ಆಕ್ಸ್ಫರ್ಡ್ ಲಸಿಕೆಗೆ ಶೀಘ್ರ ಹಸಿರು ನಿಶಾನೆ
ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರ ಅನುಮತಿ ಸಿಗುವ ಸಾಧ್ಯತೆ ಇದೆ. ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೇಳಿದ್ದ ನಾನಾ ವಿವರಗಳನ್ನು ಔಷಧ ತಯಾರಿಕೆ ಸಂಸ್ಥೆ ಸೀರಂ ಇನ್ಸ್ಟಿಟ್ಯೂಟ್ ನೀಡಿದೆ. ಬಳಕೆಗೆ ಅನುಮತಿ ಶೀಘ್ರವೇ ದೊರೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮನುಷ್ಯರ ಮೇಲಿನ ಲಸಿಕೆ ಪ್ರಯೋಗದ ದತ್ತಾಂಶಗಳನ್ನು ಬ್ರಿಟನ್ನಿನ ಔಷಧ ನಿಯಂತ್ರಣ ಸಂಸ್ಥೆ ವಿಶ್ಲೇಷಿಸುತ್ತಿದೆ. ಅದು ಇನ್ನೂ ಅಂತಿಮ ಘಟ್ಟ ತಲುಪಿಲ್ಲ. ಹೀಗಾಗಿ, ಬ್ರಿಟನ್‌ಗಿಂತ ಮೊದಲೇ ಭಾರತದಲ್ಲಿ ಲಸಿಕೆಗೆ […]




