Tag: Primary health centre

ತಾಯಂದಿರ ಸಾವು: ಈ ಅನ್ಯಾಯಕ್ಕೆ ಸರ್ಕಾರಗಳೇ ಹೊಣೆ

ಬಳ್ಳಾರಿಯ ಆಸ್ಪತ್ರೆಯಲ್ಲಿ ರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣದಿಂದ ಆರು ತಾಯಂದಿರು ಮೃತಪಟ್ಟ ಘಟನೆ ಬಳಿಕ ಚಿಕ್ಕಮಗಳೂರು ಜಿಲ್ಲೆ ಹಾಗೂ ಬೆಂಗಳೂರಿನ ಪೀಣ್ಯದಲ್ಲಿ ಮತ್ತಿಬ್ಬರು ತಾಯಂದಿರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯ ಸಾವಿಗೆ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ಆದರೆ, ಸಂಬಂಧಿಸಿದವರು ಆರೋಪ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಡೆದಿರುವ ತಾಯಂದಿರ ಸಾವಿನ ಆಡಿಟ್‌ಗೆ ಸರ್ಕಾರ ಆದೇಶಿಸಿದೆ. ಮೃತರಲ್ಲಿ ಇಬ್ಬರಲ್ಲಿ ಇಲಿ ಜ್ವರ ಪತ್ತೆಯಾಗಿರುವುದರಿಂದ, ಚಿಕಿತ್ಸಾ ತನಿಖೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇವು ಅನ್ಯಾಯದ ಸಾವುಗಳು. […]

Back To Top