Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಎಂಎಸ್‌ಎಂಇ: ಸೌಲಭ್ಯಕ್ಕೆ ಆಗ್ರಹ

ಕೋವಿಡ್ ಕಾರಣದಿಂದ ಇಡಿ ದೇಶದಲ್ಲೇ ಅದೇಷ್ಟೋ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಹಲವಾರು ಸವಾಲುಗಳನ್ನು ಎದುರಿಸಿ, ಈಗ ಚೇತರಿಕೆಯ ಸ್ವಲ್ಪ ಚೇತರಿಕೆಯ ದಾರಿ ಹಿಡಿದಿವೆ. ಈ ಸಂದರ್ಭದಲ್ಲಿ ವಿದ್ಯುತ್, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಸರ್ಕಾರ ಒದಗಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಒತ್ತಾಯಿಸಿದೆ. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಮಾತನಾಡಿ, ಕೋವಿಡ್‌ನಿಂದಾಗಿ ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಇಷ್ಟು ಬೇಗ ಚೇತರಿಕೆ ಕಾಣಬಹುದು ಅಂದುಕೊAಡಿರಲಿಲ್ಲ. ಕೋವಿಡ್ ಕಾರಣ […]

ಕೃಷಿ ಕಾನೂನಿನ ವಿರುದ್ಧ ಪಂಜಾಬ್ ನಿರ್ಣಯ

ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧವಾಗಿ ನಾಲ್ಕು ಮಸೂದೆಗಳನ್ನು ಹಾಗೂ ನಿರ್ಣಯವನ್ನು ಪಂಜಾಬ್ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ವಿವಾದಾಸ್ಪದ ಕಾನೂನುಗಳ ವಿರುದ್ಧದ ಕಾಂಗ್ರೆಸ್ ಹೋರಾಟಕ್ಕೆ, ವಿಧಾನಸಭೆಯಲ್ಲಿ ವಿಪಕ್ಷಗಳಾದ ಅಕಾಲಿದಳ, ಆಮ್ ಆದ್ಮಿ ಪಕ್ಷ(ಎಎಪಿ) ಹಾಗೂ ಇನ್ಸಾಫ್ ಪಕ್ಷ ಬೆಂಬಲ ನೀಡಿವೆ. ಈ ಮೂಲಕ ಕೃಷಿ ಕಾನೂನಿನ ವಿರುದ್ಧ ನಿರ್ಣಯ ಮಂಡಿಸಿದ ದೇಶದ ಮೊದಲ ರಾಜ್ಯವಾಗಿ ಪಂಜಾಬ್ ಗುರುತಿಸಿ ಕೊಂಡಿದೆ. ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಹಾಗೂ ಹರಿಯಾಣದಲ್ಲಿ ಪ್ರತಿಭಟನೆಗಳು ಮುಂದುವರಿದಿರುವ ಸಂದರ್ಭದಲ್ಲೇ ಈ ನಿರ್ಣಯ […]

ಡಿಎಲ್‌ಗೆ ಕುತ್ತು ತಂದ ಹೆಲ್ಮೆಟ್

ದೇಶದಲ್ಲಿ ಅಪಘಾತಗಳಿಂದ ಮೃತ ಪಡುವವರ ಸಂಖ್ಯೆ ತೀವ್ರವಾಗಿ ಹೆಚ್ಚಳಗೊಂಡಿದೆ. ಬಹುತೇಕ ಅಪಘಾತಗಳಲ್ಲಿ ತಲೆಗೆ ಏಟಿನಿಂದ ಸಾವಿಗೀಡಾಗುವವರ ಪರಮಾಣ ಹೆಚ್ಚು. ಚಾಲಕ ಹೆಲ್ಮೆಟ್ ಧರಿಸಿದರೆ, ಸಾವಿನ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಹೆಲ್ಮೆಟ್ ಧರಿಸದಿದ್ದರೆ ಚಾಲನೆ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡಲು ತೀರ್ಮಾನಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅ.೫ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ೧೬ ಆರ್‌ಟಿಒಗಳಿಗೆ ಸುತ್ತೋಲೆ ಕಳುಹಿಸಿರುವ […]

ವಾಯುಭಾರ ಕುಸಿತ: ಸಂಕಷ್ಟಕ್ಕೆ ಸಿಲುಕಲಿರುವ ರಾಜ್ಯ

ರಾಜ್ಯದ ಅನೇಕ ಜಿಲ್ಲೆಗಳು ಮಹಾಪೂರದಿಂದ ಸಂಕಷ್ಟಕ್ಕೆ ಸಿಲುಕಿವೆ. ಅದರಿಂದ ಸುಧಾರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತಗೊಂಡಿದ್ದು, ಮತ್ತೆ ಮಹಾಪೂರದ  ಸಾಧ್ಯತೆ ಹೆಚ್ಚಳಗೊಂಡಿದೆ. ‘ಲಾ ನಿನಾ’ ಪರಿಣಾಮದಿಂದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ೧೨ ಬಾರಿ ವಾಯುಭಾರ ಕುಸಿದಿದೆ. ಇದು ಅತಿ ವಿರಳ ವಿದ್ಯಮಾನ. ಅಕ್ಟೋಬರ್‌ನಲ್ಲೇ ಮೂರು ಬಾರಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳು ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿದ್ದವು. ‘ಲಾ ನಿನಾ’ ಅತ್ಯಂತ ಅಪರೂಪದ ಹವಾಮಾನ ವಿದ್ಯಮಾನ. ಪೆಸಿಫಿಕ್ […]

ಐತಿಹಾಸಿಕ ಹಂಪಿಯಲ್ಲಿ ನಿತ್ಯ ಸ್ಫೋಟ

ಹಂಪಿಯಲ್ಲಿ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಸ್ಫೋಟದಿಂದ ಪ್ರಾಣಿಸಂಕುಲ ಮತ್ತು ಸ್ಮಾರಕಗಳಿಗೆ ಧಕ್ಕೆಯುಂಟಾಗುತ್ತಿದೆ. ಬೆಳ್ಳಂಬೆಳಗ್ಗೆ ಆರಂಭವಾಗುವ ಕಲ್ಲು ಕ್ವಾರಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಹಂಪಿಗೆ ಹತ್ತಿರದ ಕಾಳಘಟ್ಟ, ಧರ್ಮದ ಗುಡ್ಡ ಸಮೀಪದ ಬೆಟ್ಟ ಗುಡ್ಡಗಳಲ್ಲಿ ಭಾರಿ ಪ್ರಮಾಣದಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕುರುಹುಗಳು, ಸ್ಮಾರಕಗಳು ಧಕ್ಕೆಗೊಳಗಾಗುತ್ತಿವೆ. ಚಿರತೆ, ಕರಡಿ, ನವಿಲು ಹಾಗೂ ವಿವಿಧ ಜಾತಿಯ ಪಕ್ಷಿಗಳ ವಾಸ ಸ್ಥಳ ಗಳು ನಾಶವಾಗುವ ಭೀತಿ ಎದುರಾಗಿದೆ. ಸ್ಮಾರಕಗಳಿಗೆ ಯಾವುದೇ ಹಾನಿ ಉಂಟಾಗದಿರಲಿ […]

ಯುವ ವಿಜ್ಞಾನಿ ಹಿರಿಮೆಗೆ ಭಾರತೀಯ ಅಮೆರಿಕನ್ ಬಾಲಕಿ

ಹ್ಯೂಸ್ಟನ್: ಭಾರತೀಯ ಮೂಲಕ ಶಾಲಾ ಬಾಲಕಿ ಅನಿಕಾ ಚೆಬ್ರೊಲು, ೧೮.೭೫ ಲಕ್ಷ ರೂ. ಮೊತ್ತದ ‘೩ಎಂ ಯುವ ವಿಜ್ಞಾನಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ೩ಎಂ ಯುವವಿಜ್ಞಾನಿ ಸವಾಲನ್ನು ಅಮೆರಿಕದ ಮಾಧ್ಯಮಿಕ ಶಾಲಾ ವಿಜ್ಞಾನದ ಪ್ರಮುಖ ಸ್ಪರ್ಧೆ ಎಂದು ಪರಿಗಣಿಸಲಾಗಿದೆ. ಅನಿಕಾ ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ಎಂಟನೇ ತರಗತಿ ಓದುತ್ತಿದ್ದಾರೆ. ಕಳೆದ ವರ್ಷ ತೀವ್ರತರವಾದ ಇನ್‌ಫ್ಲುಯೆನ್ಜಾ ಸೋಂಕಿಗೆ ತುತ್ತಾಗಿದ್ದ ಅನಿಕಾ, ಔಷಧ ಕಂಡುಹಿಡಿಯಲು ನಿರ್ಧರಿಸಿದ್ದರು. ಅಷ್ಟರಲ್ಲಿ ಕೋವಿಡ್ ಅಡಿಯಿಟ್ಟಿತು. ‘ಔಷಧ ಅಭಿವೃದ್ಧಿ ಕೆಲಸಕ್ಕೆ ೩ಎಂ ವಿಜ್ಞಾನಿಗಳ ಸಹಕಾರ ದೊರೆಯಬಹುದು ಎಂಬ ಉದ್ದೇಶದಿಂದ […]

Govt plans to Disengage from 5 premier Environment Institutions

Dehradun: In a first of its kind move, the Modi government is planning to ‘disengage’ from five premier environment- forest-wildlife institutions of the country that are presently under the ministry of environment and for ests (MoEF). The disengagement has been proposed by the department of expenditure (ministry of finance) after a review of 16 autonomous […]

Back To Top