ಋತ-04 ಭಾರತದ ಆದಿವಾಸಿ ಕಥನ ಅಸ್ಮಿತೆ ಮತ್ತು ಅಸಮಾನತೆ

01. ಭಾರತದಲ್ಲಿ ಆದಿವಾಸಿ ಅಸ್ಮಿತೆಯ ಪ್ರಶ್ನೆಗಳು- ಡಾ.ಮುಜಾಪ್ಫರ್ ಅಸ್ಸಾದಿ(06)

ಆದಿವಾಸಿಗಳ ಅಸ್ಮಿತೆಯಲ್ಲಿ ಮೊತ್ತ ಮೊದಲ ಪ್ರಶ್ನೆ ಆದಿವಾಸಿಗಳಲ್ಲಿ ಮತಾಂತರ, ಧರ್ಮ ಪರಿವರ್ತನೆಯ ಮೊದಲನೆಯ ಐಡೆಂಟಿಟಿ ಅಥವಾ ಅಸ್ಮಿತೆ ಪ್ರಧಾನವಾಗುತ್ತದೆ-ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಆದಿವಾಸಿ? ಆದಿವಾಸಿಗಳನ್ನು ರಾಜಕೀಯ ವ್ಯವಸ್ಥೆ ಹೇಗರ ಚಿತ್ರಿಸಿತ್ತು? ಒಂದು ಪ್ರಾಚೀನ ಬುಟಕಟ್ಟು ಜನಾಂಗವಾಗಿ ಗುರುತಿಸಿತ್ತೇ? ಅಥವಾ ಹಿಂದೂ ಧರ್ಮದ ಭಾಗವಾಗಿ ಗುರುತಿತ್ತೇ? ಈ ಗುರುತಿಸುವಿಕೆಯ ಸಂದರ್ಭದಲ್ಲಿ ಯಾವ ಯಾವ ಅಂಶಗಳು ಗಣನೆಗೆ ಬಂದವು.

02. ಬುಡಕಟ್ಟು ಅಧ್ಯಯನದ ಪರ್ಯಾಯ ಹಂಬಲಗಳು- ಡಾ.ಎ.ಎಸ್. ಪ್ರಭಾಕರ(24)

ಕಳೆದ ಹಲವು ದಶಕಗಳಿಂದ ಸಬಾಲ್ಟçನ್ ಎಂಬ ಪದವನ್ನು ರಾಜಕೀಯ, ಚಾರಿತ್ರಿಕ ಮತ್ತು ಸಾಮಾಜಿಕ ಅಧ್ಯಯನಗಳ ಸಂದರ್ಭದಲ್ಲಿ ಬಳಸುಯ್ಯ ಬಂದಿದ್ದೇವೆ. ಆಂಟೋನೊಯೋ ಗ್ರಾಮ್ಷಿಯಿಂದ ಬಳಕೆಗೆ ಬಂದ ಸಬಾಲ್ಟçನ್ ಮತ್ತು ಹೆಜಿಮೊನಿ ಎಂಬ ಎರಡು ಪರಿಭಾಷೆಗಳು ಇಟಲಿಯ ನಿರ್ದಿಷ್ಟ ರಾಜಕೀಯಾರ್ಥಿಕ ಸಂದರ್ಭದಲ್ಲಿ ರೂಪಗೊಂಡAತವು.

03. ಭಾಷೆ, ಜೀವನಾನುಭವ ಮತ್ತು ಸಮುದಾಯಗಳ ಅಸ್ಮಿತೆ- ಡಾ. ಸುಷ್ಮಾ ಕಶ್ಯಪ್(40)

ಭಾಷೆ ಎಂಬುದು ಮನುಷ್ಯ ಸಮಾಜದ ಅದ್ಭುತ ಸೃಷ್ಟಿ. ಇದು ಒಂದು ಜನಾಂಗದ ಭಾವಕೋಶದ ಭಾಗವಾಗಿ ತಲೆತಲೆಮಾರಿನಿಂದ ಬೆಳೆಯುತ್ತ ಬರುತ್ತದೆ. ಇದರ ಉಗಮ ಹಾಗೂ ಬೆಳವಣಿಗೆ ಬಗ್ಗೆ ಹಲವು ಸಿದ್ಧಾಂತಗಳಿದ್ದರೂ, ಭಾಷೆಯು ಮಾನವ ಸಂವಹನದ ಪ್ರಮುಖ ಅಸ್ತçವಾಗಿ ಬಳಕೆಯಾಗುವುದನ್ನು ನಾವು ಗಮನಿಸುತ್ತೇವೆ.

04. ಅಭಿವೃದ್ಧಿಯ ಭರಾಟೆಯಲ್ಲಿ ಬದುಕು ಮೂರಾಬಟ್ಟೆ- ಡಾ.ಭಾರತೀದೇವಿ. ಪಿ(48)

ಭಾರತದ ಬುಡಕಟ್ಟು ಮಹಿಳೆಯರ ಸ್ಥಿಗತಿ ಹೇಗಿದೆ ಎಂದು ಪ್ರಶ್ನಿಸಿದರೆ, ಅವರ ಸ್ವಾಯತ್ತ ಬದುಕು ಅಭಿವೃದ್ಧಿಯ ಭರಾಟೆಯಲ್ಲಿ ಮೂರಾಬಟ್ಟೆಯಾಯಿತು ಎನ್ನಬೇಕಾಗುತ್ತದೆ. ದೇಶದ ಒಟ್ಟು ಜನಸಂಖ್ಯೆಯ ಶೇ.೮.೨ರಷ್ಟು ಬುಡಕಟ್ಟು ಜನರಿದ್ದಾರೆ. ಮಹಿಳೆಯರ ಸಂಖ್ಯೆ ಅರ್ಧದಷ್ಟು ಇದೆ. ಮಧ್ಯ ಭಾರತ ಮತ್ತು ಈಶಾನ್ಯ ಭಾರತದಲ್ಲಿ ದೇಶದ ಬಹುತೇಕ ಬುಡಕಟ್ಟು ಅಮುದಾಯಗಳು ವಾಸವಾಗಿವೆ.

05. ಸಾಮಾಜಿಕ ಕಳಂಕ ಮತ್ತು ಅನಾಥಪ್ರಜ್ಞೆ ವಿರುದ್ಧ ಸಂಘರ್ಷ- ಸಂತೋಷ್ ನಾಯಕ್ ಆರ್(54)

ಭಾರತದಲ್ಲಿ ಸುಮಾರು ನಾಲ್ಕು ನೂರು ವಿವಿಧ ಆದಿಸಿವಾಸಿ ಪಂಗಡಗಳಿವೆ. ಇವುಗಳನ್ನು ಪ್ರಸ್ತುತ ಬುಡಕಟ್ಟುಗಳನ್ನು, ಅನುಸೂಚಿತ ಪಂಗಡಗಳೆAದೂ ಕರೆಯುತ್ತಿದ್ದರೂ, ಅನೇಕ ಅಮುದಾಯಗಳು ಅನಾದಿ ಕಾಲದಿಂದ ತಮ್ಮ ವಾಸಸ್ಥಳಗಳ ಮೂಲನಿವಾಸಿಗಳಾಗಿದ್ದು ತಮ್ಮನ್ನು ಆದಿವಾಸಿಗಳೆಂದೇ ಕರೆದುಕೊಳ್ಳಲು ಇಚ್ಚಿಸುತ್ತವೇ.

06. ಆದಿವಾಸಿ ಸಮುದಾಯಗಳ ಶಕ್ಷಣ- ಪಿ. ವೀರಭದ್ರನಾಯಗಕ(ಬದ್ರಿ)(64)

ಶಿಕ್ಷಣ ಎಲ್ಲರಅಗತ್ಯ ಆದರೆ, ದೇಶದ ಮುಖ್ಯವಾಹಿನಿ ಶಿಕ್ಷಣದಲ್ಲೇ ಗಂಭೀರ ಸಮಸ್ಯೆಗಳಿವೆ. ಆದಿವಾಸಿಗಳ ಪ್ರಸ್ತುದ ಸ್ಥಿತಿ, ಅವರು ಎದುರಿಸುತ್ತಿರುವ ಅಹಿತಕರ ಬಿಕ್ಕಟ್ಟುಗಳು, ಅವಶ್ಯಕತೆ ಮತ್ತು ಬೇಡಿಕೆಯನ್ನು ಮುಖ್ಯವಾಹಿನಿ ಶಿಕ್ಷಣ ಗುರುತಿಸಿಲ್ಲ. ಅಂಚಿನಲ್ಲಿರುವ ಹಾಗೂ ಅವಕಾ±ವಂಚಿತ ಬುಡಕಟ್ಟು ಮಕ್ಕಳಿಗೆ ಕಡಿಮೆ ವೆಚ್ಚದ ಕಳಪೆ ಹಾಗೂ ಉದಾಸೀನ ಶಿಕ್ಷಣ ನೀಡಲಾಗುತ್ತಿದೆ.

07. ಅನುಸೂಚಿತ ಪಂಗಟಗಳ ಶಿಕ್ಷಣ ಮತ್ತು ಅಭಿವೃದ್ಧಿ- ಶ್ಯಾಮ್ ಎನ್. ಕಶ್ಯಪ್(72)

ಭಾರತ ವಿವಿಧ ಬಗೆಯ ಜನಾಂಗೀಯ ಗುಂಪುಗಳು, ವಿಶಿಷ್ಟ ಸಂಪ್ರದಾಯಗಳು, ಆಚರಣೆಗಳು ಮತ್ತು ಭಾಷಾ ವೈವಿಧ್ಯಗಳ ಆಗರ. ಈ ವಿವಿಧತೆಯೇ ದೇಶದ ಹೆಗ್ಗುರುತಾದರೂ, ಸಮಗ್ರ ಅಭಿವೃದ್ಧಿಯ ನಿರ್ವಹಣೆಗೆ ಇದು ಕೆಲವೊಮ್ಮೆ ತಿಡಕಾಗಿಯೂ ಕೆಲಸ ಮಾಡಿದೆ. ಎಲ್ಲಾ ವರ್ಗಗಳ ಸಾಮಾಜಿಕ-ಆರ್ಥಿಕ ಬೆಳವಣಿಗೆ, ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದಂತಹ ಗಹನ ವಿಚಾರಗಳಲ್ಲಿ ಅಸಮಾನತೆ ದೇಶದಲ್ಲಿ ಎದ್ದು ಕಾಣುತ್ತದೆ.

08. ಭಾರತದ ಬುಟಕಟ್ಟು ಸಮುದಾಯಗಳು: ಒಂದು ಪರಿಚಯ- ತೇಜಸ್ವಿನಿ(78)

ಭಾರತ ಬಹಳ ವಿಸ್ತಾರವಾದ ದೇಶ. ವೈವಿಧ್ಯಮಯ ನೈಸರ್ಗಿಕ ಸಂಪನ್ಮೂಲ ಮಾತ್ರವಲ್ಲದೆ, ವಿಶಿಷ್ಟ ಮಾನವ ಸಂಪತ್ತನ್ನೂ ಹೊಂದಿದೆ. ಅತಿ ಹೆಚ್ಚು ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ರಾಷ್ಟçವೂ ಹೌದು. ಭಾರತೀಯ ಬುಡಕಟ್ಟುಗಳು ಸಾಂಸ್ಕçತಿಕವಾಗಿ ವಿಶಿಷ್ಟಗುಣವುಳ್ಳವು. ಇಲ್ಲಿ ಇಂದಿಗೂ ಆಹಾರ ಸಂಗ್ರಹಣೆ ಹಂತದಲ್ಲಿ ಬದುಕು ನಡೆಸುತ್ತಿರುವ ಅನೇಕ ಬುಡಕಟ್ಟು ಸಮುದಾಯಗಳು ಇವೆ.

09. ಬುಟಕಟ್ಟು ಸಮುದಾಯಗಳಲ್ಲಿ ನೃತ್ಯ- ಜಯಶ್ರೀ ಎಸ್ ಎಲ್(84)

ಸಹಸ್ರಮಾನಗಳಷ್ಟು ಹಳೆಯದಾದ ಬುಡಕಟ್ಟು ಸಮಾಜಗಳು ತಮ್ಮದೇ ಆದ ವಿಶಷ್ಟ ಭಾಷೆ, ಸಂಪ್ರದಾಯ, ಪದ್ಧತಿ ಹಾಗೂ ಸಾಂಸ್ಕçತಿಕ ಆಚರಣೆಗಳನ್ನು ನಡೆಸಿಕೊಳ್ಳತ್ತ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕçತಿಕ ಸಮಲತೆಯನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ಅರಣ್ಯ ಮತ್ತು ಪರ್ವತ ಪ್ರದೇಶಗಳು ಈ ಸಮುದಾಯಗಳ ಜೊತೆ ಗಾಢ ಸಂಬAಧ ಹೊಂದಿರುಚುದು ಮಾತ್ರವಲ್ಲದೇ, ಅವರ ಜೀವನಶೈಲಿ, ಸಾಮಾಜಿಕ, ಆರ್ಥಿಕ ಮತ್ತು ಸಂಸ್ಕçತಿ ಮೇಲೆ ತೀವ್ರ ಪ್ರಭಾವ ಬೀರುತ್ತವೆ.

10. ಬುಟಕಟ್ಟು ಸಂಸ್ಕçತಿಯಲ್ಲಿ ಕಲೆ- ದಿನಮಣಿ ಬಿ.ಎಸ್(88)

ಒಂದು ಸಮಾಜದ ವಾಸ್ತವಿಕ ಅಧ್ಯಯನ ಎನ್ನುವದು ಆ ಸಮಾಜದ ಸಾಂಸ್ಕçತಿಕ ಅಧ್ಯಯನ ಮತ್ತು ಸಂಸ್ಕçತಿಯು ವ್ಯಕ್ತಿ ವ್ಯಕ್ತಿಗಳ ನಡುವಿನ ಸಂವಹನದ ಮೂಲಕ ಸಂಸ್ಕçತಿ ಹೊರೊಹೊಮ್ಮುತ್ತದೆ. ಆ ಮೂಲಕವೇ ವ್ಯಕ್ತಿಯು ಸಮಾಜ ಜೀವಿಯಾಗಿ ರೋಪಗೊಳ್ಳುತ್ತಾನೆ. ಯಾವುದೇ ಮಾನವ ಸಂಮೂಹವಾಗಲಿ, ಅದು ತನ್ನ ಉಳಿವಿಗಾಗಿ ಅನನ್ಯತೆಯನ್ನು ಹೊಂದಿರಬೇಕು.

11. ಅಭಿಶವೃದ್ಧಿಗೆ ನೆಲಹಾಸಾದವರು- ಮಾಧವ ಐತಾಳ್(೧೦೩)

ಸಮಕಾಲೀನ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಸವಾಲು-ಅಸಮಾನತೆ. ಕಳೆದ ೩೦ ವರ್ಷದಲ್ಲಿ ಆರ್ಥಿಕ ಅಸಮಾನತೆ, ಅಂದರೆ, ಬಡವರು ಹಾಗೂ ಶ್ರೀಮಂತರ ನಡುವುನ ಕಂದರ ಎಲ್ಲೆಡೆ ಹೆಚ್ಚಿದೆ. ಆಕ್ಸ್ಫಾಮ್ ವರದಿ ಪ್ರಕಾರ, ಶೇ.೧ರಷ್ಟು ಅತಿ ಶ್ರೀಮಂತರು ಉಳಿದ ಎಲ್ಲರಿಗಿಂತ ಅಧಿಕ ಐಶ್ರ‍್ಯ ಹೊಂದಿದ್ದಾರೆ.

ಬೆಲೆ:- 120 ಪುಟ ಸಂಖ್ಯೆ:- 124+4

 

 

Journalist,Translator,avid bibliophile

Leave a Reply

Your email address will not be published. Required fields are marked *

Back To Top