ಜೈವಿಕ ತಾಣವಾಗಿ ರೋರಿಚ್‌ಎಸ್ಟೇಟ್: ಶಿಫಾರಸು
ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ-ರೋರಿಚ್‌ಎಸ್ಟೇಟ್‌ನ್ನು ಪಾರಂಪರಿಕ ಜೈವಿಕ ತಾಣವೆಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಶಿಫಾರಸು ಮಾಡಿದೆ. ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ತಜ್ಞರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡ ಡಿ.24 ರಂದು ಎಸ್ಟೇಟ್‌ಗೆ ಭೇಟಿ ನೀಡಿ, ಪರಿಸರ, ಜೀವವೈವಿಧ್ಯ ಕುರಿತು ಸಮೀಕ್ಷೆ ನಡೆಸಿ, ಸಿದ್ಧಪಡಿಸಿದ ವರದಿಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ಸಲ್ಲಿಸಲಾಗಿದೆÀ. ದೇವಿಕಾರಾಣಿ-ರೋರಿಚ್ ಎಸ್ಟೇಟ್ ರಾಜಧಾನಿಯ ಅದ್ಭುತ ಜೈವಿಕ ಭಂಡಾರವಾಗಿದ್ದು, 2002ರ ಜೀವವೈವಿಧ್ಯ ಕಾಯ್ದೆ ಅಡಿಯಲ್ಲಿ ಪಾರಂಪರಿಕ ತಾಣ ಎಂದು […]




