ಸಾಂಕ್ರಾಮಿಕವಾಗುತ್ತಿರುವ ಮಧುಮೇಹ
ದೇಶದಲ್ಲಿ ಮಧುಮೇಹ ವ್ಯಾಪಕವಾಗಿ ಹೆಚ್ಚಿದ್ದು, ಆತಂಕ ಸೃಷ್ಟಿಸಿದೆ. ಇದರ ಜೊತೆಗೆ, ಚಿಕಿತ್ಸೆಯ ಅಲಭ್ಯತೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ಎರಡು ಪ್ರತ್ಯೇಕ ಅಧ್ಯಯನ ವರದಿಗಳು ಇತ್ತೀಚೆಗೆ ಬಹಿರಂಗ ಪಡಿಸಿವೆ. ಜಗತ್ತಿನೆಲ್ಲೆಡೆ ಮಧುಮೇಹ, ಮಧುಮೇಹ ಪೂರ್ವ ಸ್ಥಿತಿ ಹಾಗೂ ಬೊಜ್ಜು ಹೆಚ್ಚುತ್ತಿದೆ. ಲ್ಯಾನ್ಸೆಟ್ ನವೆಂಬರ್ 13ರಂದು ಬಿಡುಗಡೆಗೊಳಿಸಿದ ಅಂಕಿಅಂಶಗಳ ಪ್ರಕಾರ, ಜಗತ್ತಿನಲ್ಲಿ 1990ರಲ್ಲಿ 200 ದಶಲಕ್ಷದಷ್ಟಿದ್ದ ಮಧುಮೇಹಿಗಳ ಸಂಖ್ಯೆ 2022ರಲ್ಲಿ 800 ದಶಲಕ್ಷಕ್ಕೆ ಹೆಚ್ಚಿದೆ. ಇವರಲ್ಲಿ ಭಾರತೀಯರು 212 ದಶಲಕ್ಷ ಹಾಗೂ ಚೀನೀಯರು 148 ದಶಲಕ್ಷ. 1990ಕ್ಕೆ ಹೋಲಿಸಿದರೆ, ಮಧುಮೇಹಿಗಳ […]