ಪೀಡೆನಾಶಕಗಳ ಅತಿಬಳಕೆ: ಆಹಾರ, ನೀರು ವಿಷಮಯ
ಕುಡಿಯುವ ನೀರು, ತಿನ್ನುವ ಆಹಾರ ಹಾಗೂ ಉಸಿರಾಡುವ ಗಾಳಿ ಮಲಿನಗೊಂಡು ವಿಷಮಯವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ದಿಲ್ಲಿ ಸೇರಿದಂತೆ ದೇಶದ ಬಹುತೇಕ ನಗರಗಳು ವಾಯುಮಾಲಿನ್ಯದಿಂದ ಬಳ ಲುತ್ತಿವೆ; ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಗೊಂಡು, 23 ಮಂದಿ ಮರಣ ಹೊಂದಿದ ಪ್ರಕರಣ ತೇಲುತ್ತಿರುವ ನೀರ್ಗಲ್ಲಿನ ಕಾಣುತ್ತಿರುವ ತುದಿಯಷ್ಟೇ. ಇದರೊಟ್ಟಿಗೆ ಕೃಷಿಯಲ್ಲಿ ಪೀಡೆನಾಶಕಗಳ ಅತಿ ಬಳಕೆ, ದುರ್ಬಳಕೆ ಹಾಗೂ ವಿನಾಕಾರಣ ಬಳಕೆಯಿಂದ ತಿನ್ನುವ ಆಹಾರ ಮತ್ತು ಅಂತರ್ಜಲ ವಿಷವಾಗಿ ಪರಿಣಮಿಸಿದೆ. ʻನಮ್ಮದು ಕೃಷಿ ಪ್ರಧಾನ ದೇಶʼ […]
ಉಣ್ಣುವ ಅನ್ನ ವಿಷವಾದರೆ, ಕಾಯುವವರು ಯಾರು?
ಮಕ್ಕಳು ಸೇವಿಸುವ ಏಕದಳ ಧಾನ್ಯ(ಸಿರಿಯಲ್) ಆಹಾರದಲ್ಲಿ ಅಧಿಕ ಸಕ್ಕರೆ, ಔಷಧಗಳಲ್ಲಿ ವಿಷ ವಸ್ತು, ಸಂಬಾರ ಪದಾರ್ಥದಲ್ಲಿ ಕೀಟನಾಶಕ, ಪೊಟ್ಟಣ ಕಟ್ಟಿದ ಆಹಾರದಲ್ಲಿ ಜಿರಲೆ…… ಇತ್ಯಾದಿ ಸರ್ವೇಸಾಮಾನ್ಯವಾಗಿದೆ. ಆಹಾರ ಸುರಕ್ಷತೆ ಯಲ್ಲಿ ದೇಶ ಏಕೆ ವಿಫಲವಾಗುತ್ತಿದೆ? ಮಕ್ಕಳು-ಯುವಜನರನ್ನು ರೋಗಿಗಳನ್ನಾಗಿಸುವ ಜಂಕ್ ಆಹಾರ ಬಳಕೆಯನ್ನು ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಇದಕ್ಕೆ ದುರ್ಬಲ ನಿಯಂತ್ರಣ ವ್ಯವಸ್ಥೆ, ಅವ್ಯವಸ್ಥಿತ ಮೇಲುಸ್ತುವಾರಿ, ಸಂಬಂಧಿ ಸಿದ ಸಂಸ್ಥೆಗಳ ವೈಫಲ್ಯ, ಬಳಕೆದಾರರಲ್ಲಿ ಅರಿವಿನ ಕೊರತೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ದುರಾಸೆ ಸೇರಿದಂತೆ ಹಲವು ಕಾರಣಗಳಿವೆ. ಆಹಾರದೊಟ್ಟಿಗೆ ರಾಜಕೀಯ […]

