ಬಿಇಎಂಎಲ್ ಷೇರು ವಿಕ್ರಯ: ಪ್ರಾಥಮಿಕ ಬಿಡ್ ಆಹ್ವಾನ
ಬಿಇಎಂಎಲ್ ಕಂಪನಿಯಲ್ಲಿನ ಶೇ.26ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಪ್ರಾಥಮಿಕ ಬಿಡ್ ಸಲ್ಲಿಸುವಂತೆ ಆಹ್ವಾನಿಸಿದೆ. ಶೇ.26ರಷ್ಟು ಷೇರು ಖರೀದಿಸಿದವರಿಗೆ ಕಂಪನಿಯ ಆಡಳಿತ ನಿರ್ವಹಣೆ ಅಧಿಕಾರ ಸಿಗಲಿದೆ. ಎರಡು ಹಂತಗಳ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಸರ್ಕಾರ ತನ್ನ ಹೂಡಿಕೆಯನ್ನು ಹಿಂಪಡೆಯಲಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ. ಷೇರು ಖರೀದಿಗೆ ಆಸಕ್ತಿ ಇರುವವರು ಮಾ.೧ರೊಳಗೆ ಅರ್ಜಿ ಸಲ್ಲಿಸಬೇಕು. ಹಾಲಿ ಮಾರುಕಟ್ಟೆ ಮೌಲ್ಯದ ಪ್ರಕಾರ ಶೇ.26ರಷ್ಟು ಷೇರುಗಳ […]




