Delhi air quality slips
Delhi’s air quality slipped back into the very poor category on Wednesday after remaining in the severe zone for six days on the trot, with a change in the wind direction reducing the contribution of stubble burning in city’s pollution. The city recorded an air quality index (AQI) of 388 at 9 am. The 24-hour […]
National Education Day 2020 today
Every year since 2008, November 11 is celebrated as education day to commemorate the birth anniversary of MaulanaAbul Kalam Azad. Azad was independent India’s first education minister.A front line freedom fighter, served India in the capacity of minister of education during the period spanning 1947 to 1958. He is known for making several significant contributions […]
ವಿವೇಕ ಮತ್ತು ಒಮ್ಮತ- ಜೀನ್ ಡ್ರೀಜ್
ಡ್ರೀಜ್ ನರೇಗಾ ಯೋಜನೆ ಪರಿಕಲ್ಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಕಾಯಿದೆಯ ಕರಡು ಸಿದ್ಧಪಡಿಸಲು ನೆರವಾಗಿದ್ದರು. ಮಾಹಿತಿ ಹಕ್ಕು ಕಾಯಿದೆ ಹಾಗೂ ಆಹಾರ ಭದ್ರತೆ ಕಾಯಿದೆಗೂ ಅವರ ಕೊಡುಗೆ ಇದೆ. ರೈಲು ಮತ್ತು ಬಸ್‌ಗಳಲ್ಲಿ ಪ್ರಯಾಣಿಸುವ ಹಾಗೂ ಗ್ರಾಮಗಳ ಹಟ್ಟಿಗಳಲ್ಲಿ ತಂಗುವ ಸಂತ ಅರ್ಥಶಾಸ್ತ್ರಜ್ಞಾಅವರು. ಲೂವೆನ್‌ನಲ್ಲಿ ೧೯೫೯ರಲ್ಲಿ ಜನಿಸಿದ ಜೀನ್ ಅವರ ತಂದೆ ಜಾಕ್ ಡ್ರೀಜ್, ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞಾರಲ್ಲಿ ಒಬ್ಬರು ಮತ್ತು ಪ್ರಸಿದ್ಧ ಶಿಕ್ಷಕ. ಜಾಕ್ ಹಾಗೂ ಅವರ ಪತ್ನಿ ಸಾಮಾಜಿಕ ಕಳಕಳಿಯುಳ್ಳವರು. ಒಬ್ಬ ಸೋದರ ಎಡಪಂಥೀಯ […]
ಪಟಾಕಿ ಬಳಕೆಗೆ ನಿಷೇಧ ಹೇರಿದ ಎನ್‌ಜಿಟಿ
ರಾಷ್ಟ್ರಧಾನಿ ದೆಹಲಿಯಲ್ಲಿ ನ.9ರಿಂದ30ರವರೆಗೆ ಪಟಾಕಿ ಮಾರಾಟ ಮತ್ತು ಬಳಕೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಂಪೂರ್ಣ ನಿಷೇಧಿಸಿ, ಆದೇಶ ಹೊರಡಿಸಿದೆ. ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಮೇಲ್ಮನವಿ ಸಲ್ಲಿಸಿತ್ತು. ನ.5ರಂದು ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾ. ಆದರ್ಶಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠ, ಕಳೆದ ವರ್ಷ ನವೆಂಬರ್‌ನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಿದ್ದ ಹಾಗೂ ವಾಯುಮಾಲಿನ್ಯ ಹೆಚ್ಚು ದಾಖಲಾಗಿದ್ದ ದೇಶದ ಇತರ ನಗರ ಮತ್ತು ಪಟ್ಟಣಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶಿಸಿದೆ. ಗಾಳಿಯ ಗುಣಮಟ್ಟ […]
‘ಕೃಷಿ ಮೇಳ’ ನಾಳೆಯಿಂದ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ನ.11ರಿಂದ 13ರವರೆಗೆ ಕೃಷಿ ಮೇಳವನ್ನು ಆಯೋಜಿಸಿದೆ. ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ನೀಡುವುದು ಮೇಳದ ಉದ್ದೇಶ. ಕರೋನಾ ನಿರ್ಬಂಧಗಳ ಹಿನ್ನಲೆಯಲ್ಲಿ ಮೇಳ ಸರಳವಾಗಿ ನಡೆಯಲಿದೆ. ಕೊರೊನಾ ಹಿನ್ನಲೆಯಲ್ಲಿ ಸಕಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಪ್ರತ್ಯಕ್ಷ ಹಾಗೂ ಡಿಜಿಟಲ್ ಮುಖಾಂತರ ಮೇಳ ಹಮ್ಮಿಕೊಳ್ಳಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ ಉಪ ಮಹಾನಿರ್ದೇಶಕ ಎ.ಕೆ.ಸಿಂಗ್ ಅವರು ಆನ್‌ಲೈನ್ ಮೂಲಕ ನ.11ರ ಬೆಳಗ್ಗೆ 11 ಗಂಟೆಗೆ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು […]
ಜನತಾ ಜೀವವೈವಿಧ್ಯ ದಾಖಲೆ ವರದಿ ವಾಪಸು
ರಾಜ್ಯದ 30 ಜಿಲ್ಲೆಗಳು ಸಲ್ಲಿಸಿದ್ದ ಜನತಾ ಜೀವವೈವಿಧ್ಯ ದಾಖಲು(ಪಿಬಿಆರ್) ವರದಿಯನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿ ವಾಪಸ್ ಕಳಿಸಿದೆ. ವರದಿ ಸಮರ್ಪಕವಾಗಿಲ್ಲದ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಿ ಕಳಿಸಬೇಕು ಎಂದು ಸೂಚಿಸಿದೆ. ವರದಿ ತಯಾರಿಕೆಯ ಉಸ್ತುವಾರಿಯನ್ನು ಆಯಾ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗ ವಹಿಸಿಕೊಂಡಿದೆ. ವರದಿ ತಯಾರಿಕೆ ಸಂಬಂಧ ಹಲವು ಬಾರಿ ಮಾಹಿತಿ ನೀಡಿದ್ದರೂ, ದಾಖಲೆ ಸಮರ್ಪಕವಾಗಿಲ್ಲ. ತಿದ್ದುಪಡಿಗಳನ್ನು ಸರಿಪಡಿಸಿ, ಪುನಃ ವರದಿ ಸಲ್ಲಿಸಬೇಕು ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಹಸಿರು ನ್ಯಾಯ ಮಂಡಳಿಯ ಸೂಚನೆಯನ್ವಯ ರಾಷ್ಟ್ರೀಯ ಜೀವವೈವಿಧ್ಯ […]
ಕಾಲೇಜುಗಳ ಆರಂಭ: ಎಸ್‌ಒಪಿ ಬಿಡುಗಡೆ
ಪದವಿ, ಎಂಜಿನಿಯರಿAಗ್ ಹಾಗೂ ಡಿಪ್ಲೊಮಾ ಕಾಲೇಜುಗಳನ್ನು 17ರಿಂದ ಆರಂಭಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ)ವನ್ನು ಉನ್ನತ ಶಿಕ್ಷಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಗೂ ಪ್ರಥಮ/ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ನಿಗದಿತ ಸೂಚನೆ ನೀಡಲಾಗಿದೆ. ಸ್ನಾತಕೋತ್ತರ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು 17ರಿಂದ ಪ್ರಾರಂಭಿಸಬೇಕು. ಈ ತರಗತಿಗಳಿಗೆ ಹಾಜರಾಗಲು ಇಚ್ಛಿಸುವ ವಿದ್ಯಾರ್ಥಿಗಳ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಬೇಕು. ಬೋಧನೆ, ಪ್ರಯೋಗಾಲಯ ಮತ್ತು ಪ್ರಾಜೆಕ್ಟ್ ತರಗತಿಗಳನ್ನು ಪಾಳಿ […]
ಸೆನ್ಸೆಕ್ಸ್: ಸಾರ್ವಕಾಲಿಕ ದಾಖಲೆ
ಮುಂಬೈ ಷೇರುಪೇಟೆ ವಹಿವಾಟಿನಲ್ಲಿ ಸೋಮವಾರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಅಮೆರಿಕದಲ್ಲಿ ಚುನಾವಣೆಯಲ್ಲಿ ಜೋ ಬೈಡೆನ್ ಆಯ್ಕೆಯಾದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಇದರಿಂದ ಬಿಎಸ್‌ಇ 42,597 ಅಂಶ ತಲುಪಿದ್ದು, ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 704 ಅಂಶಗಳಷ್ಟು ಹೆಚ್ಚಳ ಕಂಡಿದೆ. ರಾಷ್ಟ್ರಯ ಷೇರು ಮಾರುಕಟ್ಟೆ (ಎನ್‌ಎಸ್‌ಇ) ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟ 12,461ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ಇದರಿಂದ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ರೂಗಳಷ್ಟು ಹೆಚ್ಚಳ ಕಂಡಿದೆ. ಜೋ ಬೈಡೆನ್ ಆರ್ಥಿಕ ಪ್ಯಾಕೇಜ್ ಘೋಷಣೆ […]
ಕೋವಿಡ್ ಲಸಿಕೆ ಶೇ. 90 ಪರಿಣಾಮಕಾರಿ
ತಾನು ಅಭಿವೃದ್ಧಿಪಡಿಸಿರುವ ಲಸಿಕೆ ಕೋವಿಡ್ ತಡೆಗಟ್ಟುವಲ್ಲಿ ಶೇ. 90ರಷ್ಟು ಪರಿಣಾಮಕಾರಿಯಾಗಿದೆ ಎಂದು ಫೀಜರ್ ಹೇಳಿದೆ. ಅಮೆರಿಕ ಹಾಗೂ ಇನ್ನಿತರ ಐದು ರಾಷ್ಟ್ರಗಳ 44 ಸಾವಿರ ಮಂದಿ ಮೇಲೆ ಲಸಿಕೆ ಪ್ರಯೋಗಿಸಲಾಗಿದ್ದು, ಲಸಿಕೆ ಶೇ. 90ರಷ್ಟು ಪರಿಣಾಮಕಾರಿ ಎಂದು ತಿಳಿದುಬಂದಿದೆ. ತುರ್ತು ಸಂದರ್ಭದಲ್ಲಿ ಲಸಿಕೆಯನ್ನು ಬಳಸಲು ಅವಕಾಶ ನೀಡುವಂತೆ ನಿಯಂತ್ರಣ ಸಂಸ್ಥೆಗೆ ಮಾಸಾಂತ್ಯ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದು ಮಧ್ಯಂತರ ವರದಿಯಾಗಿದ್ದು, ಇದರ ಆಧಾರದಲ್ಲಿ ಸದ್ಯದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದುಕೊಳ್ಳುವಂತಿಲ್ಲ. ಫಲಿತಾಂಶ ಅಧ್ಯಯನ ಪೂರ್ಣಗೊಳ್ಳುವ ವೇಳೆಗೆ ಬದಲಾಗುವ […]

