Four scientists conferred llscs distinguished alumni awards
Four scientists have been selected for the prestigious Indian Institute of Science (IISc) distinguished alumnus awards for 2020. The awardees are Dr K Rajalakshmi Menon of DRDO, Professor BS Murty from IIT Hyderabad, Professor Sethuraman Panchanathan of the National Science Foundation (USA) and Dr Keshab Panda of L&T Technology Services. The awardees are highly accomplished […]
ತೈಲ ಬೆಲೆ ಸುಂಕ ೫ ರೂ.ಸುಂಕ ಏರಿಕೆ?
ಕೋವಿಡ್‌ನಿಂದ ಹಿನ್ನಡೆ ಅನುಭವಿಸಿರುವ ಆರ್ಥಿಕತೆಯನ್ನು ಸುಧಾರಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ೫ ರವರೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ೫ ರೂ. ಹೆಚ್ಚಳದಿಂದ ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ೩೭.೯೮ ರೂ. ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ೩೬.೯೮ ರೂ. ಆಗಲಿದೆ. ಮಾರ್ಚ್ ೨೦೨೦ರಲ್ಲಿ ಕೇಂದ್ರ ಸರ್ಕಾರ ೧೮ ಮತ್ತು ೧೨ ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಿತು. ಅದರಲ್ಲಿ ಪೆಟ್ರೋಲ್ ಮೇಲೆ ೧೨ […]
ಟಿಇಟಿ ಪ್ರಮಾಣಪತ್ರ: ಜೀವಿತಾವಧಿ ಸಿಂಧುತ್ವ
ಟಿಇಟಿ ಪರೀಕ್ಷೆಯ ಪ್ರಮಾಣಪತ್ರದ ಮಾನ್ಯತೆಯನ್ನು ಜೀವಿತಾವಧಿಗೆ ವಿಸ್ತರಿಸಲಾಗಿದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ(ಎನ್ಸಿಟಿಇ) ಸಿಟಿಇಟಿ ಮತ್ತು ಟಿಇಟಿ ಪ್ರಮಾಣಪತ್ರದ ಮಾನ್ಯತೆಯನ್ನು ವಿಸ್ತರಿಸಿದೆ. ಇದರಿಂದ, ಸಿಟಿಇಟಿ ಮತ್ತು ಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಯಾವಾಗಲಾದರೂ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ಪ್ರಮಾಣಪತ್ರಗಳಿಗೆ ಈ ಮೊದಲು ೭ ವರ್ಷ ಮಾನ್ಯತೆ ಇತ್ತು. ಸೆಪ್ಟೆಂಬರ್ ೨೯ ರಂದು ನಡೆದ ಎನ್ಸಿಟಿಇಯ ೫೦ ನೇ ಸಭೆಯಲ್ಲಿ ಮಾನ್ಯತೆ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.ಟಿಇಟಿ ಪರೀಕ್ಷೆಯ ಪ್ರಮಾಣಪತ್ರದ ಮಾನ್ಯತೆಯನ್ನು ಜೀವಿತಾವಧಿಗೆ ವಿಸ್ತರಿಸಲಾಗಿದೆ. ರಾಷ್ಟ್ರೀಯ […]
ಕಚ್ಚಾ ಉಕ್ಕು ಉತ್ಪಾದನೆ ಇಳಿಕೆ
ದೇಶದಲ್ಲಿ ಕಚ್ಚಾ ಉಕ್ಕು ಉತ್ಪಾದನೆ ಸೆಪ್ಟೆಂಬರ್ ಮಾಸದÀಲ್ಲಿ ಶೇ.೨.೯ರಷ್ಟು ಇಳಿಕೆಯಾಗಿದೆ. ಒಟ್ಟು ಕಚ್ಚಾ ಉಕ್ಕು ಉತ್ಪಾದನೆ ೮೫.೨ ಲಕ್ಷ ಟನ್ ಎಂದು ವಿಶ್ವ ಉಕ್ಕು ಒಕ್ಕೂಟ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೮೭.೭ ಲಕ್ಷ ಟನ್ ಕಚ್ಚಾ ಉಕ್ಕು ಉತ್ಪಾದನೆ ಮಾಡಲಾಗಿತ್ತು. ಈ ಸೆಪ್ಟೆಂಬರ್‌ನಲ್ಲಿ ೬೪ ದೇಶಗಳ ಒಟ್ಟು ಉತ್ಪಾದನೆ ೧೫.೬೩ ಕೋಟಿ ಟನ್. ೨೦೧೯ರ ಸೆಪ್ಟೆಂಬರ್‌ನಲ್ಲಿ ಇದ್ದ ೧೫.೧೮ ಕೋಟಿ ಟನ್ ಉತ್ಪಾದನೆಗೆ ಹೋಲಿಸಿದರೆ, ಶೇ ೨.೯ರಷ್ಟು ಹೆಚ್ಚಾಗಿದೆ ಎಂದು ಒಕ್ಕೂಟ ಹೇಳಿದೆ. ಚೀನಾದಲ್ಲಿ […]
ಫ್ಯೂಚರ್–ರಿಲಯನ್ಸ್ ಒಪ್ಪಂದಕ್ಕೆ ತಡೆ
ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್ ಕಂಪನಿಯ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ(ಆರ್‌ಐಎಲ್) ₹ ೨೪,೭೧೩ ಕೋಟಿಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಿಂಗಾಪುರದ ಮಧ್ಯಸ್ಥಿಕೆ ಕೇಂದ್ರವು ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆಯನ್ನು ಪ್ರಶ್ನಿಸುವುದಾಗಿ ಫ್ಯೂಚರ್ ಸೋಮವಾರ ಹೇಳಿದೆ. ಅಮೆಜಾನ್ ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಮಧ್ಯಸ್ಥಿಕೆ ಕೇಂದ್ರ ತಡೆಯಾಜ್ಞೆ ನೀಡಿದೆ. ಆದರೆ, ಅಮೆಜಾನ್ ಕಂಪನಿ ಉಲ್ಲೇಖಿಸಿರುವ ಒಪ್ಪಂದದಲ್ಲಿ ತಾನು ಭಾಗಿದಾರ ಅಲ್ಲ ಎಂದು ಫ್ಯೂಚರ್ ಕಂಪನಿ ಹೇಳಿದೆ. ಅಮೆಜಾನ್ ಕಳೆದ ವರ್ಷ ಫ್ಯೂಚರ್ ಕಂಪನಿಯಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು […]
ಈರುಳ್ಳಿ ತಂದ ಕಣ್ಣೀರು
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಬೆಳೆ ಬಹುತೇಕ ನಾಶವಾಗಿದ್ದು, ರೈತರಿಗೆ ಭಾರಿ ನಷ್ಟವುಂಟು ಮಾಡಿದೆ. ಕಳೆದ ೧೦ ವರ್ಷದÀಲ್ಲಿ ಇದೇ ಮೊದಲ ಬಾರಿಗೆ ಬಿತ್ತನೆ ಮಾಡಿದ ಸಂಪೂರ್ಣ ಬೆಳೆ ನಾಶವಾಗಿದೆ. ನಿರಂತರ ಮಳೆಯಿಂದ ಈರುಳ್ಳಿ ಕೀಳಲು ಸಾಧ್ಯವಾಗದೆ ಮಳೆ ನೀರು ಹೊಲಗಳಲ್ಲಿ ನೀರು ನಿಂತು, ಗಡ್ಡೆ ಸಂಪೂರ್ಣ ಕೊಳೆತು ಹೋಗಿದೆ. ಫಸಲು ಕಿತ್ತವರು ಕೂಡ ಮಳೆಯಿಂದಾಗಿ ಬೆಲೆಯನ್ನು ಎತ್ತಲು ಸಾಧ್ಯವಾಗದೆ ಹೊಲದಲ್ಲೇ ಬಿಟ್ಟಿದ್ದು, ಮೊಳಕೆ ಬಂದು ಹಾಳಾಗಿದೆ. ಮುಂಗಾರು ಹಂಗಾಮಿನ ಈರುಳ್ಳಿ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರುತ್ತದೆ. […]
ಹೊಸ ಕ್ಯೂಆರ್ ಕೋಡ್ ಕೂಡದು
ಪಾವತಿ ವ್ಯವಸ್ಥೆಗಳನ್ನು ನಿರ್ವಹಣೆ ಮಾಡುವವರು(ಪಿಎಸ್‌ಒ) ಹಣ ಪಾವತಿಗೆ ಹೊಸ ಕ್ಯೂಆರ್ ಕೋಡ್‌ಗಳನ್ನು ಬಿಡುಗಡೆ ಮಾಡಬಾರದು ಎಂದು ಆರ್‌ಬಿಐ ಹೇಳಿದೆ. ಅಂಗಡಿ, ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್ ಮೂಲಕ ಹಣ ಪಾವತಿ ಮಾಡಲು ಕ್ಯೂಆರ್ ಕೋಡ್ ಬಳಸಲಾಗುತ್ತದೆ. ಹಾಲಿ ಯುಪಿಐ ಕ್ಯೂಆರ್ ಮತ್ತು ಭಾರತ್ ಕ್ಯೂಆರ್ ಎಂಬ ಎರಡು ಕ್ಯೂಆರ್ ಕೋಡ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. Courtesyg: Google (photo)
ರಾಜಧಾನಿಗೆ ವಿದ್ಯುತ್ ಬಸ್ ಆಗಮನ
ಬಿಎಂಟಿಸಿ ಒಲೆಕ್ಟಾç ಕಂಪನಿಯ ವಿದ್ಯುತ್ ಬಸ್ ಪರೀಕ್ಷಾರ್ಥ ಸಂಚಾರವನ್ನು ನಡೆಸಿದ್ದು, ಈ ಮೂಲಕ ಬೆಂಗಳೂರಿನ ಬಹುದಿನಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಒಲೆಕ್ಟ್ರಾ ಕಂಪನಿಯ ವಿದ್ಯುತ್ ಬಸ್‌ಗಳು ಹೈದರಾಬಾದ್, ಪುಣೆ-ಮುಂಬೈ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಕರ‍್ಯ ನಿರ್ವಹಿಸುತ್ತಿದ್ದು, ಉತ್ತರಾಖಂಡದ ಶಿಲ್ವಾಸ, ಅಸ್ಸಾಂನ ಗುವಾಹಟಿ, ಮಧ್ಯಪ್ರದೇಶದ ಇಂದೋರ್, ಸೂರತ್, ಭೋಪಾಲ್, ಜಬಲ್ಪುರ, ಉಜ್ಜಯಿನಿ ಸೇರಿದಂತೆ ಹಲವೆಡೆ ಸಂಚಾರಕ್ಕೆ ಅನುಮತಿ ಪಡೆದುಕೊಂಡಿದೆ. ಇದಕ್ಕಾಗಿ ೮೦೦ ಬಸ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಿರುಮಲ ಮತ್ತು ಶಬರಿಮಲೆ ಬೆಟ್ಟದಲ್ಲೂ ಕಾರ್ಯಾಚರಣೆ ಮಾಡುತ್ತಿದೆ. ಹೈದರಾಬಾದ್‌ನಲ್ಲಿ […]
ಬೆಂಗಳೂರನ್ನು ಕಾಡುವ ಚಿತ್ತಾ ಮಳೆ
ಅಕ್ಟೋಬರ್ ೧೦ರಿಂದ ಆರಂಭವಾಗಿರುವ ಚಿತ್ತಾ ಮಳೆ, ರಾಜಧಾನಿಯನ್ನು ಕಾಡಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ಅಕ್ಟೋಬರ್ ನಂತರ ಹಿಂಗಾರು ಆರಂಭವಾಗಲಿದೆ. ಕಳೆದ ಹತ್ತು ವರ್ಷದಿಂದ ಹಿಂಗಾರು ದಕ್ಷಿಣ ಒಳನಾಡಿನ ಬೆಂಗಳೂರನ್ನು ಕಾಡುತ್ತಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಅತಿ ಹೆಚ್ಚು ಮಳೆಯಾಗುತ್ತಿತ್ತು.ಆದರೆ, ಕೆಲ ವರ್ಷಗಳಿಂದ ಅಕ್ಟೋಬರ್‌ನಲ್ಲಿ ಭಾರಿ ಮಳೆ ಸುರಿಯುತ್ತಿದೆ ಎಂದು ಪರಿಣತರು ಹೇಳುತ್ತಾರೆ. “ಚಿತ್ತಾ’ ಹಿಂಗಾರಿನ ಮೊದಲ ಮಳೆ. ಯಾವಾಗ ಬೇಕಾದರೂ, […]