ಹೊಸ ಕಾರ್ಮಿಕ ಸಂಹಿತೆಗಳಿಂದ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸಿಗುವುದೇ?
ಒಕ್ಕೂಟ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸಿ, ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದೆ. ವೇತನಗಳ ಸಂಹಿತೆ (2019)ಯು ವೇತನ ಪಾವತಿ ಕಾಯಿದೆ 1936, ಕನಿಷ್ಠ ವೇತನ ಕಾಯಿದೆ 1948, ಬೋನಸ್ ಪಾವತಿ ಕಾಯಿದೆ 1965 ಹಾಗೂ ಸಮಾನ ಸಂಭಾವನೆ ಕಾಯಿದೆ 1976 ರ ಕ್ರೋಡೀಕರಣ. ಇದರೊಟ್ಟಿಗೆ ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಸುರಕ್ಷೆ ಸಂಹಿತೆ 2020 ಮತ್ತು ಉದ್ಯೋಗಜನ್ಯ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಒಎಸ್‌ಎಚ್‌ಡಬ್ಲ್ಯುಸಿ ಸಂಹಿತೆಯನ್ನು ಜಾರಿಗೊಳಿಸಿದೆ. 32 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳು […]

