ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ 13ನ್ನು “‘ನೋ ಬ್ರಾ ಡೇ’ ಎಂದು ಆಚರಿಸಲಾಗುತ್ತದೆ. ದೇಶದಲ್ಲಿ ಮಹಿಳೆಯರನ್ನು ಅತಿ ಹೆಚ್ಚು ಕಾಡುವ ಎರಡನೇ ವಿಧದ ಮುಖ್ಯ ಕ್ಯಾನ್ಸರ್ ಇದು. ಪ್ರತಿ ವರ್ಷ ಸುಮಾರು 1.6ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು ಐಸಿಎಂಆರ್ ಅಂದಾಜಿಸಿದೆ. ಕಾಲಕಾಲಕ್ಕೆ ಸ್ತನ ಪರೀಕ್ಷೆ, ತಪಾಸಣೆ ಮಾಡಿಸಿಕೊಂಡು, ಸ್ತನದಲ್ಲಿ ಸಣ್ಣಪುಟ್ಟ ವ್ಯತ್ಯಾಸದ ಕಂಡುಬAದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು ಎಂದು ಮನವರಿಕೆ ಮಾಡುವುದು ಈ ದಿನದ ಆಚರಣೆಯ ಉದ್ದೇಶ. ಕ್ಯಾನ್ಸರ್‌ನಿಂದಾಗಿ ಶಸ್ತçಚಿಕಿತ್ಸೆಯಿಂದ ಸ್ತನ ಕಳೆದುಕೊಂಡವರಿಗೆ “ನಿಮ್ಮೊಂದಿಗೆ ನಾವೂ ಇದ್ದೇವೆ’ ಎಂದು ಸಾಂತ್ವನ ಹೇಳುವ ದಿನ. ಹರೆಯಕ್ಕೆ ಕಾಲಿಡುತ್ತಿರುವವರಿಗೆ ಸರಿಯಾದ ಬ್ರಾ ಆಯ್ಕೆ ಮಾಡುವುದು ಹೇಗೆ ಎಂದು ತಿಳಿಹೇಳುವ ದಿನವೂ ಹೌದು. ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದವರು ಮತ್ತು ಪೀಡಿತರ ಹೋರಾಟ ಕುರಿತು ಜಾಗೃತಿ ಮೂಡಿಸುವುದು “ನೋ ಬ್ರಾ ಡೇ’ ಉದ್ದೇಶ. ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ಕೆಲವು ಮಹಿಳೆಯರ ಒಂದು ಅಥವಾ ಎರಡೂ ಸ್ತನಗಳನ್ನು ಶಸ್ತçಚಿಕಿತ್ಸೆಯಿಂದ ತೆಗೆದು ಹಾಕಲಾಗುತ್ತದೆ. ಕೆಲವರು ಇದನ್ನು ಒಪ್ಪಿಕೊಂಡು ಸಹಜ ಜೀವನ ನಡೆಸಿದರೆ, ಇನ್ನು ಕೆಲವರು ಹೆಣ್ತನಕ್ಕೆ ಧಕ್ಕೆಯುಂಟಾಯಿತು ಎಂದು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಅಂತಹ ಮಹಿಳೆಯರ ಮಾನಸಿಕ ಹೊರೆಯನ್ನು ಒಂದು ದಿನ ಬ್ರಾ ಧರಿಸದೇ ನಿವಾರಿಸಬಹುದು. ನೀವೇನು ಮಾಡಬಹುದು?: ಮೊದಲಿಗೆ, ಸ್ತನ ಪರೀಕ್ಷೆ ಮಾಡಿಸಿಕೊಳ್ಳಿ. ಗೆಳತಿಯರು, ಅಮ್ಮ-ಚಿಕ್ಕಮ್ಮ-ದೊಡ್ಡಮ್ಮ, ಅಕ್ಕ-ತಂಗಿ ಸೇರಿದಂತೆ ನಿಮ್ಮ ಸ್ನೇಹ ವಲಯದಲ್ಲಿ ಬರುವ ಎಲ್ಲರಿಗೂ ಸ್ತನ ಪರೀಕ್ಷೆ ಮಾಡಿಸಿ ಕೊಳ್ಳಲು ಹೇಳಿ. ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆ ಅರಿವು ಮೂಡಿಸಿ. ಸ್ತನ ಇಲ್ಲವಾದರೂ ಲೈಂಗಿಕ ಜೀವನ ನಡೆಸಬಹುದು ಎಂದು ತಿಳಿಸಿಕೊಡಿ. ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆಲುವು ಸಾಧಿಸಿದವರ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ಸಾಧ್ಯವಾದಲ್ಲಿ ಹಣ ಸಂಗ್ರಹಿಸಿ, ಚಿಕಿತ್ಸೆಗೆ ಹಣವಿಲ್ಲದವರಿಗೆ ನೇರವಾಗಿ ಇಲ್ಲವೇ ಸ್ತ್ತನ ಕ್ಯಾನ್ಸರ್ ಪೀಡಿತರ ಶ್ರೇಯೋಭಿವೃದ್ಧಿಗೆ ದುಡಿಯುವ ಚಾರಿಟಿಗಳಿಗೆ ಹಣ ನೀಡಿ.