ಇನ್ಫೋಸಿಸ್‌ನಿಂದ ಆರು ಸಾಧಕರಿಗೆ ಸನ್ಮಾನ
ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿಗೆ ಇನ್ಫೋಸಿಸ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಸಾಧಕರನ್ನು ಉತ್ತೇಜಿಸಲು ನೀಡಲಾಗುವ ಪ್ರಶಸ್ತಿಯ ಮೊತ್ತ 70 ಲಕ್ಷ ರೂ. ನಗದು, ಚಿನ್ನದ ಪದಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತರು:- ಪ್ರೊ.ಅರಿಂದಮ್ ಘೋಷ್: ಹೊಸ ತಲೆಮಾರಿನ ಕ್ರಿಯಾತ್ಮಕ ಎಲೆಕ್ಟ್ರಾನಿಕ್, ಥರ್ಮೊಎಲೆಕ್ಟ್ರಿಕ್ ಹಾಗೂ ಆಪ್ಟೊ ಎಲೆಕ್ಟ್ರಾನಿಕ್ ಸಾಧನಗಳನ್ನು ರೂಪಿಸಲು ಎರಡು ಆಯಾಮದ ಸೆಮಿ ಕಂಡಕ್ಟರ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಭೌತಿಕ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. […]




