Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಕಚ್ಚಾ ಉಕ್ಕು ಉತ್ಪಾದನೆ ಇಳಿಕೆ

ದೇಶದಲ್ಲಿ ಕಚ್ಚಾ ಉಕ್ಕು ಉತ್ಪಾದನೆ ಸೆಪ್ಟೆಂಬರ್ ಮಾಸದÀಲ್ಲಿ ಶೇ.೨.೯ರಷ್ಟು ಇಳಿಕೆಯಾಗಿದೆ. ಒಟ್ಟು ಕಚ್ಚಾ ಉಕ್ಕು ಉತ್ಪಾದನೆ ೮೫.೨ ಲಕ್ಷ ಟನ್ ಎಂದು ವಿಶ್ವ ಉಕ್ಕು ಒಕ್ಕೂಟ ತಿಳಿಸಿದೆ.  ಕಳೆದ ವರ್ಷ ಇದೇ ಅವಧಿಯಲ್ಲಿ ೮೭.೭ ಲಕ್ಷ ಟನ್ ಕಚ್ಚಾ ಉಕ್ಕು ಉತ್ಪಾದನೆ ಮಾಡಲಾಗಿತ್ತು. ಈ ಸೆಪ್ಟೆಂಬರ್‌ನಲ್ಲಿ ೬೪ ದೇಶಗಳ ಒಟ್ಟು ಉತ್ಪಾದನೆ ೧೫.೬೩ ಕೋಟಿ ಟನ್. ೨೦೧೯ರ ಸೆಪ್ಟೆಂಬರ್‌ನಲ್ಲಿ ಇದ್ದ ೧೫.೧೮ ಕೋಟಿ ಟನ್ ಉತ್ಪಾದನೆಗೆ ಹೋಲಿಸಿದರೆ, ಶೇ ೨.೯ರಷ್ಟು ಹೆಚ್ಚಾಗಿದೆ ಎಂದು ಒಕ್ಕೂಟ ಹೇಳಿದೆ. ಚೀನಾದಲ್ಲಿ […]

ಫ್ಯೂಚರ್–ರಿಲಯನ್ಸ್ ಒಪ್ಪಂದಕ್ಕೆ ತಡೆ

ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್ ಕಂಪನಿಯ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ(ಆರ್‌ಐಎಲ್) ₹ ೨೪,೭೧೩ ಕೋಟಿಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಿಂಗಾಪುರದ ಮಧ್ಯಸ್ಥಿಕೆ ಕೇಂದ್ರವು ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆಯನ್ನು ಪ್ರಶ್ನಿಸುವುದಾಗಿ ಫ್ಯೂಚರ್ ಸೋಮವಾರ ಹೇಳಿದೆ. ಅಮೆಜಾನ್ ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಮಧ್ಯಸ್ಥಿಕೆ ಕೇಂದ್ರ ತಡೆಯಾಜ್ಞೆ ನೀಡಿದೆ. ಆದರೆ, ಅಮೆಜಾನ್ ಕಂಪನಿ ಉಲ್ಲೇಖಿಸಿರುವ ಒಪ್ಪಂದದಲ್ಲಿ ತಾನು ಭಾಗಿದಾರ ಅಲ್ಲ ಎಂದು ಫ್ಯೂಚರ್ ಕಂಪನಿ ಹೇಳಿದೆ. ಅಮೆಜಾನ್ ಕಳೆದ ವರ್ಷ ಫ್ಯೂಚರ್ ಕಂಪನಿಯಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು […]

ಈರುಳ್ಳಿ ತಂದ ಕಣ್ಣೀರು

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಬೆಳೆ ಬಹುತೇಕ ನಾಶವಾಗಿದ್ದು, ರೈತರಿಗೆ ಭಾರಿ ನಷ್ಟವುಂಟು ಮಾಡಿದೆ.  ಕಳೆದ ೧೦ ವರ್ಷದÀಲ್ಲಿ ಇದೇ ಮೊದಲ ಬಾರಿಗೆ ಬಿತ್ತನೆ ಮಾಡಿದ ಸಂಪೂರ್ಣ ಬೆಳೆ ನಾಶವಾಗಿದೆ. ನಿರಂತರ ಮಳೆಯಿಂದ ಈರುಳ್ಳಿ ಕೀಳಲು ಸಾಧ್ಯವಾಗದೆ ಮಳೆ ನೀರು ಹೊಲಗಳಲ್ಲಿ ನೀರು ನಿಂತು, ಗಡ್ಡೆ ಸಂಪೂರ್ಣ ಕೊಳೆತು ಹೋಗಿದೆ. ಫಸಲು ಕಿತ್ತವರು ಕೂಡ ಮಳೆಯಿಂದಾಗಿ ಬೆಲೆಯನ್ನು ಎತ್ತಲು ಸಾಧ್ಯವಾಗದೆ ಹೊಲದಲ್ಲೇ ಬಿಟ್ಟಿದ್ದು, ಮೊಳಕೆ ಬಂದು ಹಾಳಾಗಿದೆ.  ಮುಂಗಾರು ಹಂಗಾಮಿನ ಈರುಳ್ಳಿ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರುತ್ತದೆ. […]

ಹೊಸ ಕ್ಯೂಆರ್ ಕೋಡ್ ಕೂಡದು

ಪಾವತಿ ವ್ಯವಸ್ಥೆಗಳನ್ನು ನಿರ್ವಹಣೆ ಮಾಡುವವರು(ಪಿಎಸ್‌ಒ) ಹಣ ಪಾವತಿಗೆ ಹೊಸ ಕ್ಯೂಆರ್ ಕೋಡ್‌ಗಳನ್ನು ಬಿಡುಗಡೆ ಮಾಡಬಾರದು ಎಂದು ಆರ್‌ಬಿಐ ಹೇಳಿದೆ. ಅಂಗಡಿ, ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್‌ ಮೂಲಕ ಹಣ ಪಾವತಿ ಮಾಡಲು ಕ್ಯೂಆರ್ ಕೋಡ್ ಬಳಸಲಾಗುತ್ತದೆ. ಹಾಲಿ ಯುಪಿಐ ಕ್ಯೂಆರ್ ಮತ್ತು ಭಾರತ್ ಕ್ಯೂಆರ್ ಎಂಬ ಎರಡು ಕ್ಯೂಆರ್ ಕೋಡ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. Courtesyg: Google (photo)

ರಾಜಧಾನಿಗೆ ವಿದ್ಯುತ್ ಬಸ್ ಆಗಮನ

ಬಿಎಂಟಿಸಿ ಒಲೆಕ್ಟಾç ಕಂಪನಿಯ ವಿದ್ಯುತ್ ಬಸ್ ಪರೀಕ್ಷಾರ್ಥ ಸಂಚಾರವನ್ನು ನಡೆಸಿದ್ದು, ಈ ಮೂಲಕ ಬೆಂಗಳೂರಿನ ಬಹುದಿನಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಒಲೆಕ್ಟ್ರಾ ಕಂಪನಿಯ ವಿದ್ಯುತ್ ಬಸ್‌ಗಳು ಹೈದರಾಬಾದ್, ಪುಣೆ-ಮುಂಬೈ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಕರ‍್ಯ ನಿರ್ವಹಿಸುತ್ತಿದ್ದು, ಉತ್ತರಾಖಂಡದ ಶಿಲ್ವಾಸ, ಅಸ್ಸಾಂನ ಗುವಾಹಟಿ, ಮಧ್ಯಪ್ರದೇಶದ ಇಂದೋರ್, ಸೂರತ್, ಭೋಪಾಲ್, ಜಬಲ್ಪುರ, ಉಜ್ಜಯಿನಿ ಸೇರಿದಂತೆ ಹಲವೆಡೆ ಸಂಚಾರಕ್ಕೆ ಅನುಮತಿ ಪಡೆದುಕೊಂಡಿದೆ. ಇದಕ್ಕಾಗಿ ೮೦೦ ಬಸ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಿರುಮಲ ಮತ್ತು ಶಬರಿಮಲೆ ಬೆಟ್ಟದಲ್ಲೂ ಕಾರ್ಯಾಚರಣೆ ಮಾಡುತ್ತಿದೆ. ಹೈದರಾಬಾದ್‌ನಲ್ಲಿ […]

ಬೆಂಗಳೂರನ್ನು ಕಾಡುವ ಚಿತ್ತಾ ಮಳೆ

ಅಕ್ಟೋಬರ್ ೧೦ರಿಂದ ಆರಂಭವಾಗಿರುವ ಚಿತ್ತಾ ಮಳೆ, ರಾಜಧಾನಿಯನ್ನು ಕಾಡಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ಅಕ್ಟೋಬರ್ ನಂತರ ಹಿಂಗಾರು ಆರಂಭವಾಗಲಿದೆ. ಕಳೆದ ಹತ್ತು ವರ್ಷದಿಂದ ಹಿಂಗಾರು ದಕ್ಷಿಣ ಒಳನಾಡಿನ ಬೆಂಗಳೂರನ್ನು ಕಾಡುತ್ತಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಅತಿ ಹೆಚ್ಚು ಮಳೆಯಾಗುತ್ತಿತ್ತು.ಆದರೆ, ಕೆಲ ವರ್ಷಗಳಿಂದ ಅಕ್ಟೋಬರ್‌ನಲ್ಲಿ ಭಾರಿ ಮಳೆ ಸುರಿಯುತ್ತಿದೆ ಎಂದು ಪರಿಣತರು ಹೇಳುತ್ತಾರೆ. “ಚಿತ್ತಾ’ ಹಿಂಗಾರಿನ ಮೊದಲ ಮಳೆ. ಯಾವಾಗ ಬೇಕಾದರೂ, […]

ಘನ ತ್ಯಾಜ್ಯ ನಿರ್ವಹಣೆ ನೀತಿಗೆ ಸಮ್ಮತಿ

ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ಡಿಸೆಂಬರ್ ೨೦೨೧ರ ಅಂತ್ಯದ ವೇಳೆಗೆ ಶೇ.೧೦೦ರಷ್ಟು ಘನ ತ್ಯಾಜ್ಯವನ್ನು ಮನೆಗಳ ಹಂತದಲ್ಲೇ ವಿಂಗಡಿಸಿ, ಸಂಗ್ರಹಿಸಿ, ವಿಲೇವಾರಿ ಮಾಡುವ ಗುರಿ ಹೊಂದಿರುವ ನೀತಿಗಳಿಗೆ ಸಮ್ಮತಿ ನೀಡಲಾಗಿದೆ. ಕರ್ನಾಟಕ ನಗರ ಘನ ತ್ಯಾಜ್ಯ ನಿರ್ವಹಣೆ ನೀತಿ-೨೦೨೦ ಮತ್ತು ಕರ್ನಾಟಕ ನಗರ ಘನ ತ್ಯಾಜ್ಯ ನಿರ್ವಹಣೆ ಕಾರ್ಯತಂತ್ರ- ೨೦೨೦ಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ಜೈವಿಕವಾಗಿ ಕರಗಬಹುದಾದ ಘನ ತ್ಯಾಜ್ಯವನ್ನು ಸಂಪೂರ್ಣವಾಗಿ ಸಂಸ್ಕರಿಸುವ ಗುರಿಯನ್ನು ಈ ನೀತಿ ಹೊಂದಿದೆ. ಅಲ್ಲದೆ, ಭೂಮಿಯಲ್ಲಿ ಹೂಳುವ ಘನ ತ್ಯಾಜ್ಯದ […]

ಪ್ರಾದೇಶಿಕ ಭಾಷೆಯಲ್ಲಿ ಜೆಇಇ

2021ರಿಂದ ಜಂಟಿಪ್ರವೇಶ ಪರೀಕ್ಷೆ(ಜೆಇಇ)ಯನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪರೀಕ್ಷೆ ಸದ್ಯ ಇಂಗ್ಲಿಷ್, ಹಿಂದಿ ಹಾಗೂ ಗುಜರಾತಿ ಭಾಷೆಗಳಲ್ಲಿ ಮಾತ್ರ ನಡೆಯುತ್ತಿದೆ. ಆದರೆ, ಪರೀಕ್ಷೆ ನಡೆಯಲಿತುವ ಪ್ರಾದೇಶಿಕ ಭಾಷೆಗಳು ಯಾವುವು ಎಂಬುದನ್ನು ಕೇಂದ್ರ ಶಿಕ್ಷಣ ಸಚಿವ ಸ್ಪಷ್ಟಪಡಿಸಿಲ್ಲ.

ಸ್ಮಾರ್ಟ್ಫೋನ್ : ಚೀನಾದ ಬಿಗಿ ಹಿಡಿತ

ಲಾಕ್‌ಡೌನ್ ಹಿನ್ನೆಲೆÀಯಲ್ಲಿ ಕುಸಿದಿದ್ದ ಸ್ಮಾರ್ಟ್‌ಫೋನ್‌ ಮಾರಾಟ ಈಗ ಹೆಚ್ಚಳಗೊಂಡಿದ್ದು, ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದಲ್ಲಿ ಐದು ಕೋಟಿ ಸ್ಮಾರ್ಟ್ಫೋನ್‌ಗಳು ಮಾರಾಟ ಆಗಿವೆ. ಈ ಹೆಚ್ಚಳದ ಲಾಭ ಆಗಿರುವುದು ಚೀನಾದ ಕಂಪನಿಗಳಿಗೆ! ಚೀನಾದ ಕಂಪನಿಗಳ ಪಾಲು ಶೇ. ೭೬ರಷ್ಟು ಇದ್ದು, ಶಿವೋಮಿ, ಸ್ಯಾಮ್‌ಸಂಗ್, ವಿವೊ, ರಿಯಲ್‌ಮಿ ಹಾಗೂ ಒಪ್ಪೊ ಮುಂಚೂಣಿಯಲ್ಲಿವೆ. ಈ ಕಂಪನಿಗಳ ಉತ್ಪನ್ನಗಳ ಮಾರಾಟ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.೮ ರಷ್ಟು ಹೆಚ್ಚಳಗೊಂಡಿದೆ. ತ್ರೈಮಾಸಿಕ ಒಂದರಲ್ಲಿ ಐದು ಕೋಟಿ ಸ್ಮಾರ್ಟ್ಫೋನ್‌ಗಳು ಮಾರಾಟ ಆಗಿರುವುದು ಭಾರತದ […]

Back To Top