ಋತ-01 ವಿಜ್ಞಾನ ಪ್ರಜಾಪ್ರಭುತ್ವ ಇಕಾಲಜಿ

 

01. ಪರಿಸರ ವ್ಯವಸ್ಥೆಯನ್ನು ಉಳಿಸಿ ಅಥವಾ ಅಳಿಸಿ- ಡಾ. ಸುಷ್ಮಾ ಕಶ್ಯಪ್(೦6)

ಭಾರತದ ಅಭಿವೃದ್ಧಿ ಇತಿಹಾಸಕ್ಕೆ ಇದು ಸವಾಲಿ ಸಮಯ. ಏಕೆಂದರೆ, ಬೆಳವಣಿಗೆ ಎಂಬ ಅನಿವಾರ್ಯವು ನಮ್ಮ ಹಲವಾರು ಪರಿಸರ ನಿರ್ವಹಣೆ ಸಿದ್ಧಾಂತಗಳನ್ನು ಪ್ರಶ್ನಿಸುತ್ತಿದೆ. ದೇಶದಲ್ಲಿ ಪರಿಸರದ ಮೇಲೆ ಆಕ್ರಮಣ ನಡೆಯುತ್ತಿರುವ ಈ ಕಾಲಃಟ್ಟದಲ್ಲಿ ನಾವು ತೆಗೆದುಕೊಳ್ಳುವ ನಿರ್ಣಯಗಳು ಹಾಗೂ ಅವು ನೀಡುವ ಫಲಿತಾಂಶಗಳ ಆಧಾರದ ಮೇಲೆ ತಾಜಾ ಚಿಂತನೆ ಹಾಗೂ ಹೊಸ ದೃಷ್ಟಿಕೋನದ ಅಗತ್ಯವಿದೆ.

02. ಗೋವಾದ ದಾಖಲೆಗಳು ಪಶ್ಚಿಮ ಘಟ್ಟಗಳ ವಿನಾಶ- ಅಪೂರ್ವ ಯರಬಹಳ್ಳಿ (11)

ರವಿಕಿರಣಗಳಲ್ಲಿ ತೋಯ್ದ ಕಡಲ ತೀರಗಳು, ವರ್ಣರಂಹಿತ ಹಾಗು ಅಲ್ಲಲ್ಲಿ ಕಾಂಸಿಗುವ ಪ್ರಾವಾಸಿಗರಿಂದ ಕೂಡಿದ ಸುಖಿ ಶ್ರೀಮಂತರು ಗೋವಾ, ಎಲ್ಲಿ ಎಲ್ಲವೂ ಸೊಗಸಾಗಿರುವಂತೆ ಭಾಸವಾಗುತ್ತದೆಯೋ ಆ ಗೋವಾ. ಭಾರತದಲ್ಲಿಯೇ ಅತೀ ಹೆಚ್ಚು ತಲದಾಯ, ಜಿಡಿಪಿ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆ ಬೇರೆ.

03. ಅವು ಅಮುದಾಯದ ವನಗಳು- ಡಾ. ದಿವ್ಯಮಣಿ ಬಿ.ಜಿ(29)

ನಾನು ಪದೇಪದೇ ಎದುರಿಸುವ ಪ್ರಶ್ನೆ ದೇಶದ ಪವಿತ್ರ ವನಗಳ ಸಂರಕ್ಷಣೆಗಾಗಿ ನಮ್ಮ ನೀತಿ ನಿಯೋಜಕರು ಯಾವ ಕ್ರಮ ತೆಗೆದುಕೊಳ್ಳಬೇಕು ಮತ್ತು ಏಕೆ? ಈ ಪ್ರಶ್ನೆಯಲ್ಲಿ ಸುಪ್ತವಾಗಿರುವ ಕಲ್ಪನೆಯೇನೆಂದರೆ, ಪವಿತ್ರ ವನಗಳು ನಿರಂತರವಾಗಿ ಕ್ಷೀನೀಸುತ್ತಿವೆ ಮತ್ತು ಇದಕ್ಕೆ ಮುಖ್ಯ ಕಾರಣ ಧಾರ್ಮಿಕ ಹಾಗೂ ಸಾಂಪ್ರದಾಯಿಕ ನಂಬಿಕೆಗಳು ಕ್ಚಿಣವಾಗುತ್ತಿರುವುದು. ಈ ಎರಡೂ ಕಲ್ಪನೆಗಳನ್ನು ಆಧಾರವಾಗಿಟ್ಟುಕೊಂಡು, ನಾನು ಮೇಲಿನ ಪ್ರಶ್ನೆಗೆ ಉತ್ತರಿಸಲು ಬಯಸುತ್ತೇನೆ.

04.ಕೇರಳದ ಪುನರ್ ನರ‍್ಮಾಂಕ್ಕಾಗಿ ಜನರ ಆಂದೋಲನ- ಪ್ರೊ.ಟಿ.ಎಸ್. ವೇಣುಗೋಪಾಲ್(34)

ಈ ದುರಂತಕ್ಕೆ ಕಾರಣವಾದ ಎಲ್ಲ ಪ್ರಮುಖ ಅಂಶಗಳನ್ನು ಪಶ್ಚಿಮಘಟ್ಟಗಳ ಉದ್ದಕ್ಕೂ, ಅಷ್ಟು ಮಾತ್ರವಲ್ಲದೆ, ದೇಶದ ಉಳಿದ ಭಾಗಗಳಲ್ಲೂ ಕಾಣಬಹುದು. ಮೊದಲನೆಯದು, ಪ್ರಾಕೃತಿಕ ಬಂಎವಾಳವನ್ನು ರಕ್ಷಿಸಲು ಇರುವ ಕಾನೂನುಗಳ ಕಡೆಗಣನೆ. ಅನುಮತಿಯ ಮಿತಿಯನ್ನು ಮೀರಿದ ಗಣಿಗಾರಿಕೆಯಿಂದ ಜಲ ಸಮಪನ್ಮೂಲಗಳು, ಕೃಷಿ ಹಾಗೂ ಜೀವ ವೈವಿಧ್ಯಕ್ಕೆ ಗಂಭೀರ ಹಾನಿಯಾಗಿದೆ ಎಂದು ಗೋವಾದದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ವಿಚಾಎಣೆ ನಡೆಸಿದ ಶಾ ಆಯೋಗ ಅಭೀಪ್ರಾಯಪಟ್ಟಿದೆ.

05. ಅಭಿವೃದ್ಧಿ ಎನ್ನುವ ಅಪಸವ್ಯ-(16)

ದೇವರ ಸ್ವಂತ ನಾಡು ಎಂದೇ ಹೆಸರಾದ ಕೇರಳದ ಹೃದಯ ಭಾಗದಲ್ಲಿ ಹರಿಯುವ ನದಿ ಪಂಬ. ಪ್ರತಿ ವರ್ಷ ಈ ನದಿಯಲ್ಲಿ ಜಗತ್‌ಪ್ರಸಿದ್ಧ ಸರ್ಪ ದೋಣಿಗಳ ಓಟ ನಡೆಯುತ್ತದೆ. ದೋಣಿಯೋಟ ನಡೆಯುವ ಸ್ಥಳವಾದ ಅರಣ್ಮೂಲವನ್ನು ಯುನೆಸ್ಕೋ ಜಾಗತಿಕ ಪಾರಂಪರಿಕ ಗ್ರಾಮ ಎಂದು ಘೋಷಿಸಿದೆ.

06. ಅಭಿವೃಧ್ಧಿಯನ್ನು ಜನಾಂದೋಲನವಾಗಿಸುವ ಪರಿ(26)

೨೦೧೪ರ ಲೋಕಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಕುರಿತು ಚರ್ಚೆ ಪ್ರಮುಖವಾಗಿತ್ತು. ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಭಾಷಣದಲ್ಲೇ ಅಭಿವೃದ್ಧಿಯನ್ನು ಜನಾಂದೋಲನವಾಗಿ ಮುಂದುವರಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯ ಬಲದಿಂದ ಇದನ್ನು ಆಗುಮಾಎಲಾಗುತ್ತದೆ ಎಂದರು. ಆದರೆ, ನಾವು ಈ ಬಲಗಳನ್ನು ಆಧರಿಸಿ, ಅಭಿವೃದ್ಧಿಯನ್ನು ಜನಾಂದೋಲನಚನ್ನಾಗಿಸುವ ದಿಕ್ಕಿನಲ್ಲಿ ನಡೆಯುತ್ತಿದ್ದೇವೆಯೇ.

ಬೆಲೆ:- 50 ಪುಟ ಸಂಖ್ಯೆ:- 72

 

Journalist,Translator,avid bibliophile

Leave a Reply

Your email address will not be published. Required fields are marked *

Back To Top