೆರಡು ವಾರ ಸಮಯ ಹಿಡಿಯುತ್ತದೆ. ತಂಡ ನ.೩೦ ರಂದು ವರದಿ ನೀಡಲಿದ್ದು, ವಾಣಿಜ್ಯ ಸಂಚಾರ ಸೇವೆಗೆ ಅನುಮತಿ ನೀಡಲಿದೆ. ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಸೇವೆ ಪ್ರಾರಂಭಿಸುವ ಉದ್ದೇಶವಿದೆ.  ಎರಡನೇ ಹಂತದಲ್ಲಿ ಸೇವೆ ನೀಡಲಿರುವ ಪ್ರಥಮ […]

ನಿರೀಕ್ಷೆಗಿಂತ ಶೀಘ್ರ ಆರ್ಥಿಕ ಚೇತರಿಕೆ

ದೇಶದ ಅರ್ಥ ವ್ಯವಸ್ಥೆ ನಿರೀಕ್ಷೆಗಿಂತಲೂ ಹೆಚ್ಚು ವೇಗವಾಗಿ ಚೇತರಿಕೆ ಕಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹಬ್ಬಗಳು ಮುಗಿದ ನಂತರ ಮಾರುಕಟ್ಟೆಯಲ್ಲಿ ಬೇಡಿಕೆ ಎಷ್ಟು ಸ್ಥಿರವಾಗಿ ಇರುತ್ತದೆ ಎಂಬುದನ್ನು ಗಮನಿಸಬೇಕು. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆ ಶೇ.-೨೩.೯ರಷ್ಟು ಕುಸಿತ ಕಂಡಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.– ೯.೫ರಷ್ಟು ಕುಸಿತ ಕಾಣಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬAದಿದ್ದರೂ, ಕೊರೊನಾ ಸೋಂಕು ಯುರೋಪಿನ ಕೆಲವೆಡೆ ಹಾಗೂ ದೇಶದ […]

ಪ್ರಥಮ ಪಿಯು: ದಾಖಲು ಅವಧಿ ವಿಸ್ತರಣೆ

ಪ್ರಥಮ ಪಿಯುಸಿ ಪ್ರವೇಶ ಅವಧಿಯನ್ನು ಡಿ.೧೨ರವರೆಗೆ ವಿಸ್ತರಿಸಲಾಗಿದೆ. ರಾಜ್ಯದ ಎಲ್ಲ ಪಿಯು ಕಾಲೇಜುಗಳು ತಮ್ಮ ಸೂಚನಾ ಫಲಕ ಮತ್ತು ವೆಬ್‌ಸೈಟ್‌ನಲ್ಲಿ ಇಲಾಖೆಯಿಂದ ಅನುಮತಿ ಪಡೆದ ಸಂಯೋಜನೆವಾರು ಹಾಗೂ ರೋಸ್ಟರ್‌ವಾರು ಪ್ರವೇಶಗಳ ಮಾಹಿತಿ, ದಾಖಲು ಶುಲ್ಕದ ವಿವರ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿಯ ಪೂರ್ಣ ವಿವರ ನೀಡಬೇಕು ಎಂದು ಇಲಾಖೆ ಹೇಳಿದೆ.

ಕಪ್ಪೆಯ ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ಪ್ರಾಣಿ ವಿಜ್ಞಾನಿಗಳು ಹೊಸ ಪ್ರಭೇದದ ಬಿಲಗಪ್ಪೆಯೊಂದನ್ನು ಪತ್ತೆ ಹಚ್ಚಿದ್ದು, ಸ್ಫೇರೊಥೆಕಾ ಬೆಂಗಳೂರು (Sphaerotheca bengaluru) ಎಂದು ನಾಮಕರಣ ಮಾಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸ್ಫೇರೊಥೆಕಾ ವಂಶದ ಕಪ್ಪೆಗಳ ಬಾಹ್ಯ ವಿಜ್ಞಾನ ಮತ್ತು ಆನುವಂಶಿಕ ವ್ಯತ್ಯಾಸಗಳ ಆಧಾರದ ಮೇಲೆ ಹೊಸ ಪ್ರಬೇಧವನ್ನು ವಿವರಿಸಲಾಗಿದೆ. ಈ ಕುರಿತು ನ್ಯೂಜಿಲೆಂಡ್‌ನಿಂದ ಪ್ರಕಟವಾಗುವ ಪ್ರಾಣಿ ವಿಜ್ಞಾನದ ಅಂತಾರಾಷ್ಟ್ರೀಯ ನಿಯತಕಾಲಿಕೆ ಜೂಟ್ಯಾಕ್ಸಾದಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಭಾರತದಲ್ಲಿ ಇತ್ತೀಚೆಗೆ ಉಭಯವಾಸಿಗಳ ಆವಿಷ್ಕಾರಗಳು ಹೆಚ್ಚುತ್ತಿವೆ. ಜೀವವೈವಿಧ್ಯದ ಅತಿಸೂಕ್ಷ್ಮ ತಾಣಗಳಲ್ಲಿ(ಹಾಟ್‌ಸ್ಪಾಟ್) ಅಥವಾ ಹಸಿರು ಹೊದಿಕೆಯುಳ್ಳ ಅರಣ್ಯಗಳಲ್ಲೇ […]

Back To Top