ʻಗಂಟೆ ಬಾರಿಸುತ್ತಿರುವುದು ಒಬ್ಬರಿಗೆ ಮಾತ್ರವಲ್ಲ, ಎಲ್ಲರಿಗೂʼ
ಸಂಸತ್ತು ವಕ್ಫ್ ಮಸೂದೆಯನ್ನು ಅಂಗೀಕರಿಸಿದೆ. ದೇಶದ ಕೆಲವೆಡೆ ಪ್ರತಿಭಟನೆ ವ್ಯಕ್ತವಾಗಿದೆ ಹಾಗೂ ವ್ಯವಸ್ಥೆ ಕಠೋರವಾಗಿ ದಮನಕ್ಕೆ ಮುಂದಾಗಿದೆ. 11 ವರ್ಷದ ಬಳಿಕ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ʻಆರ್‌ಎಸ್‌ಎಸ್ ಆಲದ ಮರʼ ಎಂದು ಶ್ಲಾಘಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಅತ್ಯಂತ ಉತ್ಸಾಹದಿಂದ ವಕ್ಫ್ ಕಾನೂನು ಜಾರಿಗೆ ಮುಂದಾಗಿವೆ. ಮಸೂದೆ ಕುರಿತು ಕೇರಳದ ಕಯಂಕುಲಂ ಮೂಲದ ದೆಹಲಿ ವಾಸಿ, ಕೇರಳ ಕ್ಲಬ್ ಅಧ್ಯಕ್ಷ ಎ.ಜೆ. ಫಿಲಿಪ್ ಎಂಬುವರು ಸಚಿವ ಕಿರಣ್ ರಿಜಿಜು […]