ದೇಶಿ ಕೃಷಿ ಕ್ಷೇತ್ರಕ್ಕೆ ಆಮದು-ಕುಲಾಂತರಿ ಪ್ರಹಾರ
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಜಾಗತಿಕ ಮಟ್ಟದಲ್ಲಿ ಅಮೆರಿಕದ ದಬ್ಬಾಳಿಕೆ ಹೆಚ್ಚಿದೆ. ಮಾಗಾ(ಮೇಕ್ ಅಮೆರಿಕ ಗ್ರೇಟ್ ಎಗೇನ್) ಎಂದು ಘೋಷಿಸುತ್ತ, ಕುಸಿದಿರುವ ಉತ್ಪಾದನೆ ಪ್ರವೃತ್ತಿಯನ್ನು ಪ್ರೋತ್ಸಾಹಿ ಸಲು ಬೇರೆ ದೇಶಗಳ ಕುತ್ತಿಗೆಯನ್ನು ಹಿಚುಕಲಾಗುತ್ತಿದೆ. ಪಾಶ್ಚಾತ್ಯ ದೇಶಗಳ ದಬ್ಬಾಳಿಕೆ ಮನಸ್ಥಿತಿ ಈಗಲೂ ಬದಲಾಗಿಲ್ಲ. 19ನೇ ಶತಮಾನದಲ್ಲಿ ಚೀನಾದ ದೊರೆ ದೇಶದೆಲ್ಲೆಡೆ ಅಫೀಮನ್ನು ನಿಷೇಧಿಸಿದರು. ಭಾರತದಲ್ಲಿ ಬೆಳೆದ ಅಫೀಮನ್ನು ಚೀನಾಕ್ಕೆ ಕಳಿಸಿ ಹಣ ಲೂಟಿ ಹೊಡೆಯುತ್ತಿದ್ದ ಬ್ರಿಟಿಷ್ ವರ್ತಕರಿಗೆ ನಷ್ಟವುಂಟಾಗಿ, ಸಿಟ್ಟಿಗೆದ್ದರು. ವ್ಯಾಪಾರ ನೀತಿಯನ್ನು ಬದಲಿಸಬೇಕು ಹಾಗೂ ಚೀನಾದ […]

