ʻಒಂದು ದೇಶ, ಒಂದು ಚಂದಾʼ ಎಂಬುದು ಕ್ರಾಂತಿಕಾರ ನಡೆಯೇ?
ʻಒಂದು ದೇಶ, ಒಂದು ಚುನಾವಣೆʼ ಮಸೂದೆಯು ಜಂಟಿ ಸಂಸದೀಯ ಸಮಿತಿಯ ಅವಗಾಹನೆಗೆ ಹೋಗಿದೆ. ಇಂಥದ್ದೇ ಹಲವು ಹರಾಕಿರಿಗಳನ್ನು ಮಾಡಿರುವ ಎನ್‌ಡಿಎ 3.0 ಸರ್ಕಾರದ ಇನ್ನೊಂದು ಉಪಕ್ರಮ ʻಒಂದು ದೇಶ, ಒಂದು ಚಂದಾʼ(ಒನ್ ನೇಷನ್, ಒನ್ ಸಬ್‌ಸ್ಕ್ರಿಪಕ್ಷನ್; ಒಎನ್‌ಒಎಸ್). ಶೈಕ್ಷಣಿಕ ಕ್ಷೇತ್ರಕ್ಕೆ ಆಯವ್ಯಯ ಬೆಂಬಲ ವರ್ಷೇವರ್ಷೇ ಕಡಿಮೆಯಾಗುತ್ತಿರುವ, ಶೈಕ್ಷಣಿಕ ರಂಗದ ಎಲ್ಲ ಹಂತಗಳಲ್ಲಿ (ಪ್ರಾಥಮಿಕದಿಂದ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ಶ್ರೇಷ್ಠತಾ ಸಂಸ್ಥೆಗಳು) ಬೋಧಕರು ಸೇರಿದಂತೆ ಮಾನವ ಸಂಪನ್ಮೂಲ ಕಡಿಮೆಯಾಗುತ್ತಿರುವ ಹಾಗೂ ಸಂಶೋಧನೆ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿರುವ […]