Surging UPI failure rates worry banks
The record surge in online payments since the onset of the pandemic is testing the digital infrastructure of public sector banks beset by sharp spikes in failed transactions, data from the National Payments Corporation of India (NPCI) shows. Ten of the top 30 banks using the country’s unified payment interface ( UPI) network recorded failure […]
ಆಕಾಶಕ್ಕೆ ಏರಿದ ಈರುಳ್ಳಿ ದರ
ಈರುಳ್ಳಿ ದರ ದಿಢೀರ್ ಏರಿಕೆಯಾಗಿದ್ದು, ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ ₹೧೦೦, ಸೋಮವಾರದ ₹೬೦ರಿಂದ ₹೭೦ರಷ್ಟಿತ್ತು. ಒಂದೇ ದಿನಕ್ಕೆ ದಿಢೀರ್ ದರ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ಕನಿಷ್ಠ ₹೮೦ರಿಂದ ಗರಿಷ್ಠ ₹೧೦೦ಕ್ಕೆ ತಲುಪಿದೆ. ಹಾಪ್‌ಕಾಮ್‌ನಲ್ಲಿ ಈರುಳ್ಳಿ ದರ ಪ್ರತಿ ಕೆ.ಜಿ.ಗೆ ₹೮೫ ಹಾಗೂ ಚಿಲ್ಲರೆ ದರ ₹೧೨೦ರವರೆಗೆ ದಾಟಿದೆ. ಈರುಳ್ಳಿ ಉತ್ಪಾದನೆಯಾಗುತ್ತಿದ್ದಾ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದ ಈರುಳ್ಳಿ ಬೆಳೆಗಳು ಹಾನಿಗೊಂಡಿವೆ. ಉತ್ತಮ ಗುಣಮಟ್ಟದ ಈರುಳ್ಳಿಗೆ ಬೇಡಿಕೆ […]
ಆರೋಗ್ಯ ಕವಚ-೧೦೮ ಶೀಘ್ರದಲ್ಲೇ ಅನುಷ್ಠಾನ
ಹೃದಯಾಘಾತದಿಂದ ಹೆಚ್ಚಾಗುತ್ತಿರುವಾ ಅಕಾಲಿಕ ಸಾವುಗಳು ತಪ್ಪಿಸಲು ಆರೋಗ್ಯ ಇಲಾಖೆ, ‘ಆರೋಗ್ಯ ಕವಚ ೧೦೮’ ಆಂಬುಲೆನ್ಸ್ ಸೇವೆಯ ಆರಂಭಿಸಲು ಮುಂದಾಗಿದೆ. ವ್ಯಕ್ತಿಗೆ ಎದೆನೋವು ಕಾಣಿಸಿಕೊಂಡ ಒಂದು ಗಂಟೆಯೊಳಗೆ ಚಿಕಿತ್ಸೆ ನೀಡಲು ಯೋಜನೆ ರೂಪಿಸಿಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(ಎನ್‌ಎಚ್‌ಎಂ) ‘ಸ್ಟೆಮಿ’ ಹೃದಯ ಸ್ನಾಯುವಿನ ಸೋಂಕು ನಿವಾರಣೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು, ಮೈಸೂರು ಹಾಗೂ ಕಲಬುರ್ಗಿ ಘಟಕವನ್ನು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಬಳಸಿಕೊಂಡು, ಸೇವೆ ನೀಡಲಾಗುತ್ತದೆ. ಇಸಿಜಿ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಲು ಬೇಕಾದ […]
ಜಗತ್ತಿನ ನಾಲ್ಕನೆಯ: ನಾವಿನ್ಯತಾ ಕೇಂದ್ರ ಬೆಂಗಳೂರಿನಲ್ಲಿ
ಬೆಂಗಳೂರಿನಲಿ ್ಲನಾವಿನ್ಯತಾ ಕೇಂದ್ರ ಸ್ಥಾಪನೆಗೆ ಮುಂಬರುವಾ ಐದು ವರ್ಷಗಳ ₹ ೧,೩೯೦ ಕೋಟಿ ಖರ್ಚಿನಲ್ಲಿ ನಿರ್ಮಾಣವಾಗಲಿದೆ ಎಂದು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದ ಸಿಮನ್ಸ್ ಹೆಲ್ತಿನರ್ಸ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಪೀಟರ್ ಶಾರ್ಟ್ ತಿಳಿಸಿದರು. ಇದರಿಂದ ಭಾರತದ ಹಲವಾರು ಮಾರುಕಟ್ಟೆಯು ಕಂಪನಿಯ ಬೆಳವಣಿಗೆಗೆ ಪ್ರಮುಖ ಪಾತ್ರ‍್ರ ವಹಿಸುತ್ತಿದೆ. ಹೀಗಾಗಿ ೨೦೨೫ರ ಕಾರ್ಯತಂತ್ರದ ಒಂದು ಭಾಗವಾಗಿ ಈ ಹೂಡಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಹಳೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ಅಲ್ಟ್ರಾ ಮಾಡರ್ನ್ಸ್ ಮೆಡಿಕಲ್ ಇಮೇಜಿಂಗ್ […]
ಎಂಎಸ್‌ಎಂಇ: ಸೌಲಭ್ಯಕ್ಕೆ ಆಗ್ರಹ
ಕೋವಿಡ್ ಕಾರಣದಿಂದ ಇಡಿ ದೇಶದಲ್ಲೇ ಅದೇಷ್ಟೋ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಹಲವಾರು ಸವಾಲುಗಳನ್ನು ಎದುರಿಸಿ, ಈಗ ಚೇತರಿಕೆಯ ಸ್ವಲ್ಪ ಚೇತರಿಕೆಯ ದಾರಿ ಹಿಡಿದಿವೆ. ಈ ಸಂದರ್ಭದಲ್ಲಿ ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಸರ್ಕಾರ ಒದಗಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಒತ್ತಾಯಿಸಿದೆ. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಮಾತನಾಡಿ, ಕೋವಿಡ್‌ನಿಂದಾಗಿ ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಇಷ್ಟು ಬೇಗ ಚೇತರಿಕೆ ಕಾಣಬಹುದು ಅಂದುಕೊAಡಿರಲಿಲ್ಲ. ಕೋವಿಡ್ ಕಾರಣ […]
ಕೃಷಿ ಕಾನೂನಿನ ವಿರುದ್ಧ ಪಂಜಾಬ್ ನಿರ್ಣಯ
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧವಾಗಿ ನಾಲ್ಕು ಮಸೂದೆಗಳನ್ನು ಹಾಗೂ ನಿರ್ಣಯವನ್ನು ಪಂಜಾಬ್ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ವಿವಾದಾಸ್ಪದ ಕಾನೂನುಗಳ ವಿರುದ್ಧದ ಕಾಂಗ್ರೆಸ್ ಹೋರಾಟಕ್ಕೆ, ವಿಧಾನಸಭೆಯಲ್ಲಿ ವಿಪಕ್ಷಗಳಾದ ಅಕಾಲಿದಳ, ಆಮ್ ಆದ್ಮಿ ಪಕ್ಷ(ಎಎಪಿ) ಹಾಗೂ ಇನ್ಸಾಫ್ ಪಕ್ಷ ಬೆಂಬಲ ನೀಡಿವೆ. ಈ ಮೂಲಕ ಕೃಷಿ ಕಾನೂನಿನ ವಿರುದ್ಧ ನಿರ್ಣಯ ಮಂಡಿಸಿದ ದೇಶದ ಮೊದಲ ರಾಜ್ಯವಾಗಿ ಪಂಜಾಬ್ ಗುರುತಿಸಿ ಕೊಂಡಿದೆ. ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಹಾಗೂ ಹರಿಯಾಣದಲ್ಲಿ ಪ್ರತಿಭಟನೆಗಳು ಮುಂದುವರಿದಿರುವ ಸಂದರ್ಭದಲ್ಲೇ ಈ ನಿರ್ಣಯ […]
ಡಿಎಲ್‌ಗೆ ಕುತ್ತು ತಂದ ಹೆಲ್ಮೆಟ್
ದೇಶದಲ್ಲಿ ಅಪಘಾತಗಳಿಂದ ಮೃತ ಪಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಳಗೊಂಡಿದೆ. ಬಹುತೇಕ ಅಪಘಾತಗಳಲ್ಲಿ ತಲೆಗೆ ಏಟಿನಿಂದ ಸಾವಿಗೀಡಾಗುವವರ ಪರಮಾಣ ಹೆಚ್ಚು. ಚಾಲಕ ಹೆಲ್ಮೆಟ್ ಧರಿಸಿದರೆ, ಸಾವಿನ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಹೆಲ್ಮೆಟ್ ಧರಿಸದಿದ್ದರೆ ಚಾಲನೆ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡಲು ತೀರ್ಮಾನಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅ.೫ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ೧೬ ಆರ್‌ಟಿಒಗಳಿಗೆ ಸುತ್ತೋಲೆ ಕಳುಹಿಸಿರುವ […]
ವಾಯುಭಾರ ಕುಸಿತ: ಸಂಕಷ್ಟಕ್ಕೆ ಸಿಲುಕಲಿರುವ ರಾಜ್ಯ
ರಾಜ್ಯದ ಅನೇಕ ಜಿಲ್ಲೆಗಳು ಮಹಾಪೂರದಿಂದ ಸಂಕಷ್ಟಕ್ಕೆ ಸಿಲುಕಿವೆ. ಅದರಿಂದ ಸುಧಾರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತಗೊಂಡಿದ್ದು, ಮತ್ತೆ ಮಹಾಪೂರದ ಸಾಧ್ಯತೆ ಹೆಚ್ಚಳಗೊಂಡಿದೆ. ‘ಲಾ ನಿನಾ’ ಪರಿಣಾಮದಿಂದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ೧೨ ಬಾರಿ ವಾಯುಭಾರ ಕುಸಿದಿದೆ. ಇದು ಅತಿ ವಿರಳ ವಿದ್ಯಮಾನ. ಅಕ್ಟೋಬರ್‌ನಲ್ಲೇ ಮೂರು ಬಾರಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳು ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿದ್ದವು. ‘ಲಾ ನಿನಾ’ ಅತ್ಯಂತ ಅಪರೂಪದ ಹವಾಮಾನ ವಿದ್ಯಮಾನ. ಪೆಸಿಫಿಕ್ […]
ಐತಿಹಾಸಿಕ ಹಂಪಿಯಲ್ಲಿ ನಿತ್ಯ ಸ್ಫೋಟ
ಹಂಪಿಯಲ್ಲಿ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಸ್ಫೋಟದಿಂದ ಪ್ರಾಣಿಸಂಕುಲ ಮತ್ತು ಸ್ಮಾರಕಗಳಿಗೆ ಧಕ್ಕೆಯುಂಟಾಗುತ್ತಿದೆ. ಬೆಳ್ಳಂಬೆಳಗ್ಗೆ ಆರಂಭವಾಗುವ ಕಲ್ಲು ಕ್ವಾರಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಹಂಪಿಗೆ ಹತ್ತಿರದ ಕಾಳಘಟ್ಟ, ಧರ್ಮದ ಗುಡ್ಡ ಸಮೀಪದ ಬೆಟ್ಟ ಗುಡ್ಡಗಳಲ್ಲಿ ಭಾರಿ ಪ್ರಮಾಣದಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕುರುಹುಗಳು, ಸ್ಮಾರಕಗಳು ಧಕ್ಕೆಗೊಳಗಾಗುತ್ತಿವೆ. ಚಿರತೆ, ಕರಡಿ, ನವಿಲು ಹಾಗೂ ವಿವಿಧ ಜಾತಿಯ ಪಕ್ಷಿಗಳ ವಾಸ ಸ್ಥಳ ಗಳು ನಾಶವಾಗುವ ಭೀತಿ ಎದುರಾಗಿದೆ. ಸ್ಮಾರಕಗಳಿಗೆ ಯಾವುದೇ ಹಾನಿ ಉಂಟಾಗದಿರಲಿ […]