ಬಿಟಿಎಸ್ ತಂತ್ರಜ್ಞಾನ ಮೇಳ
ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಮೇಳ ಬೆಂಗಳೂರು ಟೆಕ್ ಸಮಿಟ್-2020(ಬಿಟಿಎಸ್) ಆರಂಭವಾಗಿದೆ. ನಗರದ ಶಾಂಗ್ರಿಲಾ ಹೋಟೆಲ್ನಲ್ಲಿ ನ.19ರಂದು ಬೆಳಿಗ್ಗೆ 10ಕ್ಕೆ ಪ್ರಧಾನ ನರೇಂದ್ರ ಮೋದಿ ವರ್ಚುವಲ್ ಮಾಧ್ಯಮದ ಮೂಲಕ ಚಾಲನೆ ನೀಡಲಿದ್ದಾರೆ. ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್, ಸ್ವಿಜ್ ಗಣರಾಜ್ಯದ ಉಪಾಧ್ಯಕ್ಷ ಗೈ ಪರ್ಮೆಲಿನ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಂವಹನ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಜಗದೀಶ್ ಶೆಟ್ಟರ್ ಮೇಳದ 23 ನೇ ಆವೃತ್ತಿಗೆ ಭಾಗಿಯಾಗಲಿದ್ದಾರೆ. ನ. 19ರಿಂದ 21ರವರೆಗೆ […]
ನಷ್ಟದಲ್ಲಿ ಷೇರು ಹೊಡಿಕೆದಾರ: ಸಂಕಷ್ಟಕ್ಕೆ ಸಿಲುಕಿದ ಗ್ರಾಹಕರು
ಲಕ್ಷ್ಮೀ ವಿಲಾಸ್ ಬ್ಯಾಂಕಿನ(ಎಲ್ವಿಬಿ) ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರ ಒಂದು ತಿಂಗಳ ಅವಧಿಗೆ ವಿಧಿಸಿರುವ ನಿರ್ಬಂಧಗಳ ಪರಿಣಾಮವಾಗಿ ಬ್ಯಾಂಕಿನ ಗ್ರಾಹಕರು ತಾತ್ಕಾಲಿಕವಾಗಿ ತೊಂದರೆಗೆ ಒಳಗಾ ದರೂ, ಹಣ ಸುರಕ್ಷಿತವಾಗಿ ಇರುತ್ತದೆ. ಬ್ಯಾಂಕ್ನ ಬಾಂಡ್ಗಳನ್ನು ಖರೀದಿ ಮಾಡಿದವರು ಕೂಡ ನಷ್ಟದ ಭೀತಿಯಲ್ಲಿ ಇರಬೇಕಾಗಿಲ್ಲ ಎನ್ನುತ್ತಾರೆ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ತಜ್ಞರು. ಎಲ್ವಿಬಿ ಷೇರುದಾರರು ಅತಿಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈಗ ಪ್ರಸ್ತಾಪಿಸಲಾಗಿರುವ ವಿಲೀನ ಸೂತ್ರದ ಪ್ರಕಾರ, ಎಲ್ವಿಬಿಯು ಸಿಂಗಪುರ ಮೂಲದ ಡಿಬಿಎಸ್ ಬ್ಯಾಂಕಿನಲ್ಲಿ ವಿಲೀನ […]
ಲಕ್ಷ್ಮೀ ವಿಲಾಸ್ ಠೇವಣಿದಾರರ ಹಣ ಸುರಕ್ಷಿತ
ಲಕ್ಷ್ಮೀ ವಿಲಾಸ್ ಠೇವಣಿದಾರರ ಹಣ ಬ್ಯಾಂಕ್ನಲ್ಲಿ ಸುರಕ್ಷಿತವಾಗಿದೆ. ಠೇವಣಿದಾರರಿಗೆ ಹಿಂದಿರುಗಿಸಲು ಅಗತ್ಯ ಇರುವಷ್ಟು ಹಣ ಇದೆ ಎಂದು ಲಕ್ಷ್ಮೀ ವಿಲಾಸ್ ಬ್ಯಾಂಕಿನ(ಎಲ್ವಿಬಿ) ಆಡಳಿತ ಅಧಿಕಾರಿ ಟಿ.ಎನ್. ಮನೋಹರನ್ ತಿಳಿಸಿದರು. ಬ್ಯಾಂಕ್ ವಹಿವಾಟಿನ ಮೇಲೆ ನಿರ್ಬಂಧ ವಿಧಿಸಿದ ಕ್ರಮವು ಮಂಗಳವಾರ ತಡರಾತ್ರಿ ನಡೆದಿರುವುದರಿಂದಾಗಿ ಬ್ಯಾಂಕ್ ಶಾಖೆಗಳು, ಎಟಿಎಂಗಳಲ್ಲಿ ಕೆಲವು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುರುವಾರದ ಹೊತ್ತಿಗೆ ಎಲ್ಲವೂ ಸರಿಹೋಗಲಿದೆ. ಠೇವಣಿದಾರರು ಹಣ ಪಡೆಯಲು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಎಲ್ಲಾ ಶಾಖೆಗಳಿಗೂ ಸೂಚನೆ ನೀಡಲಾಗಿದೆ. ಬ್ಯಾಂಕ್ ಬಳಿ, 20ಸಾವಿರ ಕೋಟಿ ರೂ. […]
ಷೇರು ಖರೀದಿಗೆ ವೇದಾಂತ ಕಂಪನಿ ಆಸಕ್ತಿ
ವೇದಾಂತ ಲಿಮಿಟೆಡ್ ಕಂಪನಿಯು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ (ಬಿಪಿಸಿಎಲ್) ಕೇಂದ್ರ ಸರ್ಕಾರ ಹೊಂದಿರುವ ಷೇರುಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಕೇಂದ್ರ ಸರ್ಕಾರವು ಬಿಪಿಸಿಎಲ್ನಲ್ಲಿ ಹೊಂದಿರುವ ಶೇ.58.98 ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ. Courtesyg: Google (photo)
E-market places benefit small retailers
It is often feared that e-retail platforms such as Amazon and Flipkart will bring about the decline of small retailers. But the fact is even the small retailers find it majorly beneficial to use such marketplaces to sell their products. Why so? A study, conducted by a three-member team of Jaipuria Institute of Management, finds […]
HUL looks to raise nutrition metrics across brands
India’s top packaged goods company Hindustan Unilever Ltd(HUL), on Wednesday committed to reducing food wastage and pledged to improved nutritional content of its packaged foods in line with the company’s parent, Unilever’s, Future Foods initiative, that promises to aid consumer transition towards healthier diets and limit environmental impact of the food chain. Under its newly […]
ಬ್ಯಾಂಕ್ ಸೂಪರ್ಸೀಡ್: ಹಣ ವಾಪಸಿಗೆ 25 ಸಾವಿರ ರೂ.ಮಿತಿ
ಕೇಂದ್ರ ಸರ್ಕಾರ ಲಕ್ಷ್ಮೀ ವಿಲಾಸ್ ಬ್ಯಾಂಕ್(ಎಲ್ವಿಬಿ) ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿದ್ದು, ಠೇವಣಿದಾರರು ಗರಿಷ್ಠ 25 ಸಾವಿರ ರೂ.ಮಾತ್ರ ಹಿಂಪಡೆಯಬಹುದು ಎಂದು ತಿಳಿಸಿದೆ. ಖಾಸಗಿ ವಲಯದ ಬ್ಯಾಂಕ್ನ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದ್ದರಿಂದ, ಸೂಪರ್ಸೀಡ್ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ನೀಡಿತ್ತು. ಬ್ಯಾಂಕ್ ಪುನಶ್ಚೇತನಕ್ಕೆ ವಿಶ್ವಾಸಾರ್ಹ ಯಾವುದೇ ಯೋಜನೆ ಇಲ್ಲದ ಕಾರಣ ಠೇವಣಿದಾರರ ಹಿತಾಸಕ್ತಿ ಕಾಯಲು ಹಾಗೂ ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸ್ಥಿರತೆಯ ದೃಷ್ಟಿಯಿಂದ ಸೂಪರ್ಸೀಡ್ ಸಲಹೆ ಹೊರತಾಗಿ ಬೇರೆ ಆಯ್ಕೆಗಳು ಇರಲಿಲ್ಲ. ಕೇಂದ್ರ […]
ಸುಳ್ಳು ಸುದ್ದಿ ತಡೆಗೆ ಸೂಚನೆ
ಸುದ್ದಿ ವಾಹಿನಿಗಳು ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ ಒಡ್ಡಲು ವ್ಯವಸ್ಥೆ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ತಬ್ಲೀಗ್ ಜಮಾತ್ನಿಂದ ಕೋವಿಡ್ ಹರಡಿತು ಎನ್ನುವ ವರದಿಗಳ ವಿರುದ್ಧ ಜಮಾತ್ ಉಲೇಮಾ ಎ ಹಿಂದ್ ಸಂಘಟನೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠ, ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆ ಅಡಿ ನೀವು ತೆಗೆದುಕೊಂಡಿರುವ ಕ್ರಮಗಳು ಯಾವುವು ಎಂದು ಈ […]
ಕಾಲೇಜು ಪುನರಾರಂಭ
ಎಂಟು ತಿಂಗಳ ಬಿಡುವಿನ ಬಳಿಕ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಮಂಗಳವಾರ ಪುನರಾರಂಭವಾಗಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಮತ್ತು ಕೋವಿಡ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದ್ದರಿಂದ, ವಿದ್ಯಾರ್ಥಿಗಳ ಹಾಜರಿ ಶೇ. ೩೦ಕ್ಕಿಂತ ಕಡಿಮೆ ಇತ್ತು. ಸುರಕ್ಷತಾ ಕ್ರಮಗಳು ತೃಪ್ತಿದಾಯಕವಾಗಿದ್ದರೆ ಮಾತ್ರ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಪೋಷಕರು ನಿರ್ಧರಿಸಿದ್ದರಿಂದ, ಹೆಚ್ಚು ವಿದ್ಯಾರ್ಥಿಗಳು ಕಂಡುಬರಲಿಲ್ಲ. ಕೋವಿಡ್ ಪರೀಕ್ಷೆ ಮಾಡಿಸಿದ್ದರೂ, ಹಬ್ಬ ಮತ್ತು ಸಾಲು ರಜೆ ಇದ್ದುದರಿಂದ ಹಲವರಿಗೆ ವರದಿ ಲಭ್ಯವಾಗಿರಲಿಲ್ಲ. ಒಬ್ಬರಿಗೆ ಸೋಂಕು ತಗುಲಿದ್ದರೂ, ಉಳಿದವರಿಗೆ ಹರಡುವ […]