ಸಮಾನತೆಯ ಚರಿತ್ರೆ – ಥಾಮಸ್ ಪಿಕೆಟ್ಟಿ. ಸಂಗ್ರಹಾನುವಾದ: ಟಿ ಎಸ್ ವೇಣುಗೋಪಾಲ್
ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಸಮಾನತೆ, ಅಸಮಾನತೆ ಹಾಗೂ ಬಡತನವನ್ನು ಕುರಿತು ಅಪಾರ ಅಧ್ಯಯನ ನಡೆಸಿರುವ ವಿದ್ವಾಂಸ. ಅವರು ಸಂಪತ್ತಿನ ಕೇಂದ್ರೀಕರಣ ಹಾಗೂ ಅಸಮಾನತೆ ಕುರಿತ ಅಧ್ಯಯನವನ್ನು ವಿಶ್ಲೇಷಣೆಗೆ ಸೀಮಿತಗೊಳಿಸದೆ, ಪರಿಹಾರವನ್ನೂ ಸೂಚಿಸುತ್ತಾರೆ. ಆದ್ದರಿಂದ, ಸಮಸಮಾಜದ ನಿರ್ಮಾಣದ ಕನಸನ್ನು ಇಟ್ಟುಕೊಂಡವರು ಈ ಚರ್ಚೆಯಲ್ಲಿ ಅವಶ್ಯವಾಗಿ ಪಾಲ್ಗೊಳ್ಳಬೇಕಿದೆ. ಅವರ ಪ್ರಕಾರ, ಎಲ್ಲರಿಗೂ ಶಿಕ್ಷಣ ದೊರೆಯಬೇಕು. ಕೆಳಸ್ತರದ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಹಾಗೂ ಅದಕ್ಕೆ ಸಂಪನ್ಮೂಲ ಕ್ರೋಡೀಕರಣ ನಮ್ಮ ಗುರಿ ಆಗಿರಬೇಕು. ಇಲ್ಲಿ ಹಣ ಮುಖ್ಯವಲ್ಲ. ಅದರ […]
ಸತ್ಯಜಿತ್ ರೇ-ವೈದೃಶ್ಯ, ಲಯ ಮತ್ತು ಗತಿ
ಜಗತ್ತಿನ ೧೦ ಅತಿ ಮುಖ್ಯ ಸಿನೆಮಾ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್ ರೇ ಕುರಿತ ಲೇಖನಗಳ ಗುಚ್ಚ. ರಾಘವನ್ ಚಕ್ರವರ್ತಿ, ಅರ್ಪಣ ಎಚ್. ಎಸ್.,ಎಂ.ಕೆ. ರಾಘವೇಂದ್ರ, ಪ್ರೊ.ಶಿವಲಿಂಗಸ್ವಾಮಿ, ಗೌತಮ್ ಜ್ಯೋತ್ಸ್ನ, ಬಾಬು ಸುಬ್ರಮಣಿಯನ್, ಪರಮೇಶ್ವರ ಗುರುಸ್ವಾಮಿ, ಸಿ.ಎಸ್. ವೆಂಕಿಟೇಶ್ವರನ್, ಸುಹ್ರಿದ್ ಶಂಕರ್ ಚಟ್ಟೋಪಾಧ್ಯಾಯ, ಆದಿತ್ಯ ಶ್ರೀಕೃಷ್ಣ, ಮೇರಿ ಸೇಟನ್, ಶ್ರುತಿ ತಲನೇರಿ, ಫಿರೋಜ್ ರಂಗೂನ್ವಾಲಾ, ಮುರುಳೀಧರ ಖಜಾನೆ, ಆಂಡ್ರ್ಯೂ ರಾಬಿನ್ಸನ್, ಚಿದಾನಂದ ದಾಸ್ ಗುಪ್ತಾ ಮತ್ತಿತರ ಲೇಖನಗಳನ್ನು ಒಳಗೊಂಡಿದೆ. ಸಂಚಿಕೆಯನ್ನು ಡಾ. ಹರೀಶ್ ಎಂ.ಜಿ. ಸಂಪಾದಿಸಿದ್ದಾರೆ. ಪುಟ ಸಂಖ್ಯೆ:120+4 […]
ಭಿನ್ನಮತ- ಟಿ.ಎಂ.ಕೃಷ್ಣ ಅವರ ಆಯ್ದ ಲೇಖನಗಳು
ಕಲಾವಿದ ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಎಂ.ಕೃಷ್ಣ ಕರ್ನಾಟಕ ಸಂಗೀತ ಕ್ಷೇತ್ರದ ಬಹುದೊಡ್ಡ ಹೆಸರು. ಸಂಗೀತದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಅಸಮಾನತೆಗಳ ನಿವಾರಣೆ ಬಗ್ಗೆಯೂ ಮಾತನ್ನಾಡುವ ಮತ್ತು ಕ್ರಿಯಾಶೀಲರಾಗಿರುವ ಅವರು ಸಂಗೀತವನ್ನು ಕಛೇರಿಗೆ ಸೀಮಿತವಾಗಿಸದೆ ಸಾರ್ವಜನಿಕ ಸ್ಥಳಗಳಿಗೂ ತಂದವರು. ಅವರ ವಿಚಾರಧಾರೆಗಳನ್ನುಳ್ಳ ಹೊತ್ತಗೆ. ಅಮರ ಹೊಳೆಗದ್ದೆ, ಉಂಡಾಡಿ ಸಂತೋಷ್, ಡಾ.ಆರ್. ನಾಗಭೂಷಣ, ಡಾ.ಕವಿತಾ, ಎಸ್.ಬಿ.ಪ್ರಸಾದ್,ಡಾ.ನೇತ್ರಾವತಿ, ಡಾ.ಸುಷ್ಮಾ ಕಶ್ಯಪ್,ಎಚ್.ಕೆ.ಶರತ್, ಶಶಾಂಕ್ ಎಸ್. ಆರ್.,ಡಾ.ಕಾವ್ಯಶ್ರೀ ಎಚ್., ಗೀತಾ ಬಣಕಾರ್, ಡಾ.ಸಂತೋಷ್ ನಾಯಕ್, ಡಾ.ಸವಿತಾ ಬಿ.ಸಿ. ಮತ್ತಿತರರು ಅನುವಾದಿಸಿದ ಲೇಖನಗಳ ಗುಚ್ಚ. ಪುಟ […]
ವೈವಿಧ್ಯದ ತೊಟ್ಟಿಲು
ಪಶ್ಚಿಮ ಘಟ್ಟ ಕುರಿತ ಲೇಖನಗಳ ಗುಚ್ಛ. ಪಾಂಡುರಂಗ ಹೆಗ್ಡೆ, ಸತೀಶ್ ಚಂದ್ರನ್ ನಾಯರ್, ಪ್ರೊ.ಮಾಧವ ಗಾಡ್ಗೀಳ್, ವಂದನಾ ಶಿವ, ಕ್ದಾಲಾಡ್ ಅಲ್ವಾರೆಸ್, ರಿತ್ವಿಕ್ ದತ್ತ, ರೋಮುಲಸ್ ವಿಟೇಕರ್, ನಿತಿನ್ ಡಿ ರೈ, ವಿಜು ಬಿ,ಕಮಲಾಕರ್ ಭಟ್ ಮತ್ತು ಕಿಶೋರ್ ಕುಮಾರ್ ಅವರ ಲೇಖನಗಳನ್ನು ಒಳಗೊಂಡ ಹೊತ್ತಗೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ಕಾಳಜಿ ಇರುವವರೆಲ್ಲರೂ ಓದಲೇಬೇಕಾದ ಹೊತ್ತಗೆ.
ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ: ಕಥನಗಳು ಮತ್ತು ಚಳವಳಿ-ಪ್ರೊ. ಮುಜಾಫರ್ ಅಸ್ಸಾದಿ
ಕರ್ನಾಟಕದಲ್ಲಿ ಸ್ತ್ರೀವಾದ ಚಳವಳಿ ಹಾಗೂ ಕಥನಗಳ ಚಾರಿತ್ರಿಕ ಹಾಗೂ ಸಾಮಾಜಿಕ ಚಿತ್ರಣ. ಸ್ತ್ರೀವಾದದ ನೆಲೆಗಳು , ಕರ್ನಾಟಕದಲ್ಲಿ ಸ್ತ್ರೀವಾದದ ಬೆಳವಣಿಗೆ; ಕಥನಗಳ ಇತಿಹಾಸ, ಉದಾರವಾದಿ ಸ್ತ್ರೀವಾದ, ಪರಿಸರ ಸ್ತ್ರೀವಾದ, ಗಾಂಧಿಯನ್ ಸ್ತ್ರೀವಾದ, ರೈತಾಪಿ ಮತ್ತು ಜನಪ್ರಿಯ ರೈತಾಪಿ ಸ್ತ್ರೀವಾದ, ಮುಸ್ಲಿಂ/ಇಸ್ಲಾಮಿಕ್ ಸ್ತ್ರೀವಾದ, ದಲಿತ ಸ್ತ್ರೀವಾದ, ಆದಿವಾಸಿ/ಮೂಲನಿವಾಸಿ ಸ್ತ್ರೀವಾದ, ರೈತ ಚಳವಳಿಯಲ್ಲಿ ಮಹಿಳೆ, ಪರಿಸರ ಚಳವಳಿ ಮತ್ತು ಮಹಿಳಾ ವಿಷಯ, ಆದಿವಾಸಿ ಹೋರಾಟ ಮತ್ತು ಮಹಿಳೆ, ನಾಗರೀಕ ಸಮಾಜ ಹಾಗೂ ಮಹಿಳಾ ಸಂಘಟನೆಗಳು ಮತ್ತು ಸ್ತ್ರೀವಾದ ಇತ್ಯಾದಿ ವಿವರಗಳಿರುವ ಹೊತ್ತಗೆ. ಪುಟ:124+4 […]
ವಿವೇಕ ಮತ್ತು ಒಮ್ಮತ- ಜೀನ್ ಡ್ರೀಜ್
ಡ್ರೀಜ್ ನರೇಗಾ ಯೋಜನೆ ಪರಿಕಲ್ಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಕಾಯಿದೆಯ ಕರಡು ಸಿದ್ಧಪಡಿಸಲು ನೆರವಾಗಿದ್ದರು. ಮಾಹಿತಿ ಹಕ್ಕು ಕಾಯಿದೆ ಹಾಗೂ ಆಹಾರ ಭದ್ರತೆ ಕಾಯಿದೆಗೂ ಅವರ ಕೊಡುಗೆ ಇದೆ. ರೈಲು ಮತ್ತು ಬಸ್‌ಗಳಲ್ಲಿ ಪ್ರಯಾಣಿಸುವ ಹಾಗೂ ಗ್ರಾಮಗಳ ಹಟ್ಟಿಗಳಲ್ಲಿ ತಂಗುವ ಸಂತ ಅರ್ಥಶಾಸ್ತ್ರಜ್ಞಾಅವರು. ಲೂವೆನ್‌ನಲ್ಲಿ ೧೯೫೯ರಲ್ಲಿ ಜನಿಸಿದ ಜೀನ್ ಅವರ ತಂದೆ ಜಾಕ್ ಡ್ರೀಜ್, ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞಾರಲ್ಲಿ ಒಬ್ಬರು ಮತ್ತು ಪ್ರಸಿದ್ಧ ಶಿಕ್ಷಕ. ಜಾಕ್ ಹಾಗೂ ಅವರ ಪತ್ನಿ ಸಾಮಾಜಿಕ ಕಳಕಳಿಯುಳ್ಳವರು. ಒಬ್ಬ ಸೋದರ ಎಡಪಂಥೀಯ […]
ಭಾರತದ ಆದಿವಾಸಿ ಕಥನ: ಅಸ್ಮಿತೆ ಮತ್ತು ಅಸಮಾನತೆ
01. ಭಾರತದಲ್ಲಿ ಆದಿವಾಸಿ ಅಸ್ಮಿತೆಯ ಪ್ರಶ್ನೆಗಳು- ಡಾ.ಮುಜಾಫರ್ ಅಸ್ಸಾದಿ(06) ಆದಿವಾಸಿಗಳ ಅಸ್ಮಿತೆಯಲ್ಲಿ ಮೊತ್ತ ಮೊದಲ ಪ್ರಶ್ನೆ ಆದಿವಾಸಿಗಳಲ್ಲಿ ಮತಾಂತರ, ಧರ್ಮ ಪರಿವರ್ತನೆಯ ಮೊದಲನೆಯ ಐಡೆಂಟಿಟಿ ಅಥವಾ ಅಸ್ಮಿತೆ ಪ್ರಧಾನವಾಗುತ್ತದೆ-ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಆದಿವಾಸಿ? ಆದಿವಾಸಿಗಳನ್ನು ರಾಜಕೀಯ ವ್ಯವಸ್ಥೆ ಹೇಗರ ಚಿತ್ರಿಸಿತ್ತು? ಒಂದು ಪ್ರಾಚೀನ ಬುಟಕಟ್ಟು ಜನಾಂಗವಾಗಿ ಗುರುತಿಸಿತ್ತೇ? ಅಥವಾ ಹಿಂದೂ ಧರ್ಮದ ಭಾಗವಾಗಿ ಗುರುತಿತ್ತೇ? ಈ ಗುರುತಿಸುವಿಕೆಯ ಸಂದರ್ಭದಲ್ಲಿ ಯಾವ ಯಾವ ಅಂಶಗಳು ಗಣನೆಗೆ ಬಂದವು. 02. ಬುಡಕಟ್ಟು ಅಧ್ಯಯನದ ಪರ್ಯಾಯ ಹಂಬಲಗಳು- ಡಾ.ಎ.ಎಸ್. ಪ್ರಭಾಕರ(24) […]
ಜಾಗತಿಕ ಪರಿಸರ ಚರಿತ್ರೆ-ರಾಮಚಂದ್ರ ಗುಹಾ. ಅನುವಾದ:ಮಾಧವ ಐತಾಳ್
01. ಹಸಿರಿನೆಡೆಗೆ(10) ಪರಿಸರ ಆಂದೋಲನ ೧೯೬೦ರ ಕೂಸು. ಇದು ಇನ್ನೂ ಕಾವು, ಚಲನೆ ಕಳೆದುಕೊಂಡಿಲ್ಲ. ಈ ಪ್ರತಿಭಟನೆಯ ದಶಕದ ಬೇರೆಲ್ಲ ಹೋರಾಟಗಳು- ಯುದ್ಧವಿರೋಧವಾದ, ಪ್ರತಿ ಸಂಸ್ಕಿçತಿ ಮತ್ತು ನಾಗರಿಕ ಹಕ್ಕು ಹೋರಾಟ-ಇವೆಲ್ಲ ಈಗ ಕಳೆದುಹೋಗಿವೆ ಇಲ್ಲವೇ ದಾರಿ ಕಾಣದಂತಾಗಿವೆ. ಹೀಗಿದ್ದರೂ, ಪರಿಸರ ಆಂದೋಲನ ಬೆಳೆಯುತ್ತಲೇ ಇದೆ, ನಿರ್ಗಮನವನ್ನು ತಡೆಹಿಡಿದಿದೆ, ನಾಶವಾಗುವುದುನ್ನು ಪ್ರತಿರೋಧಿಸಿದೆ. 02. ಮರಳಿ ಮಣ್ಣಿಗೆ(14) 18 ಮತ್ತು 19ನೇ ಶತಮಾನದಲ್ಲಿ ಇಂಗ್ಲೆಂಡ್ ಭೂ ರಚನೆ ಬದಲಾಯಿತು. ಕಲ್ಲಿದ್ದಲು ಗಣಿಗಳು, ಗಿರಿಣಿಗಳು, ರೈಲು ಹಳಿಗಳು, ಬಂದರುಗಳು ಹಾಗೂ […]
ಒಕ್ಕೂಟ ವ್ಯವಸ್ಥೆ
01.ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪುಕೂಟ ವ್ಯವಸ್ಥೆ(06) ನಡವಳಿಕೆಯ ನೆಲೆಯಲ್ಲಿ ನೋಡಿದಾಗ ಎರಡು ಬಗೆಯ ಒಪ್ಪುಕೂಟಗಳನ್ನು ಕಾಣಬಹುದು ೧.ಸಡಿಲ ಒಪ್ಪುಕೂಟ ೨. ಸದೃಢ ಒಪ್ಪುಕೂಟ ಸಡಿಲ ಒಪ್ಪುಕೂಟದಲ್ಲಿ ನಾಡುಗಳು ಕಾಲಕಾಲಕ್ಕೆ ತಮ್ಮ ಜನರ ಆಶಯಗಳಿಗೆ ತಕ್ಕಂತೆ ಕೂಟವನ್ನು ಸೇರುವ ಅಥವ ಬಿಡುವ ತೀರ್ಮಾನಗಳನ್ನು ಕಯ್ಗೊಳ್ಳಬಹುದು. 02. ರಾಷ್ಟ್ರೀಯತೆ ಮತ್ತು ಅಭಿವೃದ್ಧಿ(13) ನಾನಾ ರಾಜರ ಆಡಳಿತ ಹಾಗೂ ಅನುಕೂಲಕ್ಕೆ ತಕ್ಕ ಹಾಗೆ ಭಿನ್ನವಾಗಿದ್ದ ಈ ಎಲ್ಲ ಭೂ ಪ್ರದೇಶಗಳನ್ನೂ ಒಟ್ಟುಗುಡಿಸಿ, ಸಮಗ್ರತೆಯ ರೂಪ ಕೊಟ್ಟಿದ್ದು ಬ್ರಿಟಿಷರು. ಅದಾಗಲೇ ಯುರೋಪ್ ಹಾಗೂ […]