ಪಿಎಫ್: ಶೇ. ೮.೫ ಬಡ್ಡಿ ಪಾವತಿ

ಉದ್ಯೋಗಿಗಳ ಭವಿಷ್ಯನಿಧಿ ಖಾತೆಗೆ ಶೇ.೮.೫ರಷ್ಟು ಬಡ್ಡಿ ಪಾವತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ. ಡಿಸೆಂಬರ್ ೩೧ರಂದು ನಿವೃತ್ತಿ ಆಗಲಿರುವ ಸದಸ್ಯರಿಗೂ ೨೦೧೯–೨೦ ನೇ ಸಾಲಿಗೆ ಶೇ. ೮.೫ರಷ್ಟು ಬಡ್ಡಿ ದರ ಸಿಗುವಂತೆ ನೋಡಿಕೊಳ್ಳಲು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. Courtesyg: Google (photo)

ಕೃಷಿ ಕಾಯ್ದೆಗಳ ವಾಪಸಿಗೆ ಕೇರಳ ಒತ್ತಾಯ

ಕೇರಳ ವಿಧಾನಸಭೆ ಪ್ರತಿಭಟನೆಯಲ್ಲಿ ತೊಡಗಿರುವ ರೈತರಿಗೆ ಬೆಂಬಲ ಸೂಚಿಸಲು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಏಕೈಕ ಬಿಜೆಪಿ ಸದಸ್ಯ ಕೂಡಾ ನಿರ್ಣಯವನ್ನು ಬೆಂಬಲಿಸಿದರು. ಎಲ್‌ಡಿಎಫ್ ಮೈತ್ರಿಕೂಟ, ಯುಡಿಎಫ್ ಮೈತ್ರಿಕೂಟ ಹಾಗೂ ಬಿಜೆಪಿ ಸದಸ್ಯ ಓ. ರಾಜಗೋಪಾಲನ್ ನಿರ್ಣಯ ಬೆಂಬಲಿಸಿದರು. ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾರ್ಪೋರೇಟ್ ಕಂಪನಿಗಳಿಗೆ ನೆರವಾಗಲು ಈ ಕಾನೂನುಗಳನ್ನು ರೂಪಿಸಲಾಗಿದೆ. ಇವುಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಸಂಸತ್ತಿನ ಸ್ಥಾಯಿ ಸಮಿತಿಗೂ ಕಳುಹಿಸದೆ ಈ ಮಸೂದೆಗಳನ್ನು […]

ಆರೋಗ್ಯ: ವಿಷನ್ ಗ್ರೂಪ್ ರಚನೆ

ಆರೋಗ್ಯ ಮತ್ತು ವೈದ್ಯ ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಸಲಹೆ ಹಾಗೂ ಶಿಫಾರಸುಗಳನ್ನು ಪಡೆಯಲು ಸರ್ಕಾರ ನಿಮ್ಹಾನ್ಸ್ ನಿರ್ದೇಶಕ ಡಾ.ಜಿ. ಗುರುರಾಜ್ ಅಧ್ಯಕ್ಷತೆಯಲ್ಲಿ ವಿಷನ್ ಗ್ರೂಪ್ ರಚಿಸಿದೆ. ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಆವಿಷ್ಕಾರಗಳನ್ನು ವಿಷನ್ ಗ್ರೂಪ್ ಸರ್ಕಾರದ ಗಮನಕ್ಕೆ ತರಲಿದೆ. ನಾನಾ ಆರೋಗ್ಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ಗುಣಾತ್ಮಕ ಬದಲಾವಣೆಗೆ ಸಲಹೆ ನೀಡಲಿದೆ. ಆರೋಗ್ಯ ಮತ್ತು ವೈದ್ಯ ಶಿಕ್ಷಣ ಇಲಾಖೆ ನಡುವೆ  ಸಂಯೋಜನೆಯಲ್ಲದೆ, ಗುಣಮಟ್ಟದ ಆರೋಗ್ಯ ಸೇವೆಗೆ ಸಂಬAಧಿಸಿದAತೆ ಶಿಫಾರಸು ಮಾಡಲಿದೆ. ಸಮಿತಿಯಲ್ಲಿ […]

ರೂಪಾಂತರ ಕೊರೊನಾ: ಸೋಂಕಿತರ ಸಂಖ್ಯೆ ೩೩

ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರ ಪೈಕಿ ಇನ್ನಿಬ್ಬರು ಕೋವಿಡ್ ಪೀಡಿತರಾಗಿದ್ದು, ಸೋಂಕಿತÀರ ಸಂಖ್ಯೆ ೩೩ ಕ್ಕೆ ಏರಿಕೆಯಾಗಿದೆ. ನೂರಕ್ಕೂ ಅಧಿಕ ಮಂದಿ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಬ್ರಿಟನ್‌ನಿಂದ ವಾಪಸಾದವರಲ್ಲಿ ೬೩ ಮಂದಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿದ್ದು, ಅದರಲ್ಲಿ ಇಬ್ಬರ ವರದಿ ಮಾತ್ರ ಬಂದಿದೆ. ವಾಪಸಾದವರಲ್ಲಿ ೨,೦೨೮ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಅವರಲ್ಲಿ ೧,೮೮೭ ಮಂದಿಗೆ ಸೋಂಕು ತಗುಲಿಲ್ಲ. ಇನ್ನೂ ೧೦೮ ಮಂದಿಯ ವರದಿ ಬರಬೇಕಿದೆ. ನಾನಾ  ದೇಶಗಳಿಂದ ಆಗಮಿಸಿದ ೭೯೭ ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. […]

ಶಾಲೆ ಆರಂಭ

ಕಳೆದ ಮಾರ್ಚ್ನಿಂದ ಮುಚ್ಚಿದ್ದ ಶಾಲೆ-ಕಾಲೇಜುಗಳು ಜ. ೧ ರಿಂದ ಬಾಗಿಲು ತೆರೆದಿವೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. Courtesyg: Google (photo)

ಹೊಸ ವರ್ಷಕ್ಕೆ ಲಸಿಕೆ ಸಾಧ್ಯತೆ

ಹೊಸ ವರ್ಷದಲ್ಲಿ ಕೋವಿಡ್ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಭಾರತೀಯ ಔಷಧ ಮಹಾ ನಿಯಂತ್ರಕ ವಿ.ಜಿ. ಸೊಮಾನಿ ಸುಳಿವು ನೀಡಿದ್ದಾರೆ. ತಮ್ಮ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಸೀರಂ ಇನ್ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಹಾಗೂ ಫೀಜರ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪ್ರಾಯಶಃ ಇಂದು(ಶುಕ್ರವಾರ) ಅಂತಿಮ ತೀರ್ಮಾನ ಬರಲಿದೆ. ಜ.೨ರಂದು ಕೋವಿಡ್ ಲಸಿಕೆ ಅಣಕು ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಮುಂದಿನ ತಿಂಗಳುಗಳಲ್ಲಿ […]

ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಚೀನಾದ ಜಾಂಗ್ ಶನ್ಶನ್

ಚೀನಾದ ಬಿಲಿಯನೇರ್ ಉದ್ಯಮಿ ಜಾಂಗ್ ಶನ್ಶನ್ ಏಷ್ಯಾದ ಅತ್ಯಂತ ಶ್ರೀಮಂತನ ಪಟ್ಟಕ್ಕೇರಿದ್ದಾರೆ. ಭಾರತದ ಮುಖೇಶ್ ಅಂಬಾನಿ, ತಮ್ಮದೇ ದೇಶದ ಜಾಕ್ ಮಾ ಅವರನ್ನೂ ಹಿಂದಿಕ್ಕಿ ಈ ಸ್ಥಾನ ಅಲಂಕರಿಸಿದ್ದಾರೆ. 66 ವರ್ಷದ ಜಾಂಗ್ ಅವರ ನಿವ್ವಳ ಆಸ್ತಿ ಮೌಲ್ಯವು 2020 ರಲ್ಲಿ 70.9 ಬಿಲಿಯನ್ ಡಾಲರ್ಗಳಷ್ಟು ಏರಿಕೆಯಾಗಿ 77.8 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಹೇಳಿದೆ. ಈ ಪ್ರಕಾರ ಜಾಂಗ್ ಇದೀಗ ವಿಶ್ವದ 11 ನೇ ಶ್ರೀಮಂತ ವ್ಯಕ್ತಿ. ಜಾಂಗ್ ಚೀನಾದ ಅತಿದೊಡ್ಡ […]

ಜಿಯೊದಿಂದ ಜನವರಿಗೆ ಬಂಪರ್ ಕೊಡುಗೆ

ರಿಲಯನ್ಸ್ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್‌ಗಳಿಗೆ ಹೊಸ ವರ್ಷದಿಂದ ಎಲ್ಲ ಕರೆಗಳು ಉಚಿತವಾಗಿ ಲಭ್ಯವಾಗಲಿದೆ ಎಂದು ಜಿಯೊ ಗುರುವಾರ ಪ್ರಕಟಿಸಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನಗಳ ಪ್ರಕಾರದಂತೆ 2021ರ ಜನವರಿ ೧ರಿಂದ ಹೊಸ ಕ್ರಮಗಳನ್ನು ಜಿಯೊ ಅನುಷ್ಠಾನಗೊಳಿಸುತ್ತಿದ್ದು, ಎಲ್ಲ ದೇಶೀಯ ಧ್ವನಿ ಕರೆಗಳ ಮೇಲಿನ ಮೊಬೈಲ್ ನೆಟ್‌ವರ್ಕ್ ಅಂತರ್ ಸಂಪರ್ಕ ಬಳಕೆ ಶುಲ್ಕವನ್ನು ಕೊನೆಗೊಳಿಸಲಾಗುತ್ತಿದೆ. ಐಯುಸಿ ಕ್ರಮಗಳ ಅನುಸಾರ ಜನವರಿ 1ರಿಂದ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್ ಮಾಡುವ ವಾಯ್ಸ್ ಕಾಲ್‌ಗಳಿಗೆ ಶುಲ್ಕ ಇರುವುದಿಲ್ಲ. […]

ರೈತ ಹೋರಾಟ: ಸಿಗದ ಪರಿಹಾರ

ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ಆರನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಜನವರಿ ೪ರಂದು ಚರ್ಚೆ ಮುಂದುವರಿಯಲಿದೆ. ವಿದ್ಯುತ್ ದರ ಹೆಚ್ಚಳ ಹಾಗೂ ಕೃಷಿ ತ್ಯಾಜ್ಯ ದಹಿಸುವ ರೈತರಿಗೆ ದಂಡ ವಿಷಯದಲ್ಲಿ ಸಹಮತ ಏರ್ಪಟ್ಟಿದೆ. ಆದರೆ, ಕೃಷಿ ಮಾರುಕಟ್ಟೆ ಕಾಯ್ದೆಗಳ ರದ್ದು ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಬೇಕೆಂಬ ರೈತರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಸಿಕ್ಕಿಲ್ಲ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಚಿವರಾದ ಪೀಯೂಷ್ ಗೋಯಲ್ ಮತ್ತು ಸೋಮಪ್ರಕಾಶ್ […]

Back To Top