ದೇಶಕ್ಕೆ ಇನ್ನಷ್ಟು ರಾಡ್ರಿಗಸ್, ಕೌರ್ ಮತ್ತು ಖುರೇಷಿಗಳು ಅಗತ್ಯ
ಮಹಿಳಾ ವಿಶ್ವ ಕಪ್ ನಮ್ಮ ಪಾಲಾಗಿದೆ. 1983ರಲ್ಲಿ ಪುರುಷರ ವಿಶ್ವ ಕಪ್, 2011ರಲ್ಲಿ ಐಸಿಸಿ ವಿಶ್ವ ಕಪ್ ಗೆಲುವಿನ ನಂತರದ ಚರಿತ್ರಾರ್ಹ ಗೆಲುವು ಇದು. 2005ರಲ್ಲಿ ಆಸ್ಟ್ರೇಲಿಯ ಹಾಗೂ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಮಹಿಳಾ ತಂಡ ಸೋಲುಂಡಿತ್ತು. ಗೆಲುವಿನ ಬಳಿಕ ತಂಡ ಘನತೆಯಿಂದ ನಡೆದುಕೊಂಡಿತು. ಪ್ರತಿಯಾಗಿ 2025ರ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಾಯಕ ಸೂರ್ಯಕುಮಾರ್ ಯಾದವ್, ಎದುರಾಳಿ ತಂಡದ ನಾಯಕನ ಹಸ್ತಲಾಘವ ಮಾಡಲಿಲ್ಲ; ಎರಡು ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ ಮತ್ತು ಕಾಶ್ಮೀರದಲ್ಲಿ […]
ಪೆರಿಯಾರ್, ವೈಕಂ ಚಳವಳಿ ಮತ್ತು ದೇವನೂರು ಮಹಾದೇವ
ಸುಮಾರು 100 ವರ್ಷಗಳ ಹಿಂದೆ ನಡೆದ ಸಾಟಿಯಿಲ್ಲದ ಸಾಮಾಜಿಕೋ-ರಾಜಕೀಯ ಹೋರಾಟ; ವೈಕಂ ಚಳವಳಿ. ಅದು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ವಿರುದ್ಧ ನಡೆದ ದೇಶದ ಮೊಟ್ಟಮೊದಲ ಹೋರಾಟ; ದೇಶದ ಸಾಮಾಜಿಕ ಸುಧಾರಣೆ ಪಥವನ್ನು ರೂಪಿಸಿತು. ಇನ್ನೇನು ಚದುರಿ ಹೋಗಲಿದ್ದ ಈ ಚಳವಳಿಗೆ ಹುರುಪು ತುಂಬಿ, ದಿಗ್ದರ್ಶನ ಮಾಡಿದವರು ಪೆರಿಯಾರ್ ಇ.ವಿ. ರಾಮಸ್ವಾಮಿ. ಆನಂತರ ಅವರು ಆರಂಭಿಸಿದ ದ್ರಾವಿಡ ಚಳವಳಿ ಹಾಗೂ ಸ್ವಾಭಿಮಾನ ಚಳವಳಿಗಳು ದಕ್ಷಿಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸಿದವು. ಅವರ ನೆನಪಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿದ […]

