ಕರ್ನಾಟಕದಲ್ಲಿ ಕೋವಿಡ್ ಇಳಿಕೆ

ದೇಶದಲ್ಲಿ ಕೋವಿಡ್ ಪ್ರಕರಣಗಳ ಇಳಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯಸಚಿವಾಲಯತಿಳಿಸಿದೆ. ಕಳೆದ 30 ದಿನಗಳಲ್ಲಿ ದಕ್ಷಿಣದ ನಾಲ್ಕು ರಾಜ್ಯಗಳು ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಅತಿ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾಗಿವೆ. ಅ. ೨೯ರಂದು ಇದ್ದ 68,180 ಸಕ್ರಿಯ ಪ್ರಕರಣಗಳು ನ.೨೯ಕ್ಕೆ 24,770ಕ್ಕೆ ಕುಸಿದಿದೆ. ಪರೀಕ್ಷೆ ವಿಧಾನದಲ್ಲಿ ಸುಧಾರಣೆ ಮಾಡಬೇಕಿದೆ.ರೋಗ ಲಕ್ಷಣ ಹೊಂದಿರುವವರನ್ನು ಪ್ರತ್ಯೇಕವಾಗಿ ಇರಿಸುತ್ತಿರುವುದರಿಂದ, ಸೋಂಕು ಹರಡುವಿಕೆ  ತಡೆಯಲು ಸಾಧ್ಯವಾಗಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್‌ನ ಹಿರಿಯ ಸೋಂಕು ಶಾಸ್ತ್ರಜ್ಞ ಗಿರಿಧರ್ ಬಾಬು ಹೇಳಿದ್ದಾರೆ.  ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ ತಲಾ ೧೫ ಸಾವಿರದಷ್ಟು ಕುಸಿದಿದೆ. ದಕ್ಷಿಣ ಭಾರತದಲ್ಲಿ ಕೋವಿಡ್ ಪಿಡುಗು ಕಡಿಮೆಯಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ. ಆದರೆ, ದೆಹಲಿ, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಾಗಿವೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಏರಿಕೆ((13,043) ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top