ಲಕ್ಷ್ಮೀ ವಿಲಾಸ್ ಠೇವಣಿದಾರರ ಹಣ ಸುರಕ್ಷಿತ
ಲಕ್ಷ್ಮೀ ವಿಲಾಸ್ ಠೇವಣಿದಾರರ ಹಣ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿದೆ. ಠೇವಣಿದಾರರಿಗೆ ಹಿಂದಿರುಗಿಸಲು ಅಗತ್ಯ ಇರುವಷ್ಟು ಹಣ ಇದೆ ಎಂದು ಲಕ್ಷ್ಮೀ ವಿಲಾಸ್ ಬ್ಯಾಂಕಿನ(ಎಲ್‌ವಿಬಿ) ಆಡಳಿತ ಅಧಿಕಾರಿ ಟಿ.ಎನ್. ಮನೋಹರನ್ ತಿಳಿಸಿದರು. ಬ್ಯಾಂಕ್ ವಹಿವಾಟಿನ ಮೇಲೆ ನಿರ್ಬಂಧ ವಿಧಿಸಿದ ಕ್ರಮವು ಮಂಗಳವಾರ ತಡರಾತ್ರಿ ನಡೆದಿರುವುದರಿಂದಾಗಿ ಬ್ಯಾಂಕ್ ಶಾಖೆಗಳು, ಎಟಿಎಂಗಳಲ್ಲಿ ಕೆಲವು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುರುವಾರದ ಹೊತ್ತಿಗೆ ಎಲ್ಲವೂ ಸರಿಹೋಗಲಿದೆ. ಠೇವಣಿದಾರರು ಹಣ ಪಡೆಯಲು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಎಲ್ಲಾ ಶಾಖೆಗಳಿಗೂ ಸೂಚನೆ ನೀಡಲಾಗಿದೆ. ಬ್ಯಾಂಕ್ ಬಳಿ, 20ಸಾವಿರ ಕೋಟಿ ರೂ. […]




