Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಗ್ರಾಮೀಣ ಮಕ್ಕಳಿಗೆ ಓದುವ ಬೆಳಕು ಯೋಜನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 6 ರಿಂದ 18ವರ್ಷದೊಳಗಿನ ಮಕ್ಕಳಿಗೋಸ್ಕರ ಓದುವ ಬೆಳಕು ಯೋಜನೆಯನ್ನು ಜಾರಿಗೊಳಿಸಲಿದೆ. ನ.14 ರಂದು ಎಲ್ಲ ಪಂಚಾಯ್ತಿಗಳಲ್ಲೂ ಯೋಜನೆ ಜಾರಿಯಾಗಲಿದೆ.ಪಂಚಾಯ್ತಿ ವ್ಯಾಪ್ತಿಯ ಕನಿಷ್ಠ 20 ಮಕ್ಕಳ ಹೆಸರನ್ನು ಸಮೀಪದ ಗ್ರಂಥಾಲಯಕ್ಕೆ ನೋಂದಾಯಿಸಲು ಪಿಡಿಒಗಳಿಗೆ ಸೂಚಿಸಿದೆ. ಡಿ.15ರ ಒಳಗೆ ಎಲ್ಲ ಮಕ್ಕಳೂ ಗ್ರಂಥಾಲಯದ ಸದಸ್ಯರಾಗಬೇಕು. ಸದಸ್ಯತ್ವ ಶುಲ್ಕವನ್ನು ಪಂಚಾಯ್ತಿಗಳು ಸೆಸ್‌ನಿಂದ ಭರಿಸಬೇಕಿದೆ.   ಈ ಮೊದಲು ಪಂಚಾಯ್ತಿಗಳಲ್ಲಿ ನವೆಂಬರ್ ಮಾಸದಲ್ಲಿ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ನ. 14ರಿಂದ ಜ.24, 2021ರವರೆಗೆ […]

ಸರ್ಕಾರಿ ಐಟಿಐ ಮೇಲ್ದರ್ಜೆಗೆ

ರಾಜ್ಯ ಸರ್ಕಾರ ಮತ್ತು ಟಾಟಾ ಟೆಕ್ನಾಲಜೀಸ್ ಒಟ್ಟಾಗಿ 4.636 ಕೋಟಿ ರೂ. ವೆಚ್ಚದಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಯೋಜನೆಯ ಶೇ.೮೦ರಷ್ಟು ವೆಚ್ಚವನ್ನು ಟಾಟಾ ಟೆಕ್ನಾಲಜೀಸ್ ಹಾಗೂ ರಾಜ್ಯ ಸರ್ಕಾರ ಶೇ.80ರಷ್ಟು ವೆಚ್ಚ ಭರಿಸಲಿದೆ. ಈ ಸಂಬAಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯ ಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತಿಯಲ್ಲಿ ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಹಾಗೂ ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಆನಂದ್ ಭಿಡೆ ಒಪ್ಪಂದಕ್ಕೆ […]

PSLV-C49 to be launched today

India’s Polar Satellite Launch Vehicle in its 51st mission (PSLV-C49) will launch EOS-01 as primary satellite along with nine international customer satellites from Satish Dhawan Space Centre (SDSC) SHAR, Sriharikota. The launch is tentatively scheduled at 15.02 Hrs IST on November 7, 2020, subject to weather conditions, the space agency said. EOS-01 is an earth […]

ವಾಟ್ಸ್ಆ್ಯಪ್ ಸಂದೇಶ ಕಣ್ಮರೆಯಾಗುವ ಸೌಲಭ್ಯ ಶೀಘ್ರ

ವಾಟ್ಸ್ಆ್ಯಪ್‌ನಲ್ಲಿ ಕಳಿಸಿದ ಸಂದೇಶಗಳು ಏಳು ದಿನಗಳಲ್ಲಿ ಕಣ್ಮರೆಯಾಗುವ ವ್ಯವಸ್ಥೆಯನ್ನು  ಪರಿಚಯಿಸಿರುವುದಾಗಿ ವಾಟ್ಸ್ಆ್ಯಪ್ ಹೇಳಿದೆ. ವೈಯಕ್ತಿಕವಾಗಿ ಚಾಟ್ ಮಾಡುವಾಗ ಸಂದೇಶ ಕಣ್ಮರೆ ಆಯ್ಕೆಯನ್ನು ಯಾರು ಬೇಕಾದರೂ ಬಳಸುವ ಇಲ್ಲವೇ ಬಳಸದೇ ಇರುವಂತೆ  ಮಾಡಿಕೊಳ್ಳಬಹುದು. ಆದರೆ, ಗ್ರೂಪ್‌ಗಳಲ್ಲಿ ಅಡ್ಮಿನ್ ಮಾತ್ರ ಅದರ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಫೋನ್‌ಗಳಲ್ಲಿ ಉಳಿದ ವಾಟ್ಸ್ಆ್ಯಪ್ ಸಂದೇಶ-ಚಿತ್ರ ಇತ್ಯಾದಿಯನ್ನು ಗುರುತಿಸಲು ಮತ್ತು ಏಕಕಾಲಕ್ಕೆ ಹಲವನ್ನು ತೆಗೆದುಹಾಕುವ ಸೌಲಭ್ಯ ಈ ವಾರದಿಂದಲೇ ಜಾರಿಗೆ ಬರಲಿದೆ. Courtesyg: Google (photo)  

ಹಿಂಗಾರು: 32 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಗುರಿ ತಲುಪಲು ಮತ್ತು ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ, ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಈ ಬಾರಿ ಉತ್ತಮ ಮಳೆ ಆಗಿರುವುದರಿಂದ, ಹಿಂಗಾರಿನಲ್ಲೂ ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿದೆ. ಅಗತ್ಯವಾದ ರಸಗೊಬ್ಬರ, ಯೂರಿಯಾ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ 11.19ಲಕ್ಷ ಹೆಕ್ಟೇರ್ (ಶೇ.35) […]

ನಂದಿನಿ ಪಶು ಆಹಾರ: ಟನ್‌ಗೆ 500 ರೂ. ಇಳಿಕೆ

ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಫ್) ನಂದಿನಿ ಪಶು ಆಹಾರದ ದರವನ್ನು ಪ್ರತಿ ಟನ್‌ಗೆ 500 ರೂ. ಇಳಿಕೆ ಮಾಡಿದೆ. ಕೋವಿಡ್ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ಮಂಡಳಿ ಕಳೆದ ಫೆಬ್ರವರಿಯಿಂದ ಮೇವರೆಗೆ ಪ್ರತಿ ಟನ್ ನಂದಿನಿ ಪಶು ಆಹಾರದ ಮೇಲೆ 500 ರೂ. ರಿಯಾಯಿತಿ ನೀಡಿತ್ತು. ನಾಲ್ಕು ತಿಂಗಳಲ್ಲಿ ಒಟ್ಟು 10 ರೂ. ಕೋಟಿ ರೂ ರಿಯಾಯಿತಿ ಭರಿಸಲಾಗಿದೆ. ಹೀಗಿದ್ದರೂ, ಪರಿಸ್ಥಿತಿ ಸುಧಾರಿಸದ ಕಾರಣ ಮಂಡಳಿ ನ.5 ರಿಂದ ಅನ್ವಯವಾಗುವಂತೆ ಪ್ರತಿ ಟನ್‌ಗೆ 500 ರೂ. ಬೆಲೆ ಇಳಿಕೆ ಮಾಡಿದೆ. […]

ಫೆಬ್ರವರಿಗೆ ಕೋವ್ಯಾಕ್ಸಿನ್ ಲಸಿಕೆ?

ದೇಶಿ ಕೋವಿಡ್–19 ಲಸಿಕೆ ಮುಂಬರುವ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಮನುಷ್ಯರ ಮೇಲೆ ನಡೆಸಿರುವ ಪ್ರಯೋಗದಲ್ಲಿ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತವೆಂದು ತಿಳಿದು ಬಂದಿದೆ. ಈ ತಿಂಗಳು ಲಸಿಕೆಯ ಕೊನೆಯ ಹಂತದ ಪ್ರಯೋಗ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಕಂಪನಿ ‘ಕೋವ್ಯಾಕ್ಸಿನ್’ ಲಸಿಕೆ ಅಭಿವೃದ್ಧಿ ಪಡಿಸುತ್ತಿವೆ. ಲಸಿಕೆ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಭರವಸೆ ವ್ಯಕ್ತವಾಗಿತ್ತು. ಆದರೆ, ಮುಂಚಿತವಾಗಿಯೇ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ […]

ಪಟಾಕಿ ನಿಷೇಧ:ಕಾಯ್ದಿಟ್ಟ ತೀರ್ಪು

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಪಟಾಕಿ ನಿಷೇಧಿಸುವಂತೆ ಕೋರಿರುವ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ), ತೀರ್ಪನ್ನು ಕಾಯ್ದಿರಿಸಿದೆ. ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಆದರ್ಶಕುಮಾರ್ ಗೋಯಲ್ ನೇತೃತ್ವದ ಹಸಿರು ಪೀಠ, ನ.೯ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತು. ವಾಯುಮಾಲಿನ್ಯದಿಂದ ಕೋವಿಡ್ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಪಟಾಕಿ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಲಿದೆ ಎಂದು ನ್ಯಾಯಮಂಡಳಿ ನೇಮಿಸಿರುವ ಆಮಿಕಸ್ ಕ್ಯೂರಿ […]

ಆದಿನಾರಾಯಣಸ್ವಾಮಿ ಬೆಟ್ಟ ಜೈವಿಕ ಪಾರಂಪರಿಕ ತಾಣ

ಜೈವಿಕ ಪಾರಂಪರಿಕ ತಾಣವಾಗಿ ಆದಿನಾರಾಯಣಸ್ವಾಮಿ ಬೆಟ್ಟಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಸಮೀಪದಲ್ಲಿರುವ ಆದಿನಾರಾಯಣಸ್ವಾಮಿ ಬೆಟ್ಟ ಹಾಗೂ ದಕ್ಷಿಣ ಜಿಲ್ಲೆ ಕಡಬ ತಾಲೂಕಿನ  ಕುಮಾರಧಾರಾ ನದಿ ತೀರದ ಉರುಂಬಿಗೆ ಜೈವಿಕ ಸೂಕ್ಷ್ಮ ಪ್ರದೇಶ ಪಟ್ಟ ನೀಡಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ. ಅಲ್ಲದೆ, ನೆಲಮಂಗಲದ ಮಹಿಮರಂಗ ಬೆಟ್ಟ, ಕೋಲಾರದ ಅಂತರಗಂಗೆ ಬೆಟ್ಟವನ್ನು ಕೂಡ ಜೀವವೈವಿಧ್ಯ ತಾಣ ಎಂದು ಘೋಷಿಸಲು ಮಂಡಳಿ ತೀರ್ಮಾನಿಸಿದೆ.  ಚಿಕ್ಕಮಗಳೂರುನ ಸಖರಾಯಪಟ್ಟಣದ ಶಕುನಗಿರಿ ಬೆಟ್ಟ ಪ್ರದೇಶವನ್ನು ಪಕ್ಕದಲ್ಲೇ ಇರುವ ಹೊಗರೆ ಕಾನುಗಿರಿ ಪಾರಂಪರಿಕ ತಾಣಕ್ಕೆ ಸೇರಿಸಲು ಶಿಫಾರಸು […]

Back To Top