ಎಫ್‌ಪಿಐ ಬಂಡವಾಳ ಹೆಚ್ಚಳ
ವಿದೇಶಿ ಬಂಡವಾಳ ಹೂಡಿಕೆದಾರ(ಎಫ್‌ಪಿಐ)ರು ನವೆಂಬರ್ ಮೊದಲ ವಾರದಲ್ಲಿ 8,381 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಷೇರುಪೇಟೆಯಲ್ಲಿ 6,564 ಕೋಟಿ ಹಾಗೂ ಸಾಲಪತ್ರಗಳಲ್ಲಿ 1,817 ಕೋಟಿ ರೂ. ಹೂಡಿಕೆಯಾಗಿದೆ. ಅಕ್ಟೋಬರ್ ಮಾಸದಲ್ಲಿ 22,033 ಕೋಟಿ ರೂ. ಹೂಡಿಕೆಯಾಗಿತ್ತು. ವಾಣಿಜ್ಯ ಚಟುವಟಿಕೆ ಆರಂಭದ ಜೊತೆಗೆ ಕಂಪನಿಗಳ ತ್ರೈಮಾಸಿಕ ಫಲಿತಾಂಶವೂ ಉತ್ತಮವಾಗಿದೆ. ಹೀಗಾಗಿ ಬಂಡವಾಳ ಒಳಹರಿವು ಹೆಚ್ಚುತ್ತಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಇನ್ನಷ್ಟು ಸ್ಥಿರವಾಗುವ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಗ್ರೋವ್ ಸಂಸ್ಥೆಯ ಸಹ ಸ್ಥಾಪಕ […]
ಜಿಎಸ್‌ಟಿ ಜಾಲತಾಣ ಸಾಮರ್ಥ್ಯ ಹೆಚ್ಚಳ
ಜಿಎಸ್‌ಟಿ ಜಾಲತಾಣದಲ್ಲಿ ಏಕಕಾಲಕ್ಕೆ 3 ಲಕ್ಷ ತೆರಿಗೆದಾರರು ಲಾಗಿನ್ ಆಗಬಹುದು ಎಂದು ಜಿಎಸ್‌ಟಿ ಜಾಲತಾಣ ಭಾನುವಾರ ತಿಳಿಸಿದೆ. ಲಾಕ್‌ಡೌನ್ ಸಡಿಲಿಕೆಯಿಂದ ಪರೋಕ್ಷ ತೆರಿಗೆಗೆ ಸಂಬಂಧಿಸಿದ ಚುಟವಟಿಕೆಗಳಲ್ಲಿ ಗಣನೀಯ ಹೆಚ್ಚಳ ಆಗುತ್ತಿದೆ. ಹೀಗಾಗಿ ಜಾಲತಾಣದ ಸಾಮರ್ಥ್ಯವನ್ನು 1.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಿಎಸ್‌ಟಿಆರ್–3ಬಿಯ ಪಿಡಿಎಫ್ ನಮೂನೆ ನ.12ರಿಂದ ಜಾಲತಾಣದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ. Courtesyg: Google (photo)
ಈಕ್ವಿಟಿ ಮ್ಯೂಚುವಲ್ ಫಂಡ್: ಬಂಡವಾಳ ಹಿಂತೆಗೆತ ಹೆಚ್ಚಳ
ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ ಅಕ್ಟೋಬರ್‌ನಲ್ಲಿ 14,344 ಕೋಟಿ ರೂ. ಬಂಡವಾಳ ಹಿಂಪಡೆದಿದ್ದಾರೆ. ಜೂನ್ ಬಳಿಕ ಒಟ್ಟು 37,498 ಕೋಟಿ ರೂ. ಬಂಡವಾಳ ಹಿಂಪಡೆದಂತಾಗಿದೆ. ದೇಶಿ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕುರಿತ ಆತಂಕದಿಂದಾಗಿ ಬಂಡವಾಳ ಹೊರಹರಿಯುತ್ತಿದೆ ಎಂದು ಫಿನಾಲಜಿ ಕಂಪನಿಯ ಸಿಇಒ ಪ್ರಂಜಲ್ ಕಮ್ರಾ ಹೇಳಿದ್ದಾರೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಷೇರು ಸಂಬಂಧಿತ ಮ್ಯೂಚುವಲ್ ಫಂಡ್ ಯೋಜನೆಗಳಿಂದ 7,200 ಕೋಟಿ ರೂ. ಹೊರಹೋಗಿದ್ದು, ಸಿಪ್(ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಬಂಡವಾಳ ಒಳಹರಿವಿನಲ್ಲೂ ಇಳಿಕೆ […]
ಹೆದ್ದಾರಿಗೆ 20 ಸಾವಿರ ಮರ ಬಲಿ
ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯ ಮೊದಲ ಹಂತದ(71 ಕಿ.ಮೀ) ಕಾಮಗಾರಿಯಲ್ಲಿ 20,748 ಮರಗಳನ್ನು ಕತ್ತರಿಸಬೇಕಾಗುತ್ತದೆ. ಯೋಜನೆಯಿಂದ 30 ಸಾವಿರ ಜನರ ಬದುಕಿನ ಮೇಲೆ ಪರಿಣಾಮವಾಗಲಿದೆ ಎಂದು ವರದಿಯೊಂದ ತಿಳಿಸಿದೆ. 330 ಕಿ.ಮೀ ಉದ್ದದ ಈ ಎಕ್ಸ್ಪ್ರೆಸ್ ಹೆದ್ದಾರಿ ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಮೊದಲ ಹಂತ ಬೆಂಗಳೂರಿನಿAದ ಆರಂಭವಾಗಿ ಮುಳಬಾಗಿಲು ಬೇತಮಂಗಲ ಬಳಿ ಕೊನೆಯಾಗಲಿದೆ. ಹೆದ್ದಾರಿ ಕಾಮಗಾರಿಗೆ ಕೋಲಾರದಲ್ಲಿ ಹೆಚ್ಚು ಮರಗಳು(ಶೇ.85) ನಾಶವಾಗಲಿದೆ. ಮಾವು, ತೆಂಗು, ಸಾಗವಾನಿ, ಪೇರಳೆ, ಕಹಿಬೇವು, ಹುಣಸೆ ಮರಗಳನ್ನು ಕಳೆದುಕೊಳ್ಳುವುದರಿಂದ ಜಿಲ್ಲೆಯ ಪರಿಸರ ಹಾಗೂ […]
Apple logs 253% rise in net profit
After struggling to grow its handset sales during 2018, consumer technology giant Apple has finally turned around its India business. The marketer of popular smart devices like iPhones, iPads, and Mac Books has managed to grow its revenue and profits at a healthy rate during 2019-20. Annual filings, sourced from To fler, show Apple India’s […]
Retail investment in First at 11-Year high
Retail investors boosted their shareholdings in Indian companies to an 1-year high in September with first-time investors continuing to pump in more money into equities. Stocks have rallied in the September quarter as the unlocking of businesses and uptickin economic activity led to a recovery in the overall economy.
Data breach at Bigbasket hits 20 mn users privacy
Online grocer Bigbasket may have suffered a massive data breach following which details of more than 20 million usersmay have been leaked on the dark web, said a US-based cyber security firm. Data worth $40,000 (R30 1lakh) was sold, the Atlanta-headquartered Cyble Inc’s research team found during routine dark web monitoring, it said in a […]
ವಾಟ್ಸ್ಆ್ಯಪ್‌ನಿಂದ ಪಾವತಿ ಸೌಲಭ್ಯ
ಜನಪ್ರಿಯ ಸಂದೇಶವಾಹಕ ವಾಟ್ಸ್ಆ್ಯಪ್ ಶುಕ್ರವಾರದಿಂದ ಪಾವತಿ ಸೇವೆಗಳನ್ನು ಆರಂಭಿಸಿದೆ. ಇದಕ್ಕೆ ಭಾರತೀಯ ಪಾವತಿ ನಿಗಮ(ಎನ್‌ಪಿಸಿಐ)ದಿಂದ ಅನುಮತಿ ಪಡೆಯಲಾಗಿದೆ. ವಾಟ್ಸ್ಆ್ಯಪ್ 2018 ರಿಂದಲೇ ಯುಪಿಐ ಆಧರಿತ ಪಾವತಿ ವ್ಯವಸ್ಥೆಗೆ ಪರೀಕ್ಷಾರ್ಥವಾಗಿ ಚಾಲನೆ ನೀಡಿತ್ತು. ಸಂದೇಶ ರವಾನೆ ವ್ಯವಸ್ಥೆ ಜೊತೆಯಲ್ಲೇ ಹಣ ರವಾನೆ ಹಾಗೂ ಸ್ವೀಕರಿಸುವ ಸೌಲಭ್ಯ ಕಲ್ಪಿಸಿ, ಹತ್ತು ಲಕ್ಷ ಜನರಿಗೆ ಅವಕಾಶ ನೀಡಿತ್ತು. ಹೊಸ ಸೌಲಭ್ಯವನ್ನು ಬಳಕೆದಾರರಿಗೆ ಹಂತ ಹಂತವಾಗಿ ನೀಡಬೇಕು ಎಂದಿರುವ ಎನ್‌ಪಿಸಿಐ, ಆರಂಭದಲ್ಲಿ ಗರಿಷ್ಠ ಎರಡು ಕೋಟಿ ಜನರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಬಹುದು […]
ಜನೌಷಧ ಕೇಂದ್ರಗಳಲ್ಲಿ ಆಯುರ್ವೇದ ಔಷಧ
ಜನೌಷಧ ಕೇಂದ್ರಗಳಲ್ಲಿ ಶೀಘ್ರವೇ ಕಡಿಮೆ ಬೆಲೆಯಲ್ಲಿ ಆಯುರ್ವೇದ ಔಷಧಿಗಳು ಲಭ್ಯವಾಗಲಿವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ. ಜನೌಷಧ ಕೇಂದ್ರಗಳಲ್ಲಿ ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ನೀಡಲಾಗುತ್ತಿದ್ದು, ಶೇ.10 ರಿಂದ ಶೇ.90ರವರೆಗೆ ರಿಯಾಯ್ತಿ ನೀಡಲಾಗುತ್ತಿದೆ. ಜನರಿಕ್ ಮೆಡಿಸಿನ್ ಆ್ಯಪ್ ಬಳಸಿ ಮನೆ ಸಮೀಪದಲ್ಲಿ ಜನೌಷಧ ಮಳಿಗೆ ಎಲ್ಲಿದೆ ಎಂಬುದನ್ನು ಜನ ತಿಳಿದುಕೊಳ್ಳಬಹುದು. ಬೇಕಿರುವ ಔಷಧದ ಹೆಸರನ್ನು ನಮೂದಿಸಿದರೆ, ಅದೇ ಔಷಧಿಯ ಸಂಯೋಜನೆಯ ಬೇರೆ ಕಂಪನಿಗಳ ಉತ್ಪನ್ನಗಳು ಎಲ್ಲಿ ಲಭ್ಯವಿವೆ ಎಂಬುನ್ನು ತಿಳಿದುಕೊಳ್ಳಬಹುದು. ರಾಜ್ಯದ ನಾನಾ […]