ಕೊರೊನಾ ಪ್ರಕರಣ ಇಳಿಕೆ
ಕೋವಿಡ್ ಹೊಸ ಪ್ರಕರಣಗಳಲ್ಲಿ ಇಳಿಕೆಯಾಗಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳು50,592 ಕ್ಕೆ ಕಡಿಮೆಯಾಗಿವೆ. ಅಕ್ಟೋಬರ್ ಮೂರನೇ ವಾರದಲ್ಲಿ ಸಕ್ರಿಯ ಪ್ರಕರಣಗಳು ಲಕ್ಷದ ಆಚೀಚೆ ಇತ್ತು. ರಾಜ್ಯದಲ್ಲಿ ಭಾನುವಾರ ೩,೬೫೨ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ೮.೨೭ ಲಕ್ಷಕ್ಕೆ ಹೆಚ್ಚಿದೆ. ಇವರಲ್ಲಿ 935 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 3,652 ರ‍್ಟಿ-ಪಿಸಿಆರ್ ಸೇರಿದಂತೆ1.06 ಲಕ್ಷ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈವರೆಗೆ 80 ಲಕ್ಷ ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. […]




