ನರೇಗಾ: 1,200 ಕೋಟಿ ರೂ. ಹೆಚ್ಚುವರಿ ಅನುದಾನ
ರಾಜ್ಯದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮ-ನರೇಗಾ)ಯಡಿ ಇನ್ನಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯಕ್ಕೆ 1.200 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲು ಸಮ್ಮತಿ ಸೂಚಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರ ಹಾಲಿ ವರ್ಷ 2 ಕೋಟಿ ಹೆಚ್ಚುವರಿ ಮಾನವ ದಿನಗಳನ್ನು ಸೃಷ್ಟಿಸಲು ಅವಕಾಶ ನೀಡಿದೆ. 2020-21ನೇ ಸಾಲಿಗೆ ಮನರೇಗಾ ಯೋಜನೆಯಡಿ 13 ಕೋಟಿ ಮಾನವ ದಿನಗಳ ಗುರಿ ನಿಗದಿಪಡಿಸಿದೆ. ಪ್ರವಾಹ […]
ಎಲ್‌ವಿಬಿ-ಡಿಬಿಎಸ್ ವಿಲೀನ
ಡಿಬಿಎಸ್ ಬ್ಯಾಂಕ್ ಜೊತೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಶುಕ್ರವಾರ ವಿಲೀನ ಆಗಲಿದ್ದು, ಎಲ್‌ವಿಬಿ ಮೇಲೆ ವಿಧಿಸಿದ್ದ ನಿರ್ಬಂಧಗಳು ತೆರವಾಗಲಿವೆ. ಎಲ್‌ವಿಬಿ ಮತ್ತು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನ ವಿಲೀನ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಶುಕ್ರವಾರದಿಂದ ಎಲ್‌ವಿಬಿಯ ಎಲ್ಲ ಶಾಖೆಗಳು ಡಿಬಿಎಸ್ ಬ್ಯಾಂಕ್ ಶಾಖೆಗಳಾಗಿ ಕೆಲಸ ನಿರ್ವಹಿಸಲಿವೆ ಎಂದು ಆರ್‌ಬಿಐ ತಿಳಿಸಿದೆ. ಶುಕ್ರವಾರದಿಂದ ಎಲ್‌ವಿಬಿ ಗ್ರಾಹಕರು ಡಿಬಿಎಸ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ನಿರ್ವಹಿಸಬಹುದು. ಎಲ್‌ವಿಬಿ ಮೇಲಿನ ನಿರ್ಬಂಧಗಳು ಇರುವುದಿಲ್ಲ. ಎಲ್‌ವಿಬಿ ಗ್ರಾಹಕರಿಗೆ ಸಮಗ್ರ ಸೇವೆ ಒದಗಿಸಲು […]
Sebi chief Ajay Tyagi gets 6-month extension
Securities and Exchange Board of India (Sebi) chairman Ajay Tyagi was given a six-month extension on Friday, officials aware of the matter said. Indian Administrative Service (IAS) officer of Himachal Pradesh cadre, Tyagi’s three-year tenure was to end on Saturday. With his tenure now extended, Tyagi will be able to continue with his development agenda, […]
Ethiopia ignores global concern
THE WAR in Ethiopia continued to rage even as Prime Minister Abiy Ahmed rejected growing international consensus for a dialogue and a halt to deadly fighting in the Tigray region. According to Ahmed, this is interference by the international community. He believes that Ethiopia will handle the conflict on its own even as a 72-hour surrender […]
ನಿವಾರ್: ಭಾರಿ ಮಳೆ, ಚಂಡಮಾರುತ ಸಾಧ್ಯತೆ
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಚಂಡಮಾರುತದ ಸಾಧ್ಯತೆ ಹೆಚ್ಚಿದೆ. ನ.೨೫ರ ಸಂಜೆ ತೀವ್ರ ಚಂಡಮಾರುತವು ಚೆನ್ನೈ ಮತ್ತು ಪುದುಚೇರಿಯನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡು ಮತ್ತು ಪುದುಚೇರಿಯ ಹಲವೆಡೆ ಮಳೆಯಾಗಿದ್ದು, ಚೆನ್ನೈನಲ್ಲಿ ವರ್ಷಧಾರೆ ಸುರಿದಿದೆ. ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿರುವುದಲ್ಲದೆ, ತಮಿಳುನಾಡಿನ ಹಲವು ಜಲಾಶಯಗಳು ಭರ್ತಿಯಾಗಿವೆ. ಚಂಬರಕ್ಕಂ ಅಣೆಕಟ್ಟಿನ ಒಳಹರಿವು ಪರಿಶೀಲನೆಯಲ್ಲಿದೆ. ಚಂಡಮಾರುತದ ಜೊತೆಗೆ ಭಾರಿ ಗಾಳಿ ಬೀಸುವುದರಿಂದ, ಮರ ಮತ್ತು ವಿದ್ಯುತ್ ಕಂಬಗಳು ಉರುಳುವ, ವಿದ್ಯುತ್ ತಂತಿಗಳು ತುಂಡಾಗುವ ಸಾಧ್ಯತೆಯಿದೆ. ೧೩೦-೧೪೦ […]
ಸ್ಪುಟ್ನಿಕ್ ಲಸಿಕೆ: ಶೇ.95 ಪರಿಣಾಮಕಾರಿ
ಸ್ಪುಟ್ನಿಕ್-ವಿ ಲಸಿಕೆ ಕೊರೊನಾ ವೈರಸ್ ನಿಯಂತ್ರಣದಲ್ಲಿ ಶೇ.95ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ. ಮಾಸ್ಕೋದಲ್ಲಿ ನಡೆದ ವರ್ಚ್ಯುವಲ್ ಸಭೆಯಲ್ಲಿ ಮಾತನಾಡಿದ ರಷ್ಯಾ ಡೈರೆಕ್ಟ್ ಇನ್‌ವೆಸ್ಟ್ಮೆಂಟ್ ಫಂಡ್(ಆರ್‌ಡಿಐಎಫ್) ಸಿಇಒ ಕಿರಿಲ್ ಡಿಮಿಟ್ರಿವ್, ಸ್ಪುಟ್ನಿಕ್ ವಿ ಹೆಚ್ಚು ಪರಿಣಾಮಕಾರಿ ಹಾಗೂ ಕಡಿಮೆ ದರದ ಲಸಿಕೆ. ಲಸಿಕೆಯ ಪುಡಿಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಿಸಬಹುದು. ಇದರಿಂದ ಶೇಖರಣೆ, ಸಾಗಣೆ ವೆಚ್ಚ ಕಡಿಮೆ ಆಗಲಿದೆ ಎಂದಿದ್ದಾರೆ. ಸ್ಪುಟ್ನಿಕ್‌ನ ಒಂದು ಡೋಸ್ ದರ ಸುಮಾರು 740 ರೂ. ಮೊದಲ ಡೋಸ್ […]
ಕೊಬ್ಬರಿ ಬೆಲೆ ಹೆಚ್ಚಳ
ಕೊಬ್ಬರಿ ಬೆಲೆ ಸ್ವಲ್ಪ ಹೆಚ್ಚಳವಾಗಿದ್ದು, ಕ್ವಿಂಟಾಲ್‌ಗೆ 14 ಸಾವಿರ ರೂ. ಗಡಿ ದಾಟಿದೆ. ಅರಸೀಕೆರೆಯಲ್ಲಿ ದರ 14,070 ರೂ. ಇದೆ. ಲಾಕ್‌ಡೌನ್‌ಗೆ ಮೊದಲು 10,500 ರೂ. ಇದ್ದ ದರ,ಆನಂತರ ಖರೀದಿ ಮತ್ತೆ ಆರಂಭಗೊAಡಾಗ 11,200 ರೂ.ಗೆ ಹೆಚ್ಚಳಗೊಂಡಿತ್ತು. ಅಂದಾಜು 3-4 ತಿಂಗಳು ಕೊಬ್ಬರಿ ಬೆಲೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ನಿಗದಿಪಡಿಸಿದ್ದ ಬೆಲೆಗಿಂತ ಕಡಿಮೆ ಇತ್ತು. ನಾಫೆಡ್ ಖರೀದಿ ಕೇಂದ್ರ ಆರಂಭಗೊಂಡ ಬಳಿಕ 11ರೂ.ಸಾವಿರ ಮತ್ತುದೀಪಾವಳಿ ಸಂದರ್ಭದಲ್ಲಿ೧೩ ಸಾವಿರ ರೂ. ಆಸುಪಾಸಿನಲ್ಲಿತ್ತು. ದೀಪಾವಳಿ ನಂತರ […]
ಚಿನ್ನದ ದರ ಇಳಿಕೆ
ಚಿನ್ನದ ದರ 10ಗ್ರಾಂಗೆ ಗರಿಷ್ಠ 1,324 ರೂ. ಹಾಗೂ ಬೆಳ್ಳಿ ದರ ಕೆ.ಜಿಗೆ ಗರಿಷ್ಠ 1,782ರೂ. ಇಳಿಕೆಯಾಗಿದೆ. ಮುಂಬೈನಲ್ಲಿ10 ಗ್ರಾಂ ಚಿನ್ನದ ದರ 48,779 ರೂ. ಹಾಗೂ ದೆಹಲಿಯಲ್ಲಿ 48,569 ರೂ.,ಇದೆ. ಮುಂಬೈನಲ್ಲಿ ಕೆಜಿ ಬೆಳ್ಳಿ ಧಾರಣೆ 1,782 ರೂ. ಇಳಿಕೆ ಕಂಡು59,704 ರೂ.ಗೆ ಮಾರಾಟವಾಗಿದೆ. ದಿಲ್ಲಿಯಲ್ಲಿ 59,301 ರೂ.ಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಹಾಗೂ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯಏರಿಕೆಯಿಂದ ದೇಶಿ ಮಾರುಕಟ್ಟೆಯಲ್ಲಿಚಿನ್ನದ ದರ ಇಳಿಕೆಯಾಗಿದೆ ಎಂದು […]
ನೀಲಿ ಬೆಳಕಿನ ಸಮುದ್ರ
ಕರಾವಳಿಯ ಕೆಲವು ಪ್ರದೇಶದಲ್ಲಿ ಕಳೆದೆರೆಡು ದಿನಗಳಿಂದ ಸಮುದ್ರದ ನೀರು ರಾತ್ರಿ ವೇಳೆ ನೀಲಿ ಬೆಳಖು ಸೂಸುತ್ತಿದೆ. ನೀರು ಬಣ್ಣದಿಂದ ಪ್ರಜ್ವಲಿಸುತ್ತಿರುವುದನ್ನು ನೋಡಲು ಜನ ಕಿಕ್ಕಿರಿದು ನೆರೆಯುತ್ತಿದ್ದಾರೆ. ಸಮುದ್ರದ ನೀರಿನಲ್ಲಿರುವ ಪಾಚಿಯಂತಿರುವ ಸೂಕ್ಷ್ಮಾಣುಜೀವಿಯಿಂದ ಈ ಬೆಳಕು ಬರುತ್ತಿದೆ ಎನ್ನಲಾಗಿದೆ. ತುಳುನಾಡಿನಲ್ಲಿ ಈ ಬೆಳಕನ್ನು ಮೀನುಗಾರರು ಬೊಲ್ಮುಕಾರುನು ಎಂದು ಕರೆಯುತ್ತಾರೆ.ಬೊಲ್ಮು ಮಿಂಚುಹುಳವನ್ನು ಹೋಲುವ ಸೂಕ್ಷಾಣುಜೀವಿ. ಚಂದ್ರ ಮತ್ತು ಸೂರ್ಯನ ಬೆಳಕಿದ್ದಾಗ ಕಂಡು ಬರುವುದಿಲ್ಲ. ಬೊಲ್ಮು ಕಂಡುಬಂದಲ್ಲಿ ಮೀನುಗಾರಿಕೆಗೆ ಹಿನ್ನೆಡೆಯಾಗುತ್ತದೆ ಎಂದು ಮೀನುಗಾರರು ಅಭಿಪ್ರಾಯ ಪಡುತ್ತಾರೆ. Courtesyg: Google (photo)