ಸೆನ್ಸೆಕ್ಸ್: 46 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್
ಮುಂಬೈ ಷೇರುಪೇಟೆ ಇದೇ ಮೊದಲ ಬಾರಿಗೆ 46 ಸಾವಿರದ ಗಡಿ ದಾಟಿದೆ. ವಿದೇಶಿ ಬಂಡವಾಳದ ಒಳಹರಿವು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿನಿಂದ ಮುಂಬೈ ಷೇರುಪೇಟೆ ದಾಖಲೆ ಮಟ್ಟ ತಲುಪಿತು. ಬಿಎಸ್‌ಇ ಸೂಚ್ಯಂಕ 495 ಅಂಶ ಹೆಚ್ಚಳದೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ 46,103 ಅಂಶ ದಾಖಲಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 136 ಅಂಶ ಹೆಚ್ಚಳದೊಂದಿಗೆ ದಾಖಲೆಯ ಮಟ್ಟ 13,529 ಅಂಶ ತಲುಪಿತು. ಏಷ್ಯನ್ ಪೇಂಟ್ಸ್ ಶೇ.3.7ರಷ್ಟು ಗಳಿಕೆ ಹಾಗೂ ಕೋಟಕ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, […]




