ಪ್ರಥಮ ಪಿಯು: ದಾಖಲು ಅವಧಿ ವಿಸ್ತರಣೆ
ಪ್ರಥಮ ಪಿಯುಸಿ ಪ್ರವೇಶ ಅವಧಿಯನ್ನು ಡಿ.೧೨ರವರೆಗೆ ವಿಸ್ತರಿಸಲಾಗಿದೆ. ರಾಜ್ಯದ ಎಲ್ಲ ಪಿಯು ಕಾಲೇಜುಗಳು ತಮ್ಮ ಸೂಚನಾ ಫಲಕ ಮತ್ತು ವೆಬ್‌ಸೈಟ್‌ನಲ್ಲಿ ಇಲಾಖೆಯಿಂದ ಅನುಮತಿ ಪಡೆದ ಸಂಯೋಜನೆವಾರು ಹಾಗೂ ರೋಸ್ಟರ್‌ವಾರು ಪ್ರವೇಶಗಳ ಮಾಹಿತಿ, ದಾಖಲು ಶುಲ್ಕದ ವಿವರ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿಯ ಪೂರ್ಣ ವಿವರ ನೀಡಬೇಕು ಎಂದು ಇಲಾಖೆ ಹೇಳಿದೆ.




