ಕೃಷಿ ಕ್ಷೇತ್ರಕ್ಕೆ ಸಂಬಂಧಿಸಸಿದ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಮಾತುಕತೆಗೆ ಬರುವಂತೆ ಗೃಹ ಸಚಿವ ಅಮಿತ್ ಶಾ ನೀಡಿದ್ದ ಆಹ್ವಾನವÀನ್ನು ತಿರಸ್ಕರಿಸಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಷರತ್ತುಬದ್ಧ ಮಾತುಕತೆ ರೈತರಿಗೆ ಮಾಡಿದ ಅವಮಾನ. ಬುರಾಡಿ ಮೈದಾನ ತೆರೆದ ಬಂದೀಖಾನೆಯಾಗಿದ್ದು, ಮಾತುಕತೆಗೆ ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಸುರ್ಜಿತ್ ಸಿಂಗ್ ಫುಲ್ ಹೇಳಿದ್ದಾರೆ.
ದೆಹಲಿಯ ಗಡಿ ಸಿಂಘುವಿನಲ್ಲಿ ರೈತರು ನಾಲ್ಕು ದಿನಗಳಿಂದ ಬೀಡು ಬಿಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜಕೀಯ ಪಕ್ಷಗಳಿಗೆ ಅವಕಾಶ ಕೊಡುವುದಿಲ್ಲ ಮತ್ತು ಪ್ರತಿಭಟನೆ ವೇದಿಕೆಯಲ್ಲಿ ರಾಜಕೀಯ ನಾಯಕರು ಮಾತನಾಡಲು ಅವಕಾಶ ಕೊಡುವುದಿಲ್ಲ ಎಂದು ರೈತ ಮುಖಂಡರು ಘೋಷಿಸಿದ್ದಾರೆ. ಬುರಾಡಿ ಮೈದಾನದಲ್ಲಿ ನೈರ್ಮಲ್ಯ ಮತ್ತು ವೈದ್ಯಕೀಯ ಸೇವೆಯ ಸೌಲಭ್ಯಗಳನ್ನು ಮಾಡಲಾಗಿದೆ. ಅಲ್ಲಿಗೆ ಹೋಗಿ ಪ್ರತಿಭಟನೆ ಮುಂದುವರಿಸಿ. ಮಾತುಕತೆಗೆ ಬನ್ನಿ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಬರೆದ ಪತ್ರದಲ್ಲಿ ಕೋರಿದ್ದರು. ವಿನಂತಿಸಿದ್ದಾರೆ. ಅಷ್ಟಲ್ಲದೆ, ಕೇಂದ್ರ ಸಚಿವರ ನಿಯೋಗ ರೈತರ ನಾಯಕರನ್ನು ಡಿಸೆಂಬರ್ ೩ರಂದು ವಿಜ್ಞಾನ ಭವನದಲ್ಲಿ ಭೇಟಿಯಾಗಿ, ಮಾತುಕತೆ ನಡೆಸಲಿದೆ ಎನ್ನುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿಕೆಯನ್ನೂ ರೈತರು ತಿರಸ್ಕರಿಸಿದ್ದಾರೆ. ಮಾತುಕತೆಗೆ ಬರುವಂತೆ ಗೃಹ ಸಚಿವರು ನೀಡಿದ ಆಹ್ವಾನ ವಿಶ್ವಾಸ ಭೀತಿಗೆ ಕಾರಣವಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿದೆ. ಇದೇ ಹೊತ್ತಿನಲ್ಲಿ, ಭಾರತೀಯ ಕಿಸಾನ್ ಯೂನಿಯನ್ ಕಾರ್ಯಕರ್ತರು ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ, ಕೃಷಿ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ. ಕಾಯಿದೆಗಳು ಜಾರಿಗೊಂಡ ಕೆಲವೇ ದಿನಗಳಲ್ಲಿ ರೈತರಿಗೆ ಹೊಸ ಅವಕಾಶಗಳನ್ನು ತೆರೆದುಕೊಂಡಿವೆ ಎಂದು ಪ್ರಧಾನಿ ಹೇಳಿದ್ದಾರೆ.
Courtesyg: Google (photo)