ಕುಲಾಂತರಿ ಬೆಳೆ: ಆಡಿಸುವಾತನ ಮಾತೇ ಅಂತಿಮವೇ?
ಸುಪ್ರೀಂ ಕೋರ್ಟ್ ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ(ಎಂಒಇಎಫ್‌ಸಿ) ಮಂತ್ರಾಲಯಕ್ಕೆ ಎಲ್ಲ ಭಾಗಿದಾರರನ್ನು ಒಳಗೊಂಡು ಕುಲಾಂತರಿ(ಜಿಎಂ, ಜೈವಿಕವಾಗಿ ಬದಲಿಸಿದ ಬೆಳೆಗಳು) ಕುರಿತು ರಾಷ್ಟ್ರೀಯ ಕಾರ್ಯನೀತಿಯೊಂದನ್ನು ರೂಪಿಸಬೇಕೆಂದು ಹೇಳಿದೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವನ್ನು ಒಳಗೊಳ್ಳಬೇಕು; ಕೃಷಿ ಸೇರಿದಂತೆ ಕೆಲವು ವಿಷಯಗಳು ರಾಜ್ಯ ಪಟ್ಟಿಗೆ ಸೇರುವುದರಿಂದ, ಸಂವಿಧಾನದ ಚೌಕಟ್ಟಿನಲ್ಲಿ ಇದು ಅಗತ್ಯ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ಸಂಜಯ್ ಕರೋಲ್ ಅವರ ಪೀಠ ಹೇಳಿದೆ. ಕುಲಾಂತರಿಗಳಿಗೆ ಸಂಬಂಧಿಸಿದಂತೆ ರೈತರು, ಬಳಕೆದಾರರು, ವಿಜ್ಞಾನಿಗಳು ಮತ್ತು ಉತ್ಪಾದಕ ಕಂಪನಿಗಳೊಂದಿಗೆ […]