ಸೂರ್ಯ ಸತ್ತೇ ಇವುಗಳ ಸಂತತಿ ಇಲ್ಲವಾಗಬೇಕು!
ಬೇರೆ ಗ್ರಹಗಳಲ್ಲಿ ಜೀವಿಗಳಿರಬಹುದು, ಇಲ್ಲದಿರಬಹುದು. ಕಾಲವೆ ಉತ್ತರಿಸಬೇಕು. ಆದರೆ ನಮ್ಮ ಭೂಮಿಯೆ ಏಲಿಯನ್ ತರಹ ಕಾಣುವ ಜೀವಿಯೊಂದನ್ನು ವಿಕಾಸಗೊಳಿಸಿದೆ. ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದಾದ ಈ ಜೀವಿ 0.5 – 1.0 ಮಿ.ಮೀ. ಉದ್ದವಿದ್ದು ಆಳ ಸಾಗರದಿಂದ ಹಿಡಿದು ಮರುಭೂಮಿಯ ಮರಳು ದಿಬ್ಬಗಳವೆರೆಗೆ ಎಲ್ಲೆಡೆ ವಾಸಿಸಬಲ್ಲದು. ಪಾಚಿ ಬೆಳೆಯುವ ಸಿಹಿನೀರಿನ ಕೊಳ, ಕೆರೆ, ಸರೋವರಗಳಲ್ಲೂ ಯಥೇಚ್ಛ ಕಂಡುಬರುತ್ತದೆ. ಅಂತರಿಕ್ಷದ ನಿರ್ವಾತದಲ್ಲೂ ಸಾಯದೆ ಇರಬಲ್ಲದು. -273 ಡಿಗ್ರಿ ಸೆಲ್ಸಿಯಸ್ ಶೈತ್ಯ(Absolute Zero)ದಿಂದ ಹಿಡಿದು 100 ಡಿಗ್ರಿಗೂ ಹೆಚ್ಚಿನ ತಾಪದಲ್ಲಿ ವಾಸಿಸಬಲ್ಲದು. […]




