ʻಒಂದು ದೇಶ, ಒಂದು ಚಂದಾʼ ಎಂಬುದು ಕ್ರಾಂತಿಕಾರ ನಡೆಯೇ?
ʻಒಂದು ದೇಶ, ಒಂದು ಚುನಾವಣೆʼ ಮಸೂದೆಯು ಜಂಟಿ ಸಂಸದೀಯ ಸಮಿತಿಯ ಅವಗಾಹನೆಗೆ ಹೋಗಿದೆ. ಇಂಥದ್ದೇ ಹಲವು ಹರಾಕಿರಿಗಳನ್ನು ಮಾಡಿರುವ ಎನ್‌ಡಿಎ 3.0 ಸರ್ಕಾರದ ಇನ್ನೊಂದು ಉಪಕ್ರಮ ʻಒಂದು ದೇಶ, ಒಂದು ಚಂದಾʼ(ಒನ್ ನೇಷನ್, ಒನ್ ಸಬ್‌ಸ್ಕ್ರಿಪಕ್ಷನ್; ಒಎನ್‌ಒಎಸ್). ಶೈಕ್ಷಣಿಕ ಕ್ಷೇತ್ರಕ್ಕೆ ಆಯವ್ಯಯ ಬೆಂಬಲ ವರ್ಷೇವರ್ಷೇ ಕಡಿಮೆಯಾಗುತ್ತಿರುವ, ಶೈಕ್ಷಣಿಕ ರಂಗದ ಎಲ್ಲ ಹಂತಗಳಲ್ಲಿ (ಪ್ರಾಥಮಿಕದಿಂದ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ಶ್ರೇಷ್ಠತಾ ಸಂಸ್ಥೆಗಳು) ಬೋಧಕರು ಸೇರಿದಂತೆ ಮಾನವ ಸಂಪನ್ಮೂಲ ಕಡಿಮೆಯಾಗುತ್ತಿರುವ ಹಾಗೂ ಸಂಶೋಧನೆ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿರುವ […]
ನೀಟ್ ಎನ್ನುವುದು ಒಂದು ರಾಜಕೀಯ ಕಾರ್ಯಕ್ರಮ
2017ರಲ್ಲಿ ತಮಿಳುನಾಡು ಪಿಯು ಪರೀಕ್ಷೆಯಲ್ಲಿ 1,176(1,200) ಅಂಕ ಗಳಿಸಿದ ಎಸ್.ಅನಿತಾ ವೈದ್ಯೆಯಾಗುವ ಕನಸು ಕಂಡವರು. ಆದರೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಪಾಸ್ ಆಗಲಿಲ್ಲ. ಸಾಕಷ್ಟು ಹೋರಾಟದ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ನೀಟ್ 720 ಅಂಕಗಳ 3 ಗಂಟೆ ಅವಧಿಯ ಪರೀಕ್ಷೆ. ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ. ಮೇ 5 ರಂದು ನಡೆದ ನೀಟ್ ಪರೀಕ್ಷೆಯಲ್ಲಿ 24,06,079 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫಲಿತಾಂಶ ಬಂದಾಗ 67 ಮಂದಿ 720/720 ಅಂಕ ಗಳಿಸಿದರು. […]