ತಯಾರಿಕಾ ವಲಯಕ್ಕೆ 2 ಲಕ್ಷ ಕೋಟಿ ಪ್ಯಾಕೇಜ್
ಹತ್ತು ಪ್ರಮುಖ ಉದ್ಯಮಗಳಿಗೆ ಉತ್ಪಾದನೆ ಆಧರಿತ ಉತ್ತೇಜನೆ ಯೋಜನೆ(ಪಿಎಲ್‌ಐ)ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೂರಸಂಪರ್ಕ,ಆಟೊಮೊಬೈಲ್,ಔಷಧೋದ್ಯಮ ಸೇರಿದಂತೆ ಹತ್ತು ಪ್ರಮುಖ ತಯಾರಿಕಾ ಕ್ಷೇತ್ರಕ್ಕೆ ಪಿಎಲ್‌ಐ ಅಡಿ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ನೀಡಲಾಗುತ್ತದೆ. ಯೋಜನೆ ದೇಶಿ ಉತ್ಪಾದನೆಗೆ ಉತ್ತೇಜನ, ಆಮದು ಪ್ರಮಾಣ ಕಡಿಮೆಗೊಳಿಸಲು ಮತ್ತು ಉದ್ಯೋಗ ಸೃಷ್ಟಿಗೆ ಇದರಿಂದ ನೆರವಾಗಲಿದೆ. ಯೋಜನೆ ದೇಶದ ತಯಾರಿಕಾ ವಲಯವನ್ನು ಸ್ಪರ್ಧಾತ್ಮಕಗೊಳಿಸಲು ಸಹಾಯ ಮಾಡಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. […]




