ಗುಬ್ಬಚ್ಚಿ ಗೂಡು ಕಟ್ಟಲು ಬಿಡಬೇಕಿದೆ: ಇಂದು ವಿಶ್ವ ಗುಬ್ಬಚ್ಚಿ ದಿನ

ಮಂಡ್ಯ(ಮಾ.20): ಇಂದು ವಿಶ್ವ ಗುಬ್ಬಚ್ಚಿ ದಿನಾಚರಣೆ. ವಿನಾಶದ ಅಂಚಿನಲ್ಲಿರೋ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ವಿಶ್ವದಲ್ಲಿ ಮಾರ್ಚ್​ 20ನ್ನು ವಿಶ್ವ ಗುಬ್ಬಚ್ಚಿ ದಿನ ಎಂದು ಆಚರಣೆ ಮಾಡಲಾಗ್ತಿದೆ. ಗುಬ್ಬಚ್ಚಿಗಳ ಸಂರಕ್ಷಣೆ ಮಾಡಲು ಕರೆ ನೀಡಿಲಾಗ್ತಿದೆ. ಆದ್ರೆ ಅದನ್ನು ಪಾಲಿಸುತ್ತಿರೋ ಸಂಖ್ಯೆಮಾತ್ರ ಕಡಿಮೆ. ಆದ್ರೆ ಇಲ್ಲೊಂದು ಕುಟುಂಬ ಮಾತ್ರ ಈ ಅಳಿವಿನಂಚಿನಲ್ಲಿರೋ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದೆ. ತಮ್ಮ ಮನೆಯಂಗಳದಲ್ಲಿ‌ ನೂರಾರು ಗುಬ್ಬಚ್ಚಿಗಳನ್ನು ಸಾಕುವ ಮೂಲಕ ಸಂರಕ್ಷಣೆ ಮಾಡ್ತಾ, ವಿಶ್ವ ಗುಬ್ಬಚ್ಚಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸ್ತಿದೆ.

ಹೌದು! ಇಂದು ವಿಶ್ಚ ಗುಬ್ಬಚ್ಚಿ ದಿನಾಚರಣೆ.ಈ ದಿನವನ್ನು ಮಂಡ್ಯಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾ ಮ್ ನಲ್ಲಿರೋ ಜಯರಾಂ ರಾವ್ ಎಂಬುವರ ಕುಟುಂಬ ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರ್ತಿ ದೆ. ವೃತ್ತಿಯಲ್ಲಿಇಂಜಿನಿಯರ್ ಆಗಿರೋ ಜಯರಾಂ ತಮ್ಮದೆ ಆದ ವೆಲ್ಡಿಂಗ್ ಶಾಪ್ ಇಟ್ಟುಕೊಂಡಿದ್ದು ಜೀವ ನ ನಡೆಸ್ತಿದ್ದಾರೆ. ಇವ್ರ ಮನೆಯಂಗಳದಲ್ಲಿ ನೂರಾರು ಗುಬ್ಬಿಗಳನ್ನು ಸಂರಕ್ಷಣೆ ಮಾಡ್ತಾ ಅವುಗಳ ಚೀಂವ್ ಚೀಂವ್ ಕಲರವ ಕೇಳ್ತಾ ಸಂತೋಷದಿಂದ ಕಾಲ ಕಳೆ ಯುತ್ತಿದ್ದಾರೆ. ಇವ್ರು ತಮ್ಮ ಮನೆಯಲ್ಲಿ ಗುಬ್ಬಚ್ಚಿಗಳಿಗಾ ಗಿ PVC ಪೈಪ್ ನಲ್ಲಿ ಅವುಗಳಿಗೆ ನೂರಾರು ಗೂಡು ನಿರ್ಮಿಸಿದ್ದಾರೆ. ಅಲ್ಲದೇ ಅವುಗಳಿಗಾಗಿ ಆಹಾರ ಮತ್ತು ನೀರಿಗೆ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಅವುಗಳ ಆಹಾರಕ್ಕೆ ನವಣೆ ಮತ್ತು ಆರ್ಕಾ ಧಾನ್ಯವನ್ನು ತಂದು ಅದನ್ನು ನಿರುಪಯುಕ್ತ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ತೂಗಿ ಹಾಕಿದ್ರೆ, ಅಲ್ಲಲ್ಲಿ ಭತ್ತದ ತೆನೆ ಕೂಡ ಹಾಕಿದ್ದಾರೆ.

ಇನ್ನು ನೀರಿಗಾಗಿ ಅವುಗಳಿಗೆ ತಮ್ಮ ಮನೆಯ ಹೊರಗೆ ವಿಶೇಷ ಮಾದರಿಯ ಚಿಕ್ಕ ಜಲಪಾತ ಹಾಗೂ ಕೊಳವನ್ನು ನಿರ್ಮಿಸಿದ್ದಾರೆ. ಇದ್ರಿಂದ ಇವರ ಮನೆಯಂಗಳದಲ್ಲಿ ನೂರಾರು ಗುಬ್ಬಚ್ಚಿಗಳು ವಾಸವಾಗಿದ್ದು, ಪ್ರತಿನಿತ್ಯ ಇವ್ರ ಮನೆಯಂಗಳದಲ್ಲಿ ಗುಬ್ಬಿಗಳ ಚೀಂವ್ ಚೀಂವ್ ನ ಕಲರವ ಕೇಳ್ತಿದ್ದು,ಈ ಗುಬ್ಬಿಗಳ ಸಂರಕ್ಷಣೆಗೆ ಎಲ್ಲರು ಮುಂದಾಗುವಂತೆ ಈ ಗುಬ್ಬಿ ಪ್ರೇಮಿ ಮನವಿ ಮಾಡ್ತಿದ್ದಾರೆ.ಇನ್ನು ಈ ಕುಟುಂಬ ಪ್ರತಿವರ್ಷ ಮಾರ್ಚ್ 20 ರಂದು ಮನೆಯಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರ್ತಿದೆ. ಆದಿನ ಕೇಕ್ ತಂದು ನೆರೆಹೊರೆಯವರ ಜೊತೆ ಆ ದಿನವನ್ನು ಸಂಭ್ರಮದಿಂದ ಆಚರಿಸ್ತಾ, ಜನರಲ್ಲಿ ಗುಬ್ಬಚ್ಚಿ ಸಂರಕ್ಷಣೆಯ ಅರಿವು ಮೂಡಿಸ್ತಿದ್ದಾರೆ. ಜಯರಾಂ ಸೇರಿದಂತೆ ಇವ್ರ ಕುಟುಂಬ ಸದಸ್ಯರು ಈ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಶ್ರಮಿಸ್ತಿದ್ದು, ತಮ್ಮ ಮನೆಯಂಗಳದಲ್ಲಿನೂರಾರು ಗುಬ್ಬಚ್ಚಿಗಳಿಗೆ ಆಶ್ರಯ ನೀಡಿ ಅವುಗಳನ್ನುಪ್ರೀತಿಯಿಂದ ನೋಡಿಕೊಳ್ತಿದ್ದಾರೆ.

ಇವರ ಈ ಕಾಳಜಿಯಿಂದ ಕೆಲವು ಗುಬ್ಬಚ್ಚಿಗಳು ಈ ಮನೆಯ ಸದಸ್ಯರ ಜೊತೆ ಮತ್ತು ಪ್ರಾಣಿಗಳ ಜೊತೆ ಒಡನಾಟ ಇಟ್ಟು ಕೊಂಡಿವೆ. ಇವ್ರ ಮನೆಯಲ್ಲಿನ ಶ್ವಾನದ ಜೊತೆ ಗುಬ್ಬಚ್ಚಿಗಳು ಚಿನ್ನಾಟವಾಡಿದ್ರೆ, ಇವ್ರ ಮಗಳು ಕರೆದ ತಕ್ಷಣ ಬಂದು‌ ಚೀಂವ್ ಚೀಂವ್ ಶಬ್ದ ಮಾಡ್ತಾ ಬಂದು ಆಹಾರ ಸ್ವೀಕರಿಸಿ ಮನಸ್ಸಿಗೆ ಮುದ ನೀಡಿ ಹೋಗುವಷ್ಟು ಒಡನಾಟ ಬೆಳಸಿಕೊಂಡಿವೆ. ಗುಬ್ಬಿಗಳ ಈ ಒಡನಾಟದಿಂದ ಈ ಕುಟುಂಬ ಈ ಗುಬ್ಬಿಗಳ ಮೇಲೆ ಬಹಳಷ್ಟು ಪ್ರೀತಿ ಇಟ್ಟುಕೊಂಡಿದ್ದು ಇವುಗಳ ಸರಂಕ್ಷಣೆ ಮಾಡ್ತಿದ್ದು, ಮನೆಯ ಸದಸ್ಯರನ್ನೆಷ್ಟು ಮಟ್ಟಿಗೆ ಇವುಗಳ ಪೋಷಣೆ ಮಾಡ್ತಾ ಈ ಗುಬ್ಬಿಗಳ ಸಂರಕ್ಷಣೆ ಮಾಡ್ತಾ ಆ ಕಾರ್ಯದಲ್ಲೆ ಖುಷಿ ಅನುಭವಿಸ್ತಿದೆ.
ಒಟ್ಟಾರೆ ಅಳಿವಿನಂಚಿನಲ್ಲಿರೋ ಈ ಗುಬ್ಬಚ್ಚಿ ಗಳ ಸಂರಕ್ಷಣೆಗಾಗಿ ಜಯರಾಂ ಕುಟುಂಬ ಸಾಕಷ್ಟುಶ್ರಮಿಸ್ತಿದ್ದು, ಗುಬ್ಬಚ್ಚಿ ದಿನವನ್ನು ಬಹಳ ಅರ್ಥಪೂರ್ಣ ವಾಗಿ ಆಚರಿಸ್ತಿದೆ. ಜಾಗತೀಕರಣ ಹಾಗೂ ಮೊಬೈಲ್ ಟವರ್ ನ ತರಂಗ ಗಳಿಂದ ಇವುಗಳ ಸಂತತಿ ನಶಸಿ ಹೋಗ್ತಿರೋ ಈ ಗುಬ್ಬಚ್ಚಿಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದ್ದು, ಇಂತಹ ಗುಬ್ಬಚ್ಚಿ ಪ್ರೇಮಿಗಳ ಕಾರ್ಯವನ್ನು ಶ್ಲಾಘಿಸುತ್ತಾ ಇಂತಹವರ ಕಾರ್ಯಕ್ಕೆ ಪ್ರೋತ್ಸಾಹಿಸಿ ನಾವು ಕೂಡ ಕೈ ಜೋಡಿಸಬೇಕಿದೆ.

ಸುದ್ದಿ ಸಂಗ್ರಹ(ಡಿ.ಹೆಚ್)

 

 

 

Journalist,Translator,avid bibliophile

Leave a Reply

Your email address will not be published. Required fields are marked *

Back To Top