Category: ಆರೋಗ್ಯ-ಯೋಗಕ್ಷೇಮ-ವೈದ್ಯಕೀಯ

ತಾಯಂದಿರ ಸಾವು: ಈ ಅನ್ಯಾಯಕ್ಕೆ ಸರ್ಕಾರಗಳೇ ಹೊಣೆ

ಬಳ್ಳಾರಿಯ ಆಸ್ಪತ್ರೆಯಲ್ಲಿ ರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣದಿಂದ ಆರು ತಾಯಂದಿರು ಮೃತಪಟ್ಟ ಘಟನೆ ಬಳಿಕ ಚಿಕ್ಕಮಗಳೂರು ಜಿಲ್ಲೆ ಹಾಗೂ ಬೆಂಗಳೂರಿನ ಪೀಣ್ಯದಲ್ಲಿ ಮತ್ತಿಬ್ಬರು ತಾಯಂದಿರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯ ಸಾವಿಗೆ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ಆದರೆ, ಸಂಬಂಧಿಸಿದವರು ಆರೋಪ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಡೆದಿರುವ ತಾಯಂದಿರ ಸಾವಿನ ಆಡಿಟ್‌ಗೆ ಸರ್ಕಾರ ಆದೇಶಿಸಿದೆ. ಮೃತರಲ್ಲಿ ಇಬ್ಬರಲ್ಲಿ ಇಲಿ ಜ್ವರ ಪತ್ತೆಯಾಗಿರುವುದರಿಂದ, ಚಿಕಿತ್ಸಾ ತನಿಖೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇವು ಅನ್ಯಾಯದ ಸಾವುಗಳು. […]

ಉಣ್ಣುವ ಅನ್ನ ವಿಷವಾದರೆ, ಕಾಯುವವರು ಯಾರು?

ಮಕ್ಕಳು ಸೇವಿಸುವ ಏಕದಳ ಧಾನ್ಯ(ಸಿರಿಯಲ್‌) ಆಹಾರದಲ್ಲಿ ಅಧಿಕ ಸಕ್ಕರೆ, ಔಷಧಗಳಲ್ಲಿ ವಿಷ ವಸ್ತು, ಸಂಬಾರ ಪದಾರ್ಥದಲ್ಲಿ ಕೀಟನಾಶಕ, ಪೊಟ್ಟಣ ಕಟ್ಟಿದ ಆಹಾರದಲ್ಲಿ ಜಿರಲೆ…… ಇತ್ಯಾದಿ ಸರ್ವೇಸಾಮಾನ್ಯವಾಗಿದೆ. ಆಹಾರ ಸುರಕ್ಷತೆ ಯಲ್ಲಿ ದೇಶ ಏಕೆ ವಿಫಲವಾಗುತ್ತಿದೆ? ಮಕ್ಕಳು-ಯುವಜನರನ್ನು ರೋಗಿಗಳನ್ನಾಗಿಸುವ ಜಂಕ್‌ ಆಹಾರ ಬಳಕೆಯನ್ನು ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಇದಕ್ಕೆ ದುರ್ಬಲ ನಿಯಂತ್ರಣ ವ್ಯವಸ್ಥೆ, ಅವ್ಯವಸ್ಥಿತ ಮೇಲುಸ್ತುವಾರಿ, ಸಂಬಂಧಿ ಸಿದ ಸಂಸ್ಥೆಗಳ ವೈಫಲ್ಯ, ಬಳಕೆದಾರರಲ್ಲಿ ಅರಿವಿನ ಕೊರತೆ ಹಾಗೂ ಕಾರ್ಪೊರೇಟ್‌ ಸಂಸ್ಥೆಗಳ ದುರಾಸೆ ಸೇರಿದಂತೆ ಹಲವು ಕಾರಣಗಳಿವೆ. ಆಹಾರದೊಟ್ಟಿಗೆ ರಾಜಕೀಯ […]

ಎಲ್ಲರಿಗೂ ಆರೋಗ್ಯ ಎಂಬ ಕೈಗೆಟುಕದ ಮರೀಚಿಕೆ

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ)ಯನ್ನು 70 ವರ್ಷ ದಾಟಿದ ಎಲ್ಲರಿಗೂ ವಿಸ್ತರಿಸಲಾಗುತ್ತದೆ ಎಂದು ಒಕ್ಕೂಟ ಸರ್ಕಾರ ಇತ್ತೀಚೆಗೆ ಹೇಳಿದೆ. ವಾರ್ಷಿಕ 5 ಲಕ್ಷ ರೂ. ನಗದುರಹಿತ ಆರೋಗ್ಯ ಸೇವೆ ಕಲ್ಪಿಸುವ ಈ ಯೋಜನೆಯು ಖಾಸಗಿ ವಿಮೆ ಕಂಪನಿಗಳ ಆರೋಗ್ಯ ಪಾಲಿಸಿದಾರರು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಸಂಘಟನೆ(ಇಎಸ್‌ಐಸಿ)ಯಡಿ ಪ್ರಯೋಜನ ಪಡೆಯುತ್ತಿರುವವರಿಗೂ ಅನ್ವಯವಾಗಲಿದೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(ಸಿಜಿಎಚ್‌ಎಸ್)ಯಡಿ ಇರುವವರು ಅದರಲ್ಲೇ ಮುಂದುವರಿಯಬಹುದು ಇಲ್ಲವೇ ಪಿಎಂಎಜೆವೈ ಆಯ್ಕೆ ಮಾಡಿಕೊಳ್ಳಬಹುದು. ದೇಶದ ಸಮಸ್ತರಿಗೂ 2030ರೊಳಗೆ ಸಾರ್ವತ್ರಿಕ ಆರೋಗ್ಯ ಸುರಕ್ಷೆ(ಯುಎಚ್‌ಸಿ) […]

ಪೇಟೆಂಟ್‌: ದಕ್ಷಿಣ ಆಫ್ರಿಕ ತೋರಿಸಿದ ಮಾರ್ಗ

ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ಔಷಧ ಕಂಪನಿ ಜಾನ್ಸನ್‌ ಆಂಡ್‌ ಜಾನ್ಸನ್(ಜೆ ಆಂಡ್‌ ಜೆ) ಮತ್ತು ಅದರ ಅಂಗಸಂಸ್ಥೆ ಜಾನ್ಸನ್‌ ಫಾರ್ಮಾಸ್ಯೂಟಿಕಾದ ಉತ್ಪನ್ನವಾದ ಔಷಧ ಪ್ರತಿರೋಧವಿರುವ ಕ್ಷಯಕ್ಕೆ ಬಳಸುವ ಮುಖ್ಯ ಔಷಧ ಬೆಡಾಕ್ವಿಲಿನ್‌ನ ಎವರ್‌ಗ್ರೀನಿಂಗ್(ಅಂದರೆ, ಔಷಧದ ಸ್ವಲ್ಪ ಮಟ್ಟಿನ, ನಾವೀನ್ಯತೆ ಅಗತ್ಯವಿಲ್ಲದ ಬದಲಾವಣೆ ಮೂಲಕ ಪೇಟೆಂಟ್ ಅವಧಿ ವಿಸ್ತರಿಸುವಿಕೆ) ವಿರುದ್ಧದ ಚರಿತ್ರಾರ್ಹ ಗೆಲುವನ್ನು ಸಂಭ್ರಮಿಸ ಲಾಯಿತು. ರೋಗಿಗಳ ಕಾರ್ಯಜಾಲಗಳು ದಾಖಲಿಸಿದ ದೂರು ಆಧರಿಸಿ, ಬೆಡಾಕ್ವಿಲಿನ್‌ನ ಮಕ್ಕಳಿಗೆ ನೀಡುವ ಸೂತ್ರಕ್ಕೆ ಪೇಟೆಂಟ್‌ ನಿರಾಕರಿಸಲಾಯಿತು. ಒಂದುವೇಳೆ ಪೇಟೆಂಟ್‌ ಲಭ್ಯವಾಗಿದ್ದಲ್ಲಿ, ಕಂಪನಿಗೆ […]

ಕೋವಿಡ್ ಲಸಿಕೆ ಕೊರತೆಗೆ ರಾಜ್ಯಗಳು ಹೊಣೆ: ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದ ಕೋವಿಡ್ ಸಲಹೆಗಾರ ವಿ.ಕೆ.ಪಾಲ್, ಲಸಿಕೆ ಕೊರತೆಗೆ ರಾಜ್ಯ ಸರ್ಕಾರಗಳೇ ಹೊಣೆ ಎನ್ನುವ ಮೂಲಕ ಕೈ ತೊಳೆದುಕೊಂಡಿದ್ದಾರೆ. ರಾಜ್ಯ ಹಾಗೂ ದೇಶದೆಲ್ಲೆಡೆ ಲಸಿಕೆ ಕೊರತೆ ತೀವ್ರವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆ ಕೊರತೆ ಇದ್ದು, ಖಾಸಗಿ ಆಸ್ಪತ್ರೆಗಳು ಡೋಸ್ ಒಂದಕ್ಕೆ 800 ರಿಂದ 1400 ರೂ.ವರೆಗೆ ತೆಗೆದುಕೊಳ್ಳುತ್ತಿವೆ. ಜತೆಗೆ, ಸೇವಾ ಶುಲ್ಕವನ್ನು 100 ರೂ.ನಿಂದ 300 ರೂ.ಗೆ ಹೆಚ್ಚಿಸಿಕೊಂಡಿವೆ. ರಾಜ್ಯ ಸರ್ಕಾರಗಳು ನೇರವಾಗಿ ಅಂತಾರಾಷ್ಟ್ರೀಯ ಟೆಂಡರ್ ಕರೆದು, ಲಸಿಕೆ ಪಡೆದುಕೊಳ್ಳಲು ಲಸಿಕೆಗೆ ಸಂಬಂಧಿಸಿದಂತೆ ಸುಪ್ರೀಂ/ಹೈ ಕೋರ್ಟ್ ಸರ್ಕಾರಗಳಿಗೆ […]

ಕೋವಿಡ್ ಲಸಿಕೆ ಪಡೆಯಲು ಸಕಾರಾತ್ಮಕ ಸ್ಪಂದನೆ; ಮಾರ್ಚ್ ಅಂತ್ಯದವರೆಗೂ ನೊಂದಣಿಯಾದ ಸ್ಲಾಟ್ ಗಳು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 60 ವರ್ಷ ಮೇಲಿನವರು, ಬೇರೆ ಕಾಯಿಲೆ ಹೊಂದಿರುವ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರೆದಿದೆ. ಕೋವಿಡ್ ಲಸಿಕೆ ಪಡೆಯಲು ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಹೌದು.. ಕೋವಿನ್ ಪೋರ್ಟಲ್‌ನಲ್ಲಿ ಲಕ್ಷಾಂತರ ಮಂದಿ ಕೋವಿಡ್ ಲಸಿಕೆಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಪರಿಣಾಮ ಮಾರ್ಚ್ ಅಂತ್ಯದ ವರೆಗೂ ಸ್ಲಾಟ್ ಗಳು ಬುಕ್ ಆಗಿವೆ. ಏಪ್ರಿಲ್ ನಲ್ಲಷ್ಟೇ ಸ್ಲಾಟ್ ಗಳು ಖಾಲಿ ಇವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೊಂದಾಯಿಸಿಕೊಂಡು ಹತ್ತಿರದ […]

ಏರುಗತಿಯಲ್ಲಿದ್ದ ಕೋವಿಡ್‌ ಪ್ರಕರಣಗಳಲ್ಲಿ ಅಲ್ಪ ಇಳಿಕೆ

ದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಸತತ ಏರಿಕೆ ಕಾಣುತ್ತಿದ್ದ ಕೋವಿಡ್‌ ಪ್ರಕರಣಗಳು ಇಂದು ಅಲ್ಪ ಪ್ರಮಾಣದಲ್ಲಿ ಕುಸಿದಿವೆ. ಶುಕ್ರವಾರ 16,577 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಶನಿವಾರ ಬೆಳಗ್ಗೆ 16,488 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಏರುಗತಿಯಲ್ಲಿದ್ದ ಕೋವಿಡ್‌ ಕೊಂಚ ಇಳಿದಂತಾಗಿದೆ. ಇನ್ನು, ‘ಈ 24 ಗಂಟೆಗಳ ಅವಧಿಯಲ್ಲಿ 113 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ. 12,771 ಮಂದಿ ಗುಣಮುಖರಾಗಿದ್ದಾರೆ,’ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ. ದೇಶದಲ್ಲಿ ಒಟ್ಟಾರೆ 1,10,79,979 ಕೋವಿಡ್‌ ಪ್ರಕರಣಗಳು ದೃಢವಾಗಿವೆ. 1,07,63,451 ಮಂದಿ […]

ಕೋವಿಡ್ ಗಂಡಸರಿಗೆ ಹೆಚ್ಚು ಮಾರಕವೇಕೆ?

ಕೊಳ್ಳೇಗಾಲ ಶರ್ಮ ಬಹುಶಃ ಬೇರೆಲ್ಲಾ ವಿಷಯದಲ್ಲಿಯೂ ಮಹಿಳೆಯರನ್ನು ಅಬಲರೆನ್ನಬಹುದು. ಅದರೆ ಕೋವಿಡ್‌ ವಿಷಯದಲ್ಲಿ ಬಂದಾಗ ಮಹಿಳೆಯರೇ ಸಬಲರು. ಆ ಸೋಂಕಿನಿಂದ ಗೆದ್ದು ಬರುವವರಲ್ಲಿ ಅವರೇ ಹೆಚ್ಚಂತೆ. ಇದು ಅವರಿಗೆ ನಿಸರ್ಗ ಇತ್ತ ವರವಿಬಹುದು. ಏಕೆಂದರೆ ಗಂಡಸರು ಹಾಗೂ ಹೆಂಗಸರ ರೋಗಪ್ರತಿರೋಧಕತೆಯಲ್ಲಿ ನಿರ್ಣಾಯಕವಾದ ವ್ಯತ್ಯಾಸಗಳಿವೆ ಎಂಬ ಸುದ್ದಿಯನ್ನು ಮೊನ್ನೆ ಸೈನ್ಸ್‌ ಪತ್ರಿಕೆ ವರದಿ ಮಾಡಿದೆ. ರೋಗಪ್ರತಿರೋಧಕತೆಯಲ್ಲಿ ಹೀಗೊಂದು ಲಿಂಗಭೇದ ಸ್ಪಷ್ಟವಾಗಿದೆ ಎಂದು ಅಮೆರಿಕೆಯ ಯೇಲ್‌ ವಿಶ್ವವಿದ್ಯಾನಿಲಯದ ವೈದ್ಯ ವಿಜ್ಞಾನಿಗಳಾದ ಅಕಿಕೋ ಇವಸಾಕಿ ಮತ್ತು ತಕೆಹಿರೊ ತಕಹಾಶಿ ವರದಿ ಮಾಡಿದ್ದಾರೆ. […]

Back To Top