ಕಾಲೇಜುಗಳ ಆರಂಭ: ಎಸ್‌ಒಪಿ ಬಿಡುಗಡೆ
ಪದವಿ, ಎಂಜಿನಿಯರಿAಗ್ ಹಾಗೂ ಡಿಪ್ಲೊಮಾ ಕಾಲೇಜುಗಳನ್ನು 17ರಿಂದ ಆರಂಭಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ)ವನ್ನು ಉನ್ನತ ಶಿಕ್ಷಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಗೂ ಪ್ರಥಮ/ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ನಿಗದಿತ ಸೂಚನೆ ನೀಡಲಾಗಿದೆ. ಸ್ನಾತಕೋತ್ತರ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು 17ರಿಂದ ಪ್ರಾರಂಭಿಸಬೇಕು. ಈ ತರಗತಿಗಳಿಗೆ ಹಾಜರಾಗಲು ಇಚ್ಛಿಸುವ ವಿದ್ಯಾರ್ಥಿಗಳ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಬೇಕು. ಬೋಧನೆ, ಪ್ರಯೋಗಾಲಯ ಮತ್ತು ಪ್ರಾಜೆಕ್ಟ್ ತರಗತಿಗಳನ್ನು ಪಾಳಿ […]




