ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಕೆ ಬೆಳೆಯು ಹಳದಿ ಎಲೆ ರೋಗ ಬಾಧೆÀಗೆ ತುತ್ತಾಗಿದೆ. ಕರಾವಳಿಯ ಸುಳ್ಯ ತಾಲೂಕು, ಮಲೆನಾಡಿನ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ರೋಗ ವ್ಯಾಪಕವಾಗಿ ಹರಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಹಲವೆಡೆ ಕಾಣಿಸಿಕೊಂಡಿದೆ. ಸರ್ಕಾರ-ಕೃಷಿ ಇಲಾಖೆ ಈ ರೋಗಕ್ಕೆ ಶಾಶ್ವತ ಪರಿಹಾರ ನೀಡುವ ಬದಲು ಪುಡಿಗಾಸು ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತದೆ. ಇದರಿಂದಾಗಿ, ರೈತರು ಅಡಕೆ ಮರಗಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ 2,200 ಹೆಕ್ಟೇರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ಬಾಧಿತವಾಗಿದೆ. ರಾಜ್ಯದಲ್ಲಿ ಪುತ್ತೂರು, ಸುಳ್ಯ(ದಕ ಜಿಲ್ಲೆ), ಶೃಂಗೇರಿ, ಕೊಪ್ಪ(ಚಿಕ್ಕಮಗಳೂರು), ಶಿರಸಿ(ಉಕ ಜಿಲ್ಲೆ), ದಾವಣಗೆರೆ ಜಿಲ್ಲೆಯ ಚನ್ನಗಿರಿ, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಅಧಿಕ ಪ್ರಮಾಣದಲ್ಲಿ ಅಡಕೆ ಬೆಳೆಯಲಾಗುತ್ತಿದೆ.
ಎಲೆ ರೋಗದ ನಿಯಂತ್ರಣಕ್ಕೆ ಸಂಬAಧಿಸಿದAತೆ ಅಧ್ಯಯನ ಆರಂಭಿಸಲಾಗಿದೆ. ಈ ರೋಗವನ್ನು ತಡೆದುಕೊಳ್ಳಬಲ್ಲ ತಳಿಗಳ ಅಭಿವೃದ್ಧಿ ಕುರಿತು ಸಂಶೋಧನೆ ನಡೆಯುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. . ಆದರೆ, ರೋಗ ನಿಯಂತ್ರಣ ಉಪಕ್ರಮಗಳು, ಬೇರೆ ತಳಿ ಅಭಿವೃದ್ಧಿ ಆಗುವಷ್ಟರಲ್ಲಿ ಅಡಕೆ ಮರಗಳೇ ನಾಪತ್ತೆಯಾಗುವ ಸಾಧ್ಯತೆಯಿದೆ. ಅಡಕೆಗೆ ರ‍್ಯಾಯ ಬೆಳೆ, ಹಳೆಯ ಮರಗಳನ್ನು ಕಡಿದು ಹೊಸ ಸಸಿಗಳ ಹಚ್ಚುವಿಕೆ ಕುರಿತು ರೈತರಿಗೆ ಸಲಹೆ ಅಗತ್ಯವಿದೆ.
Courtesyg: India Mart (Photo)