ಬತ್ತದ ಚಿಲುಮೆ
ಋತ-04 ಭಾರತದ ಆದಿವಾಸಿ ಕಥನ ಅಸ್ಮಿತೆ ಮತ್ತು ಅಸಮಾನತೆ
01. ಭಾರತದಲ್ಲಿ ಆದಿವಾಸಿ ಅಸ್ಮಿತೆಯ ಪ್ರಶ್ನೆಗಳು- ಡಾ.ಮುಜಾಪ್ಫರ್ ಅಸ್ಸಾದಿ(06) ಆದಿವಾಸಿಗಳ ಅಸ್ಮಿತೆಯಲ್ಲಿ ಮೊತ್ತ ಮೊದಲ ಪ್ರಶ್ನೆ ಆದಿವಾಸಿಗಳಲ್ಲಿ ಮತಾಂತರ, ಧರ್ಮ ಪರಿವರ್ತನೆಯ ಮೊದಲನೆಯ ಐಡೆಂಟಿಟಿ ಅಥವಾ ಅಸ್ಮಿತೆ ಪ್ರಧಾನವಾಗುತ್ತದೆ-ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಆದಿವಾಸಿ? ಆದಿವಾಸಿಗಳನ್ನು ರಾಜಕೀಯ ವ್ಯವಸ್ಥೆ ಹೇಗರ ಚಿತ್ರಿಸಿತ್ತು? ಒಂದು ಪ್ರಾಚೀನ ಬುಟಕಟ್ಟು ಜನಾಂಗವಾಗಿ ಗುರುತಿಸಿತ್ತೇ? ಅಥವಾ ಹಿಂದೂ ಧರ್ಮದ ಭಾಗವಾಗಿ ಗುರುತಿತ್ತೇ? ಈ ಗುರುತಿಸುವಿಕೆಯ ಸಂದರ್ಭದಲ್ಲಿ ಯಾವ ಯಾವ ಅಂಶಗಳು ಗಣನೆಗೆ ಬಂದವು. 02. ಬುಡಕಟ್ಟು ಅಧ್ಯಯನದ ಪರ್ಯಾಯ ಹಂಬಲಗಳು- ಡಾ.ಎ.ಎಸ್. ಪ್ರಭಾಕರ(24) […]
ಋತ-03 ಜಾಗತಿಕ ಪರಿಸರ ಚರಿತ್ರೆ
01. ಹಸಿರಿನೆಡೆಗೆ(10) ಪರಿಸರ ಆಂದೋಲನ ೧೯೬೦ರ ಕೂಸು. ಇದು ಇನ್ನೂ ಕಾವು, ಚಲನೆ ಕಳೆದುಕೊಂಡಿಲ್ಲ. ಈ ಪ್ರತಿಭಟನೆಯ ದಶಕದ ಬೇರೆಲ್ಲ ಹೋರಾಟಗಳು- ಯುದ್ಧವಿರೋಧವಾದ, ಪ್ರತಿ ಸಂಸ್ಕಿçತಿ ಮತ್ತು ನಾಗರಿಕ ಹಕ್ಕು ಹೋರಾಟ-ಇವೆಲ್ಲ ಈಗ ಕಳೆದುಹೋಗಿವೆ ಇಲ್ಲವೇ ದಾರಿ ಕಾಣದಂತಾಗಿವೆ. ಹೀಗಿದ್ದರೂ, ಪರಿಸರ ಆಂದೋಲನ ಬೆಳೆಯುತ್ತಲೇ ಇದೆ, ನಿರ್ಗಮನವನ್ನು ತಡೆಹಿಡಿದಿದೆ, ನಾಶವಾಗುವುದುನ್ನು ಪ್ರತಿರೋಧಿಸಿದೆ. 02. ಮರಳಿ ಮಣ್ಣಿಗೆ(14) 18 ಮತ್ತು 19ನೇ ಶತಮಾನದಲ್ಲಿ ಇಂಗ್ಲೆAಡ್ ಭೂ ರಚನೆ ಬದಲಾಯಿತು. ಕಲ್ಲಿದ್ದಲು ಗಣಿಗಳು, ಗಿರಿಣಿಗಳು, ರೈಲು ಹಳಿಗಳು, ಬಂದರುಗಳು ಹಾಗೂ […]
ಋತ-02 ಒಕ್ಕೂಟ ವ್ಯವಸ್ಥೆ
01.ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪಕೂಟ ವ್ಯವಸ್ಥೆ(06) ಒಪ್ಪುಕೂಟಗಳನ್ನು ನಡುವಳಿಕೆಯ ನೆಲೆಯಲ್ಲಿ ನೋಡಿದಾಗ ಎರಡು ಬಗೆಯ ಒಪ್ಪುಕೂಗಳನ್ನು ಕಾಣಬಹುದು ೧.ಸಡಿಲ ಒಪ್ಪುಕೂಟ ೨ಸದೃಢ ಒಪ್ಪುಕೂಟ ಸಡಿಲ ಒಪ್ಪುಕೂಟದಲ್ಲಿ ನಾಡುಗಳು ಕಾಲಕಾಲಕ್ಕೆ ತಮ್ಮ ಜನರ ಆಶಯಗಳಿಗೆ ತಕ್ಕಂತೆ ಕೂಟವನ್ನು ಸೇರುವ ಅಥವ ಬಿಡುವ ತೀರ್ಮಾನಗಳನ್ನು ಕಯ್ಗೊಳ್ಳಬಹುದು. 02. ರಾಷ್ಟಿçÃಯತ ಮತ್ತು ಅಭಿವೃದ್ಧಿ(13) ನಾನಾ ರಾಜರ ಆಡಳಿತ ಹಾಗೂ ಅನುಕೂಲಕ್ಕೆ ತಕ್ಕ ಹಾಗೆ ಭಿನ್ನವಾಗಿದ್ದ ಈ ಎಲ್ಲ ಭೂ ಪ್ರದೇಶಗಳನ್ನೂ ಒಟ್ಟುಗುಡಿಸಿ, ಸಮಗ್ರತೆಯ ರೂಪ ಕೊಟ್ಟಿದ್ದು ಬ್ರಿಟಿಷರು. ಅದಾಗಲೇ ಯುರೋಪ್ ಹಾಗೂ […]
ಋತ-01 ವಿಜ್ಞಾನ ಪ್ರಜಾಪ್ರಭುತ್ವ ಇಕಾಲಜಿ
01. ಪರಿಸರ ವ್ಯವಸ್ಥೆಯನ್ನು ಉಳಿಸಿ ಅಥವಾ ಅಳಿಸಿ- ಡಾ. ಸುಷ್ಮಾ ಕಶ್ಯಪ್(೦6) ಭಾರತದ ಅಭಿವೃದ್ಧಿ ಇತಿಹಾಸಕ್ಕೆ ಇದು ಸವಾಲಿ ಸಮಯ. ಏಕೆಂದರೆ, ಬೆಳವಣಿಗೆ ಎಂಬ ಅನಿವಾರ್ಯವು ನಮ್ಮ ಹಲವಾರು ಪರಿಸರ ನಿರ್ವಹಣೆ ಸಿದ್ಧಾಂತಗಳನ್ನು ಪ್ರಶ್ನಿಸುತ್ತಿದೆ. ದೇಶದಲ್ಲಿ ಪರಿಸರದ ಮೇಲೆ ಆಕ್ರಮಣ ನಡೆಯುತ್ತಿರುವ ಈ ಕಾಲಃಟ್ಟದಲ್ಲಿ ನಾವು ತೆಗೆದುಕೊಳ್ಳುವ ನಿರ್ಣಯಗಳು ಹಾಗೂ ಅವು ನೀಡುವ ಫಲಿತಾಂಶಗಳ ಆಧಾರದ ಮೇಲೆ ತಾಜಾ ಚಿಂತನೆ ಹಾಗೂ ಹೊಸ ದೃಷ್ಟಿಕೋನದ ಅಗತ್ಯವಿದೆ. 02. ಗೋವಾದ ದಾಖಲೆಗಳು ಪಶ್ಚಿಮ ಘಟ್ಟಗಳ ವಿನಾಶ- ಅಪೂರ್ವ […]
ಬೀಜ ಸ್ವಾತಂತ್ರö್ಯಕ್ಕೆ ಧಕ್ಕೆ ರೈತರ ಹಕ್ಕುಗಳಿಗೆ ಅಂಕುಶ.
2004ರಲ್ಲಿ ಬೀಜಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂಬ ಕಾಯಿಸಿ ಸಿದ್ಧಗೊಂಡಿತು. ೧೯೬೬ರ ಬೀಜ ಕಾಯಿದೆಯನ್ನು ವಜಾಗೊಳಿಸಿ ಅನುಷ್ಠಾನಗೊಂಡ ಈ ಕಾಯಿದೆಯ ಉದ್ದೇಶ-ನಕಲಿ ಬೀಜಗಳ ಮಾರಾಟಕ್ಕೆ ತಡೆ. ದೇಶದೆಲ್ಲೇಡೆಯ ಲಕ್ಷಾಂತರ ರೈತರು ಬೀಜದ ಸಂರಕ್ಷಣೆ ಹಾಗೂ ವಿನಿಮಯ ತಮ್ಮ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿ, ಪ್ರಾಧಾನಿಗೆ ಮನವಿ ಸಲ್ಲಿಸಿದರು -ಡಿಸೆಂಬರ್ 2019 ಸಂಚಿಕೆ-07 ಪುಟ-60
ಲಿಚ್ಚಿ ರೂಪದ ಮೃತ್ಯು?.
ಇತ್ತಿಚೆಗಷ್ಟೇ ಲಿಚ್ಚಿ ಹಣ್ಣು ಮಕ್ಕಳ ಸಾವಿಗೆ ಕಾರಣವಾಗಿ ಇನ್ನಿಲ್ಲದ ಸುದ್ದಿಯಾಗಿತ್ತು. ಮೆಥಿಲೀನ್ ಸೈಕ್ಲೋಪ್ರೊಪೈಲ್ ಗ್ಲೆöÊಸೀನ್(ಎಂಸಿಪಿಜಿ) ಏಕೆ ಲಿಚ್ಚಿ ರೂಪದಲ್ಲಿ ಕಾಡಿತ್ತು? ಬಿಹಾರದ ಮುಜಫ್ಫರ್‌ನಗರ, ವೈಶಾಲಿ, ಶೋಹರ್ ಮತ್ತು ಪೂರ್ವ ಚಂಪಾರಣ್‌ನಲ್ಲಿ ತೀವ್ರ ಎನ್ಸೆಫಾಲೈಟಿಸ್ ಸಿಂಡ್ರೋಮ್(ಎಇಎಸ್) ಪ್ರತಿ ವರ್ಷ ಬಡ ಮಕ್ಕಳ ಜೀವಹರಣ ಮಾಡುತ್ತಿದೆ. ಇದಕ್ಕೆ ಕಾರಣ ಗೊತ್ತಿದ್ದರೂ, ಎಲ್ಲರೂ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. -ಆಗಸ್ಟ್2018 ಸಂಚಿಕೆ-03 ಪುಟ-82
ಡಿಜಿಟಲ್ ಜಗತ್ತಿನ ಪರಿಸರ ಅಘಾತ. –
ಪರಿಸರ ಸಮಸ್ಯೆಗೆ ತಂತ್ರಜ್ಞಾನ ಪರಿಹಾgವಾಗಬಲ್ಲುದು ಎನ್ನುವದು ಅರ್ಧ ಸತ್ಯ. ಅದೇ ಹೊತ್ತಿನಲ್ಲೇ ತನ್ನದೇ ಆದ ಸಮಸ್ಯೆಯನ್ನೂ ಸೃಷ್ಟಿಸುತ್ತದೆ ಎನ್ನುವುದು ಕೂಡ ನಿಜ. ಇ-ತ್ಯಾಜ್ಯ ಅವುಗಳಲ್ಲಿ ಒಂದು. ಇನ್ನೊಂದು-ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸುವ ವಿದ್ಯುತ್. ಇಮೇಲ್ ಇಂದು ವ್ಯವಹಾರ-ವೈಯಕ್ತಿಕ ಬದುಕಿನ ಅನಿವರ‍್ಯ ಅಂಗವಾಗಿಬಿಟ್ಟಿದೆ. ಇದಕ್ಕೆಲ್ಲ ವಿದ್ಯತ್ ಬೇಕೇ ಬೇಕು. ಜೂನ್2018 ಸಂಚಿಕೆ-01 ಪುಟ-80
ಪಾಪದ ಪ್ಯಾಂಗೋನ್ ಸಹ ಕಣ್ಮರೆಯಾಗುತ್ತಿದೆ.
ಘೇಂಡಾಮೃಗ ಕೊಂಬು ಕಾಮಪ್ರಚೋದಕವಂತೆ. ಇದಕ್ಕಾಗಿ ಅವುಗಳ ಕೊಂಬು ಕತ್ತರಿಸಿ, ರಕ್ತಸ್ರಾವದಿಂದ ಒದ್ದಾಡಿ ಸಾಯುವಂತೆ ಮಾಎಲಾಗುಂತ್ತದೆ. ಜಗತ್ತಿನ ಅತ್ಯಂತ ಶ್ರೇಷ್ಠ ಗುಣಮಟ್ಟದ ಸುಗಂಧವನ್ನು ಹೊಂದಿರುವ ಕಸ್ತೂರಿ ಮೃಗಗಳ ಅದೇ ಸುಗಂಧ. ದಂತಕ್ಕಾಗಿ ಆನೆ, ಉಗುರು-ಚರ್ಮಕ್ಕಾಗಿ ಹುಲಿ ಹೀಗೆ ಮನುಷ್ಯನ ತೆಚಲು, ದುರಾಸೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಾಣಿಗಳು ಒಂದೆರಡಲ್ಲ.. – ಮಾರ್ಚ್2019 ಸಂಚಿಕೆ-10 ಪುಟ-82